Homeಕರೋನಾ ತಲ್ಲಣಮುಂಬೈ: ಲಸಿಕೆ ಪಡೆದಿದ್ದ 28 ಮಂದಿ ಸೇರಿ, 30 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ!

ಮುಂಬೈ: ಲಸಿಕೆ ಪಡೆದಿದ್ದ 28 ಮಂದಿ ಸೇರಿ, 30 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ!

- Advertisement -
- Advertisement -

ಮಹಾರಾಷ್ಟ್ರದ ಮುಂಬೈಯ ಪಾಲಿಕೆ ನಡೆಸುತ್ತಿರುವ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯ ಕನಿಷ್ಠ 30 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವಿ ಆಗಿದ್ದಾರೆ. ವಿಶೇಷವೇನೆಂದರೆ, ಕೊರೊನಾ ಪಾಸಿಟಿವ್ ಆಗಿರುವ ಈ ವಿದ್ಯಾರ್ಥಿಗಳ ಪೈಕಿ 28 ಜನರಿಗೆ ಸಂಪೂರ್ಣವಾಗಿ ಕೊರೊನಾ ಲಸಿಕೆ ನೀಡಲಾಗಿತ್ತು ಎಂದು ವರದಿಯಾಗಿದೆ.

ಸೋಂಕಿತ ವಿದ್ಯಾರ್ಥಿಗಳಲ್ಲಿ, 23 ಮಂದಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದು, ಉಳಿದ ಏಳು ಮಂದಿ ಮೊದಲ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಒಬ್ಬರು ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ನಗರದ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲಕ್ಷಣ ರಹಿತ ಇತರ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಆಗಲು ಕೇಳಲಾಗಿದೆ.

ಇದನ್ನೂ ಓದಿ: ವಸತಿ ಶಾಲೆಯ 60 ವಿದ್ಯಾರ್ಥಿಗಳಿಗೆ ಕೊರೊನಾ; ಅ.20 ವರೆಗೆ ಶಾಲೆ ಬಂದ್

“ಕಾಲೇಜ್‌ನಲ್ಲಿ ಒಟ್ಟು 1,100 ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ ಕಲಿಯುತ್ತಿದ್ದಾರೆ. ಪರೀಕ್ಷೆಗೆ ಒಳಪಟ್ಟ ಎಲ್ಲಾ 29 ವಿದ್ಯಾರ್ಥಿಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ” ಎಂದು ಕೆಇಎಂ ಆಸ್ಪತ್ರೆಯ ಡೀನ್ ಡಾ.ಹೇಮಂತ್ ದೇಶಮುಖ್‌ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕಾಲೇಜಿನ ಇತರ ವಿದ್ಯಾರ್ಥಿಗಳನ್ನೂ ಈಗ ಪರೀಕ್ಷಿಸಲಾಗುತ್ತಿದೆ. ಪ್ರತಿದಿನ 200-250 ಜನರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕೊರೊನಾ ವೈರಸ್ ಪ್ರಕರಣಗಳು ಇಳಿಮುಖವಾಗುತ್ತಿರುವುದರಿಂದ ಮತ್ತು ಲಸಿಕಾ ಪ್ರಕ್ರಿಯೆಗಳು ವೇಗವನ್ನು ಪಡೆಯುತ್ತಿರುವುದರಿಂದ ಹಲವಾರು ಕಾಲೇಜುಗಳು ಮತ್ತು ಶಾಲೆಗಳು ಮತ್ತೆ ತೆರೆಯಲು ಪ್ರಾರಂಭಿಸಿವೆ.

ರಾಜ್ಯದಲ್ಲೂ, ಬೆಂಗಳೂರಿನಲ್ಲಿರುವ ವಸತಿ ಶಾಲೆಯ ಸುಮಾರು 60 ವಿದ್ಯಾರ್ಥಿಗಳು ಪಾಸಿಟಿವ್‌ ಆಗಿದ್ದು ನಿನ್ನೆ ವರದಿಯಾಗಿತ್ತು. ಶಾಲೆಯು ಕೊರೊನಾ ಕ್ಲಸ್ಟರ್ ಆಗಿ ಮಾರ್ಪಟ್ಟಿದ್ದು, ಸುಮಾರು 500 ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದಾಗಿ ಶಾಲೆಯನ್ನು ಅಕ್ಟೋಬರ್ 20 ರವರೆಗೆ ಮುಚ್ಚಲಾಗಿದೆ.

ಇದನ್ನೂ ಓದಿ: ಕೊರೊನಾ ಸಾವು: ₹1 ಲಕ್ಷ ಪರಿಹಾರ ಆದೇಶ ಹಿಂಪಡೆದ ರಾಜ್ಯದ ಬಿಜೆಪಿ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...