ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ ದನದ ಮಾಂಸ ಮಾರುತ್ತಿದ್ದ ಎಂದು ಆರೋಪಿಸಿ ಅಸ್ಸಾಮಿ ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಆರೋಪದ ಮೇಲೆ 3 ಬಜರಂಗದಳ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೂಡಿಗೆರೆ ಸಮೀಪದ ಮುದ್ರೆಮನೆ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ದನದ ಮಾಂಸ ಮಾರುತ್ತಿದ್ದ ಎಂದು ಆರೋಪಿಸಿ ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಲಾಗಿದೆ. ಆನಂತರ ನಿಂದಿಸಿ ಹಲ್ಲೆ ಮಾಡುವು ದೃಶ್ಯಗಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
FIR against 3 alleged #BajrangDal members for tieing an Assamese youth to an electric pole & assaulting him alleging he was carrying beef in his 2 wheeler at #Mudigere, #Chikkamagalur, #Karnataka.
A counter complaint also filed against the youth. Meat sent for FSL inform police. pic.twitter.com/KciimBHBiW
— Hate Detector 🔍 (@HateDetectors) January 29, 2023
ಥಳಿತಕ್ಕೊಳಗಾದ ಅಸ್ಸಾಮಿ ಯುವಕನ ಮೇಲೂ ಸಹ ದೂರು ದಾಖಲಾಗಿದೆ. ಯುವಕನನ್ನು ಗೋಣಿಬೀಡು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಾಂಸವನ್ನು FSL ಪರೀಕ್ಷೆಗೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ.
“ಪುಂಡ ಪೋಕರಿಗಳ ಅಟ್ಟಹಾಸದ ಮತ್ತೊಂದು ದಿನ. ಈ ಕ್ರಿಯೆಗೆ ಚಪ್ಪಾಳೆ ತಟ್ಟುವವರು ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ತಿಳಿಯಿರಿ. ಈ ಅಧರ್ಮವು ಪ್ರತಿ ಪಟ್ಟಣ ಮತ್ತು ನಗರ, ಪ್ರತಿ ಬೀದಿ ಮತ್ತು ಪ್ರತಿ ಮನೆಯನ್ನು ಪ್ರವೇಶಿಸುತ್ತದೆ. ಈ ಅಧಿಪತ್ಯವಾದಿ ಸಂಘಟನೆಗಳಿಗೆ ಈ ನಿರ್ಭಯವು ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ನಾಶಪಡಿಸುತ್ತದೆ” ಎಂದು ಘಟನೆ ಕುರಿತು ಎಐಸಿಸಿಟಿಯು ರಾಜ್ಯಾಧ್ಯಕ್ಷರಾದ ಕ್ಲಿಫ್ಟನ್ ಡಿ ರೊಜಾರಿಯೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Just another day at the office for these hooligans. And those clapping at this, just know that this doesn't stop here. This lawlessness will enter every town and city, every street and every house. This impunity to these supremacist organisations will destroy everyone's freedom. https://t.co/QmHgAjX82G
— Clifton D' Rozario (@clifroz) January 29, 2023


