ಸುಳ್ಳು ಹಾಗೂ ದ್ವೇಷ ಹರಡುತ್ತಿದೆ ಎಂದು ನಿರಂತರವಾಗಿ ಆರೋಪಿಸಲ್ಪಡುತ್ತಿರುವ ಹಿಂದುತ್ವದ ವೆಬ್‌ಸೈಟ್ ಒಪಿ ಇಂಡಿಯಾದಲ್ಲಿ ತನ್ನ ಜಾಹೀರಾತುಗಳನ್ನು ನಿಲ್ಲಿಸುವುದಾಗಿ ಖ್ಯಾತ ಚಲನಚಿತ್ರ ಸ್ಟ್ರೀಮಿಂಗ್ ಸೇವೆಯಾದ ಮುಬಿ (MUBI) ಸೇರಿದಂತೆ ಇತರ ಸಂಸ್ಥೆಗಳು ಪ್ರಕಟಿಸಿವೆ.
“ಹಲಾಲ್ ಕಾನೂಬದ್ದ ಎಂದಾದರೆ, ಮುಸ್ಲಿಮರನ್ನು ನೇಮಿಸಿಕೊಳ್ಳುವುದಿಲ್ಲ ಎಂದು ಕೆಲಸ ನೀಡುವ ಸಂಸ್ಥೆಗಳು ಘೋಷಿಸುವ ಹಕ್ಕು ಹೊಂದಿವೆ” ಎಂಬ ಲೇಖನವೊಂದನ್ನು ಒಪಿಇಂಡಿಯಾ ಪ್ರಕಟಿಸಿತ್ತು. ಇಂಗ್ಲೆಂಡ್ ಮೂಲದ ‘ಸ್ಟಾಪ್ ಫಂಡಿಂಗ್ ಹೇಟ್’ ಅಭಿಯಾನವು ಈ ಬಗ್ಗೆ ಗಮನ ಸೆಳೆದ ಕಾರಣ ಇತರ ಹಲವು ಬ್ರಾಂಡ್‌ಗಳು ಕೂಡಾ ತಮ್ಮ ಜಾಹೀರಾತುಗಳನ್ನು ಒಪಿ ಇಂಡಿಯಾ ವೆಬ್‌ಸೈಟ್‌ನಿಂದ ಕೈಬಿಡುವುದಾಗಿ ಹೇಳಿದೆ.
Can you help alert more brands whose ads are on this toxic OpIndia article? 1. Go to the article: https://t.co/4ryRo14aht 2. Take a screenshot showing the advertiser 3. Politely tweet the advertiser urging them to add OpIndia to their exclusion list – cc-ing @StopFundingHate pic.twitter.com/b5Ou3Nnre4
— Stop Funding Hate (@StopFundingHate) May 29, 2020
ಸ್ಟಾಪ್ ಫಂಡಿಂಗ್ ಹೇಟ್ ಅಭಿಯಾನಕ್ಕೆ “ತನ್ನ ಜಾಹೀರಾತುಗಳು ಸೇರಿದಂತೆ ಹಲವು ಕಂಪನಿಗಳ ಹಲವು ಜಾಹಿರಾತುಗಳು ಒಪಿಇಂಡಿಯಾ ವೆಬ್‌ಸೈಟ್‌ನಲ್ಲಿ ಗೋಚರಿಸುತ್ತಿವೆ” ಎಂದು ಎಚ್ಚರಿಸಿದ್ದ ಕಂಪನಿಗಳಲ್ಲಿ ಮುಬಿ ಕೂಡ ಒಂದು. ಕಂಪನಿಯು “ಇದು ಮತ್ತೆ ಸಂಭವಿಸುವುದಿಲ್ಲ ಎಂದು ಖಚಿತಪಡಿಸುತ್ತದೆ” ಎಂದು ಟ್ವೀಟ್ ಮಾಡಿದೆ.
“ಜಾಹೀರಾತು ಚಟುವಟಿಕೆಗಳಿಗಾಗಿ ನಮ್ಮ ನಿರ್ಬಂಧಿತ ಸೈಟ್‌ಗಳ ಪಟ್ಟಿಗೆ ನಾವು ತಕ್ಷಣ ಒಪಿ ಇಂಡಿಯಾವನ್ನು ಸೇರಿಸಿದ್ದೇವೆ” ಎಂದು ಮುಬಿ ಸಂವಹನ ನಿರ್ದೇಶಕ ಸೋಫಿ ರತಿಗನ್ ಹೇಳಿದ್ದಾರೆ.
ಆನ್‌ಲೈನ್ ಜಾಹೀರಾತುಗಳು ಸಾಮಾನ್ಯವಾಗಿ ನೆಟ್‌ವರ್ಕ್‌ಗಳು ಮತ್ತು ಮಾರುಕಟ್ಟೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಪರಿಣಾಮವಾಗಿ, ಜಾಹೀರಾತುಗಳನ್ನು ಹೆಚ್ಚಾಗಿ ವೆಬ್‌ಸೈಟ್‌ಗಳಲ್ಲಿ ಸ್ವಯಂಚಾಲಿತವಾಗಿ ಇರಿಸಿ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಾಗುತ್ತದೆ. ಆದಾಗ್ಯೂ, ಬ್ರಾಂಡ್‌ಗಳು ತಮ್ಮ ಜಾಹೀರಾತುಗಳು ಕೆಲವು ವೆಬ್‌ಸೈಟ್‌ಗಳಲ್ಲಿ ಗೋಚರಿಸಬಾರದು ಎಂದು ಕಪ್ಪುಪಟ್ಟಿಗೆ ಸೇರಿಸುವ ಆಯ್ಕೆಯನ್ನು ಹೊಂದಿರುತ್ತವೆ.
ಮುಬಿ ಜೊತೆಗೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸೇಡ್ ಬ್ಯುಸಿನೆಸ್ ಸ್ಕೂಲ್ ಹಾಗೂ ಆನ್‌ಲೈನ್ ಜಾಹೀರಾತು ನೆಟ್‌ವರ್ಕ್‌ನ ರುಬಿಕಾನ್ ಪ್ರಾಜೆಕ್ಟ್ ಸೇರಿದಂತೆ ಹಲವಾರು ಸಂಸ್ಥೆಗಳು ಒಪಿಇಂಡಿಯಾದಿಂದ ಕೈಬಿಡುವುದಾಗಿ ತಿಳಿಸಿವೆ.
Hi @stopfundinghate, thank you very much for alerting us. We pride ourselves on being one of the most diverse and inclusive business schools in the world and would never seek to endorse such hateful views. We are taking urgent action to remove Opindia from our online advertising.
— Saïd Business School (@OxfordSBS) May 29, 2020
NEW: @RubiconProject (ad exchange) has confirmed that they’ve dropped Hindu nationalist media outlet OpIndia from their inventory.
They found the site violates their policies. Thank you Rubicon! pic.twitter.com/QJ9mQk4kQO
— Nandini Jammi (@nandoodles) May 28, 2020
ಈ ಅಭಿಯಾನವು ಆರಂಭದಲ್ಲಿ ಇಂಗ್ಲೆಂಡ್ ಮೇಲೆ ಕೇಂದ್ರೀಕೃತವಾಗಿತ್ತು ಆದರೆ ಕಾಲಾನಂತರದಲ್ಲಿ ದ್ವೇಷ ಹರಡುವುದನ್ನು ಉದಾಹರಣೆಗಳ ಸಹಿತ ನಮ್ಮ ಗಮನಕ್ಕೆ ತಂದರೆ ಅವುಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಸ್ಟಾಪ್ ಫಂಡಿಂಗ್ ಹೇಟ್ ಅಭಿಯಾನದ ನಿರ್ದೇಶಕ ರಿಚರ್ಡ್ ವಿಲ್ಸನ್ ಹೇಳುತ್ತಾರೆ.
Unfortunately with programmatic ads, it can be difficult to control where ads are served. But because you have flagged, and because of LiveWorx’s strong position on inclusivity, we have stopped running ads here. Thank you for letting us know and hope to see you June 9th!
— LiveWorx (@LiveWorx) May 27, 2020
The ad you've seen is generated by an automatic ad service Google provides. We are working together with Google to find a solution that will avoid positioning our products on any website that promotes racism, fake news or intolerance.
— Zalando News (@Zalando_Press) May 29, 2020
ಅಮೇರಿಕಾ ಮೂಲದ ಸ್ಲೀಪಿಂಗ್ ಜೈಂಟ್ಸ್ ಪ್ರಾರಂಭಿಸಿದ ಟ್ವಿಟ್ಟರ್ ಅಭಿಯಾನದಿಂದ ಪ್ರೇರಿತವಾಗಿ ‘ಸ್ಟಾಪ್ ಫಂಡಿಂಗ್ ಹೇಟ್’ ಅಭಿಯಾನವು ಸ್ಫೂರ್ತಿ ಪಡೆದಿದೆ ಎಂದು ವಿಲ್ಸನ್ ಹೇಳಿದ್ದಾರೆ, ಇದು ಬಿಳಿ ರಾಷ್ಟ್ರೀಯತಾವಾದಿ ವೆಬ್‌ಸೈಟ್ ಬ್ರೀಟ್‌ಬಾರ್ಟ್‌ನಲ್ಲಿ ಜಾಹೀರಾತು ನಿಲ್ಲಿಸಲು 4,000 ಕಂಪನಿಗಳಿಗೆ ಯಶಸ್ವಿಯಾಗಿ ಮನವರಿಕೆ ಮಾಡಿಕೊಟ್ಟಿದೆ.
ಓದಿ: ಪೋಸ್ಟ್‌ಕಾರ್ಡ್ ಹರಡಿದ ಸುಳ್ಳು: ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧಿ ಕಂಡುಹಿಡಿದದ್ದು ಯಾರು?


