- Advertisement -
- Advertisement -
ದೆಹಲಿ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು ಕೇಜ್ರಿವಾಲ್ ಅವರ ಎಎಪಿ ಮುನ್ನಡೆಯಲ್ಲಿದೆ. ಬಿಜೆಪಿಯ ಎಲ್ಲಾ ಉದ್ರೇಕಕಾರಿ ಚುನಾವಣಾ ಪ್ರಚಾರಗಳನ್ನು ಮಣಿಸಿ ಆಪ್ ಮುನ್ನಡೆ ಸಾಧಿಸಿದ್ದು, ತನ್ನ ಟ್ವಿಟ್ಟರ್ ನಲ್ಲಿ “ಮಫ್ಲರ್ ಮ್ಯಾನ್” ಎಂದು ಬರೆದು ಮಗುವಿನ ಚಿತ್ರವನ್ನು ಹಾಕಿ ಖುಷಿಯನ್ನು ಹಂಚಿಕೊಂಡಿದೆ.
Mufflerman ? pic.twitter.com/OX6e8o3zay
— AAP (@AamAadmiParty) February 11, 2020
ಪ್ರಸ್ತುತ ವರದಿಯಂತೆ ಎಎಪಿ 58 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿ ಗೆಲುವಿನ ಕಡೆಗೆ ಮುನ್ನುಗ್ಗುತ್ತಿದೆ. ಬಿಜೆಪಿ 12 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ವರದಿಗಳ ಪ್ರಕಾರ ಹೆಚ್ಚಿನ ಮತಯಂತ್ರಗಳ ಎಣಿಕೆ ಮುಗಿಯುತ್ತಾ ಬಂದಿದ್ದು, ಎಎಪಿ ಗೆಲುವು ನಿಚ್ಚಳವಾಗಿದೆ.


