ದಕ್ಷಿಣ ಮುಂಬೈನಲ್ಲಿ ಕೋಚಿಂಗ್ ಸೆಂಟರ್ ನಡೆಸುತ್ತಿರುವ ಮೂವರು ಸಹೋದರರು ಸುಮಾರು ಎರಡು ವರ್ಷಗಳ ಅವಧಿಯಲ್ಲಿ 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಹೋದರರು ತನ್ನನ್ನು ಕೋಚಿಂಗ್ ಸೆಂಟರ್‌ಗೆ ಬೇಗನೆ ಬರುವಂತೆ ಮತ್ತು ಕೊನೆಗೆ ತೆರಳುವಂತೆ ಒತ್ತಾಯಿಸುತ್ತಿದ್ದರು. ಈ ವೇಳೆ ಅವರು ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ ಬಾಲಕಿ ಹೇಳಿದ್ದಾರೆ ಎಂದು ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮುಂಬೈ ಪೊಲೀಸರ ಪ್ರಕಾರ, ಗೌತಮ್ ಮತ್ತು ತರುಣ್ ರಾಜಪುರೋಹಿತ್ ಅವರನ್ನು ಶನಿವಾರ ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಹಿರಿಯ ಸಹೋದರ ಮೂರನೇ ಆರೋಪಿ ಸತ್ಯ ರಾಜ್ ಅವರನ್ನು ಭಾನುವಾರ ಬಂಧಿಸಲಾಗಿದೆ.
ಮಕ್ಕಳ ಅಭಿವೃದ್ಧಿ ಕೇಂದ್ರದ ಆಪ್ತಸಮಾಲೋಚಕರ ಬಳಿ ಈ ಬಗ್ಗೆ ಸಂತ್ರಸ್ತ ಬಾಲಕಿ ಮಾರ್ಚ್ ತಿಂಗಳ ವೇಳೆಗೆ ಹೇಳಿಕೊಂಡಿದ್ದು, ಶುಕ್ರವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂಓದಿ: ತಮಿಳುನಾಡು ಉಪ ಮುಖ್ಯಮಂತ್ರಿಯಾಗಿ ಉಯನಿಧಿ ಸ್ಟಾಲಿನ್ ಅಧಿಕಾರ ಸ್ವೀಕಾರ
24, 25 ಮತ್ತು 27 ವರ್ಷ ವಯಸ್ಸಿನ ಸಹೋದರರು ದಕ್ಷಿಣ ಮುಂಬೈನಲ್ಲಿ ನೆಲೆಸಿದ್ದು, 7 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೋಚಿಂಗ್ ಸಂಸ್ಥೆಯನ್ನು ನಡೆಸುತ್ತಿದ್ದರು. ಅವರ ತರಗತಿಗಳಿಗೆ 35ರಿಂದ 40 ಹುಡುಗಿಯರು ಹಾಜರಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಹೆತ್ತವರ ವಿಚ್ಛೇದನದ ನಂತರ ತನ್ನ ತಾಯಿಯೊಂದಿಗಿದ್ದ ಬಾಲಕಿ 2022 ರಲ್ಲಿ ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಿದ್ದರು. ಕೋಚಿಂಗ್‌ಗೆ ಸೇವರು ವೇಳೆ ಬಾಲಕಿ ಹೊಸ ಶಾಲೆಗೆ ಕೂಡಾ ದಾಖಲಾಗಿದ್ದರು. 2022 ರ ಕೊನೆಯಲ್ಲಿ ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆಗಳನ್ನು ಗಮನಿಸಿದ ಅವರ ತಾಯಿ 2023ರ ಜನವರಿಯಲ್ಲಿ ಸಮಾಲೋಚನೆಗಾಗಿ ಮಕ್ಕಳ ಅಭಿವೃದ್ಧಿ ಕೇಂದ್ರಕ್ಕೆ ಸೇರಿಸಲಾಗಿತ್ತು.
ಸಂತ್ರಸ್ತೆ ಮೇ 2023 ರಲ್ಲಿ ಸಮಾಲೋಚನೆಯನ್ನು ನಿಲ್ಲಿಸಿದ್ದರು. ಅದಕ್ಕೂ ಮೊದಲು ನಾಲ್ಕು ತಿಂಗಳ ಕಾಲ ಸಮಾಲೋಚನೆಗೆ ಅವರು ಹಾಜರಾಗಿದ್ದರು. ಅದರ ನಂತರ ಅವರು ಈ ವರ್ಷದ ಫೆಬ್ರವರಿಯಲ್ಲಿ ಸಮಾಲೋಚನಾ ಕೇಂದ್ರವನ್ನು ಮತ್ತೆ ಸೇರಿಕೊಂಡಿದ್ದರು. ಮಾರ್ಚ್ ವೇಳೆಗೆ ಮೂವರು ಸಹೋದರರು ತನ್ನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಮಾಲೋಚಕರಿಗೆ ಬಹಿರಂಗಪಡಿಸಿದ್ದರು.
ಸಾಮಾಜಿಕ ಕಳಂಕದ ಭಯದ ಕಾರಣಕ್ಕೆ ಈ ಬಗ್ಗೆ ತನ್ನ ತಾಯಿಗೆ ತಿಳಿಸದಂತೆ ಬಾಲಕಿಯು ಸಮಾಲೋಚಕರಲ್ಲಿ ವಿನಂತಿಸಿದ್ದರು. ಮತ್ತು ಮಾರ್ಚ್‌ನಲ್ಲಿ ಕೋಚಿಂಗ್ ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದರು. ಅದಾಗ್ಯೂ, ಆಪ್ತಸಮಾಲೋಚಕರು ಹುಡುಗಿಯ ತಾಯಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದು, ಆದರೆ ತಾಯಿ ಮತ್ತು ಮಗಳು ಇಬ್ಬರೂ ಪೊಲೀಸ್ ದೂರು ನೀಡಲು ಆರಂಭದಲ್ಲಿ ನಿರಾಕರಿಸಿದ್ದರು.
ಇದನ್ನೂಓದಿ: ಜಮ್ಮು-ಕಾಶ್ಮೀರ: ಕಡಿಮೆ ರಕ್ತದೊತ್ತಡದಿಂದ ವೇದಿಕೆ ಮೇಲೆ ಅಸ್ವಸ್ಥರಾದ ಮಲ್ಲಿಕಾರ್ಜುನ ಖರ್ಗೆ
ಅದಾಗ್ಯೂ, ಶುಕ್ರವಾರ ತಡರಾತ್ರಿ ಶಿಶು ಅಭಿವೃದ್ಧಿ ಕೇಂದ್ರದ ಅಧಿಕಾರಿಗಳು ಪೊಲೀಸರನ್ನು ಸಂಪರ್ಕಿಸಿ ಅಧಿಕೃತವಾಗಿ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕಿರುಕುಳ, ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ಕ್ರಿಮಿನಲ್ ಬೆದರಿಕೆ, ಹಾಗೆಯೇ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ), 2012 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
“ಎಫ್ಐಆರ್ ದಾಖಲಾದ ನಂತರ, ಹುಡುಗಿ ಮತ್ತು ಆಕೆಯ ತಾಯಿಯ ಹೇಳಿಕೆಗಳನ್ನು ದಾಖಲಿಸಲಾಗಿದೆ. ಹಾಗಾಗಿ ಇಬ್ಬರು ಸಹೋದರರನ್ನು ಬಂಧಿಸಲು ಕಾರಣವಾಯಿತು. ಹಿರಿಯ ಸಹೋದರ, 27 ವರ್ಷ ವಯಸ್ಸಿನ ಮತ್ತೊಬ್ಬ ಶಿಕ್ಷಕ ಇನ್ನೂ ತಲೆಮರೆಸಿಕೊಂಡಿದ್ದಾನೆ. ನಾವು ಅವನನ್ನು ಪತ್ತೆಹಚ್ಚಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಕೋಚಿಂಗ್ ಸೆಂಟರ್‌ನಲ್ಲಿ ಸುಮಾರು 35-40 ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆರೋಪಿಗಳಾದ ಮೂವರು ಸಹೋದರರು ಬೇರೆ ಯಾವುದೇ ವಿದ್ಯಾರ್ಥಿಗಳ ಮೇಲೆ ಇದೇ ರೀತಿಯಲ್ಲಿ ದೌರ್ಜನ್ಯ ನಡೆಸಿದ್ದಾರೆಯೆ ಎಂದು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಇಬ್ಬರು ಸಹೋದರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ವಿಡಿಯೊನೋಡಿ: ಅಟ್ರಾಸಿಟಿ ಕಾದಂಬರಿ ಚರ್ಚೆಯಲ್ಲಿ ವಿಕಾಸ್ ಮತ್ತು ಗುರುಪ್ರಸಾದ್ ಪ್ರತಿಕ್ರಿಯೆ


