ಕಸದ ರಾಶಿಗಳ ಮೇಲೆ ವಯಸ್ಸಾದ ಮಹಿಳೆಯೊಬ್ಬರು ಬಿದ್ದಿರುವ ಆತಂಕಕಾರಿ ಪ್ರಕರಣವೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯನ್ನು ಅವರ ಮೊಮ್ಮಗ ಕಸಕ್ಕೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಗರದ ಆರೆ ಕಾಲೋನಿಯ ರಸ್ತೆಯಲ್ಲಿರುವ ಕಸದ ರಾಶಿಯ ಬಳಿ 60 ವರ್ಷದ ಯಶೋದಾ ಗಾಯಕ್ವಾಡ್ ಎಂಬ ಮಹಿಳೆಯನ್ನು ಮುಂಬೈ ಪೊಲೀಸರು ಶನಿವಾರ ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದಾಗ ಪತ್ತೆಹಚ್ಚಿದ್ದಾರೆ.
ತನಿಖೆಯ ನಂತರ, ತನ್ನ ಮೊಮ್ಮಗ ಆಕೆಯನ್ನು ಅಲ್ಲಿಯೇ ಬಿಟ್ಟು ಹೋಗಿರುವ ಕುರಿತು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ಬೆಳಿಗ್ಗೆಯೇ ಪತ್ತೆಯಾಗಿದ್ದರೂ, ಸಂಜೆ 5:30 ರ ಹೊತ್ತಿಗೆ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಯಿತು. ಅವರ ಗಂಭೀರ ಸ್ಥಿತಿ ನೋಡಿದ ಹಲವಾರು ಆಸ್ಪತ್ರೆಗಳು ಆಸ್ಪತ್ರೆಗೆ ದಾಖಲಿಸಿಕೊಳ್ಳಲಿ ನಿರಾಕರಿಸಿದ ನಂತರ ಅವರನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಯಿತು. ವೃದ್ದೆಯು ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.
ವೃದ್ಧ ಮಹಿಳೆ ಎರಡು ವಿಳಾಸಗಳನ್ನು ಹಂಚಿಕೊಂಡಿದ್ದಾರೆ. ಒಂದು ಮಲಾಡ್, ಮತ್ತೊಂದು ಕಾಂಡಿವಲಿಯಲ್ಲಿ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕುಟುಂಬದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಸಂಬಂಧಿಕರನ್ನು ಪತ್ತೆಹಚ್ಚಲು ಆಕೆಯ ಚಿತ್ರವನ್ನು ಎಲ್ಲ ಪೊಲೀಸ್ ಠಾಣೆಗಳಲ್ಲಿ ಹಂಚಿಕೊಳ್ಳಲಾಗಿದೆ.
ರಾಜಕೀಯ ಮಾಡದೆ ಪಾರದರ್ಶಕ & ಪರಿಣಾಮಕಾರಿಯಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿ: ಸಚಿನ್ ಪೈಲಟ್


