Homeಅಂತರಾಷ್ಟ್ರೀಯಸುಳ್ಳು, ದ್ವೇಷ ಹರಡುವ ಹಿಂದುತ್ವದ ವೆಬ್‌ಸೈಟ್ 'ಒಪಿ ಇಂಡಿಯಾ'ಗೆ ಜಾಹಿರಾತು ನಿಲ್ಲಿಸಿದ MUBI

ಸುಳ್ಳು, ದ್ವೇಷ ಹರಡುವ ಹಿಂದುತ್ವದ ವೆಬ್‌ಸೈಟ್ ‘ಒಪಿ ಇಂಡಿಯಾ’ಗೆ ಜಾಹಿರಾತು ನಿಲ್ಲಿಸಿದ MUBI

ಇಂಗ್ಲೆಂಡ್ ಮೂಲದ 'ಸ್ಟಾಪ್ ಫಂಡಿಂಗ್ ಹೇಟ್' ಅಭಿಯಾನವು ಗಮನ ಸೆಳೆದ ಕಾರಣ ಇತರ ಹಲವು ಬ್ರಾಂಡ್‌ಗಳು ಕೂಡಾ ತಮ್ಮ ಜಾಹೀರಾತುಗಳನ್ನು ವೆಬ್‌ಸೈಟ್‌ನಿಂದ ಕೈಬಿಡುವುದಾಗಿ ಹೇಳಿದೆ.

- Advertisement -
- Advertisement -

ಸುಳ್ಳು ಹಾಗೂ ದ್ವೇಷ ಹರಡುತ್ತಿದೆ ಎಂದು ನಿರಂತರವಾಗಿ ಆರೋಪಿಸಲ್ಪಡುತ್ತಿರುವ ಹಿಂದುತ್ವದ ವೆಬ್‌ಸೈಟ್ ಒಪಿ ಇಂಡಿಯಾದಲ್ಲಿ ತನ್ನ ಜಾಹೀರಾತುಗಳನ್ನು ನಿಲ್ಲಿಸುವುದಾಗಿ ಖ್ಯಾತ ಚಲನಚಿತ್ರ ಸ್ಟ್ರೀಮಿಂಗ್ ಸೇವೆಯಾದ ಮುಬಿ (MUBI) ಸೇರಿದಂತೆ ಇತರ ಸಂಸ್ಥೆಗಳು ಪ್ರಕಟಿಸಿವೆ. 

“ಹಲಾಲ್‌ ಕಾನೂಬದ್ದ ಎಂದಾದರೆ, ಮುಸ್ಲಿಮರನ್ನು ನೇಮಿಸಿಕೊಳ್ಳುವುದಿಲ್ಲ ಎಂದು ಕೆಲಸ ನೀಡುವ ಸಂಸ್ಥೆಗಳು ಘೋಷಿಸುವ ಹಕ್ಕು ಹೊಂದಿವೆ” ಎಂಬ ಲೇಖನವೊಂದನ್ನು ಒಪಿಇಂಡಿಯಾ ಪ್ರಕಟಿಸಿತ್ತು. ಇಂಗ್ಲೆಂಡ್‌ ಮೂಲದ ‘ಸ್ಟಾಪ್ ಫಂಡಿಂಗ್ ಹೇಟ್’ ಅಭಿಯಾನವು ಈ ಬಗ್ಗೆ ಗಮನ ಸೆಳೆದ ಕಾರಣ ಇತರ ಹಲವು ಬ್ರಾಂಡ್‌ಗಳು ಕೂಡಾ ತಮ್ಮ ಜಾಹೀರಾತುಗಳನ್ನು ಒಪಿ ಇಂಡಿಯಾ ವೆಬ್‌ಸೈಟ್‌ನಿಂದ ಕೈಬಿಡುವುದಾಗಿ ಹೇಳಿದೆ.

ಸ್ಟಾಪ್ ಫಂಡಿಂಗ್ ಹೇಟ್ ಅಭಿಯಾನಕ್ಕೆ “ತನ್ನ ಜಾಹೀರಾತುಗಳು ಸೇರಿದಂತೆ ಹಲವು ಕಂಪನಿಗಳ ಹಲವು ಜಾಹಿರಾತುಗಳು ಒಪಿಇಂಡಿಯಾ ವೆಬ್‌ಸೈಟ್‌ನಲ್ಲಿ ಗೋಚರಿಸುತ್ತಿವೆ” ಎಂದು ಎಚ್ಚರಿಸಿದ್ದ ಕಂಪನಿಗಳಲ್ಲಿ ಮುಬಿ ಕೂಡ ಒಂದು. ಕಂಪನಿಯು “ಇದು ಮತ್ತೆ ಸಂಭವಿಸುವುದಿಲ್ಲ ಎಂದು ಖಚಿತಪಡಿಸುತ್ತದೆ” ಎಂದು ಟ್ವೀಟ್ ಮಾಡಿದೆ.

“ಜಾಹೀರಾತು ಚಟುವಟಿಕೆಗಳಿಗಾಗಿ ನಮ್ಮ ನಿರ್ಬಂಧಿತ ಸೈಟ್‌ಗಳ ಪಟ್ಟಿಗೆ ನಾವು ತಕ್ಷಣ ಒಪಿ ಇಂಡಿಯಾವನ್ನು ಸೇರಿಸಿದ್ದೇವೆ” ಎಂದು ಮುಬಿ ಸಂವಹನ ನಿರ್ದೇಶಕ ಸೋಫಿ ರತಿಗನ್ ಹೇಳಿದ್ದಾರೆ.

ಆನ್‌ಲೈನ್ ಜಾಹೀರಾತುಗಳು ಸಾಮಾನ್ಯವಾಗಿ ನೆಟ್‌ವರ್ಕ್‌ಗಳು ಮತ್ತು ಮಾರುಕಟ್ಟೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಪರಿಣಾಮವಾಗಿ, ಜಾಹೀರಾತುಗಳನ್ನು ಹೆಚ್ಚಾಗಿ ವೆಬ್‌ಸೈಟ್‌ಗಳಲ್ಲಿ ಸ್ವಯಂಚಾಲಿತವಾಗಿ ಇರಿಸಿ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಾಗುತ್ತದೆ. ಆದಾಗ್ಯೂ, ಬ್ರಾಂಡ್‌ಗಳು ತಮ್ಮ ಜಾಹೀರಾತುಗಳು ಕೆಲವು ವೆಬ್‌ಸೈಟ್‌ಗಳಲ್ಲಿ ಗೋಚರಿಸಬಾರದು ಎಂದು ಕಪ್ಪುಪಟ್ಟಿಗೆ ಸೇರಿಸುವ ಆಯ್ಕೆಯನ್ನು ಹೊಂದಿರುತ್ತವೆ.

ಮುಬಿ ಜೊತೆಗೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸೇಡ್ ಬ್ಯುಸಿನೆಸ್ ಸ್ಕೂಲ್ ಹಾಗೂ ಆನ್‌ಲೈನ್ ಜಾಹೀರಾತು ನೆಟ್‌ವರ್ಕ್‌ನ ರುಬಿಕಾನ್ ಪ್ರಾಜೆಕ್ಟ್ ಸೇರಿದಂತೆ ಹಲವಾರು ಸಂಸ್ಥೆಗಳು ಒಪಿಇಂಡಿಯಾದಿಂದ ಕೈಬಿಡುವುದಾಗಿ ತಿಳಿಸಿವೆ.

 

ಈ ಅಭಿಯಾನವು ಆರಂಭದಲ್ಲಿ ಇಂಗ್ಲೆಂಡ್ ಮೇಲೆ ಕೇಂದ್ರೀಕೃತವಾಗಿತ್ತು ಆದರೆ ಕಾಲಾನಂತರದಲ್ಲಿ ದ್ವೇಷ ಹರಡುವುದನ್ನು ಉದಾಹರಣೆಗಳ ಸಹಿತ ನಮ್ಮ ಗಮನಕ್ಕೆ ತಂದರೆ ಅವುಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಸ್ಟಾಪ್ ಫಂಡಿಂಗ್ ಹೇಟ್ ಅಭಿಯಾನದ ನಿರ್ದೇಶಕ ರಿಚರ್ಡ್ ವಿಲ್ಸನ್ ಹೇಳುತ್ತಾರೆ.

ಅಮೇರಿಕಾ ಮೂಲದ ಸ್ಲೀಪಿಂಗ್ ಜೈಂಟ್ಸ್ ಪ್ರಾರಂಭಿಸಿದ ಟ್ವಿಟ್ಟರ್ ಅಭಿಯಾನದಿಂದ ಪ್ರೇರಿತವಾಗಿ ‘ಸ್ಟಾಪ್ ಫಂಡಿಂಗ್ ಹೇಟ್’ ಅಭಿಯಾನವು ಸ್ಫೂರ್ತಿ ಪಡೆದಿದೆ ಎಂದು ವಿಲ್ಸನ್ ಹೇಳಿದ್ದಾರೆ, ಇದು ಬಿಳಿ ರಾಷ್ಟ್ರೀಯತಾವಾದಿ ವೆಬ್‌ಸೈಟ್‌ ಬ್ರೀಟ್‌ಬಾರ್ಟ್‌ನಲ್ಲಿ ಜಾಹೀರಾತು ನಿಲ್ಲಿಸಲು 4,000 ಕಂಪನಿಗಳಿಗೆ ಯಶಸ್ವಿಯಾಗಿ ಮನವರಿಕೆ ಮಾಡಿಕೊಟ್ಟಿದೆ.


ಓದಿ: ಪೋಸ್ಟ್‌ಕಾರ್ಡ್ ಹರಡಿದ ಸುಳ್ಳು: ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧಿ ಕಂಡುಹಿಡಿದದ್ದು ಯಾರು?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...