Homeಕರ್ನಾಟಕವಸತಿ ಶಾಲೆಯ 60 ವಿದ್ಯಾರ್ಥಿಗಳಿಗೆ ಕೊರೊನಾ; ಅ.20 ವರೆಗೆ ಶಾಲೆ ಬಂದ್

ವಸತಿ ಶಾಲೆಯ 60 ವಿದ್ಯಾರ್ಥಿಗಳಿಗೆ ಕೊರೊನಾ; ಅ.20 ವರೆಗೆ ಶಾಲೆ ಬಂದ್

- Advertisement -
- Advertisement -

ಬೆಂಗಳೂರಿನ ಒಂದು ವಸತಿ ಶಾಲೆಯೊಂದು ಕೊರೊನಾ ಕ್ಲಸ್ಟರ್ ಆಗಿ ಮಾರ್ಪಟ್ಟಿದ್ದು, ಶಾಲೆಯ ಸುಮಾರು 500 ವಿದ್ಯಾರ್ಥಿಗಳಲ್ಲಿ 60 ವಿದ್ಯಾರ್ಥಿಗಳಿಗೆ ಸೋಂಕು ಹರಡಿರುವುದು ದೃಡಪಟ್ಟಿದೆ. ಸೋಂಕು ಹರಡಿರುವುದು ದೃಡಪಡುತ್ತಿದ್ದಂತೆ ಶಾಲೆಯನ್ನು ಅಕ್ಟೋಬರ್ 20 ರವರೆಗೆ ಮುಚ್ಚಲಾಗಿದೆ ಎಂದು ವರದಿಯಾಗಿದೆ.

ರೋಗಲಕ್ಷಣವಿರುವ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರನ್ನು ಸರಿಯಾದ ವೈದ್ಯಕೀಯ ಸೌಲಭ್ಯದಲ್ಲಿ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು (ನಗರ) ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಇದನ್ನೂ ಓದಿ: ಕೊರೊನಾ ಸಾವು: ₹1 ಲಕ್ಷ ಪರಿಹಾರ ಆದೇಶ ಹಿಂಪಡೆದ ರಾಜ್ಯದ ಬಿಜೆಪಿ ಸರ್ಕಾರ

“ಇದು ಒಂದು ಬೋರ್ಡಿಂಗ್ ಶಾಲೆ … ವಿದ್ಯಾರ್ಥಿಗಳು ಒಂದು ತಿಂಗಳು ಅಲ್ಲಿದ್ದರು. ಅವರು ಶಾಲೆಗೆ ಬಂದಾಗ ಯಾವುದೇ ಲಕ್ಷಣಗಳು ಇರಲಿಲ್ಲ. ಪಾಸಿಟಿವ್‌‌ ಆಗಿರುವ 60 ವಿದ್ಯಾರ್ಥಿಗಳಲ್ಲಿ (ಭಾನುವಾರ ಸಂಜೆ) ಕೇವಲ ಇಬ್ಬರಲ್ಲಿ ಮಾತ್ರ ರೋಗಲಕ್ಷಣಗಳಿಗೆ. ಅಲ್ಲಿ ನಮ್ಮ ತಂಡವಿದ್ದು. .. ನಾವು ಎಲ್ಲರನ್ನು ಪರೀಕ್ಷಿಸಿದ್ದೇವೆ. ನಾವು ಏಳು ದಿನ ಕಳೆದು ಮತ್ತೆ ಪರೀಕ್ಷೆ ನಡೆಸುತ್ತೇವೆ. ಶಾಲೆಯನ್ನು ಅಕ್ಟೋಬರ್ 20 ರವರೆಗೆ ಮುಚ್ಚಲಾಗಿದೆ. ಯಾವುದೇ ಆತಂಕವಿಲ್ಲ, ಇದು ಪೂರ್ವಭಾವಿ ಕ್ರಮ” ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕೊರೊನಾ ಪಾಸಿಟಿವ್‌ ಆಗಿರುವ ವಿದ್ಯಾರ್ಥಿಗಳಲ್ಲಿ 14 ಮಂದಿ ತಮಿಳುನಾಡಿನವರು ಮತ್ತು ಉಳಿದವರು ಕರ್ನಾಟಕದವರು ಎಂದು ಎನ್‌ಡಿಟಿವಿ ವರದಿ ಮಾಡಿದೆ. ವಿದ್ಯಾರ್ಥಿಯೊಬ್ಬರಿಗೆ ವಾಂತಿ ಮತ್ತು ಭೇದಿ ಆದ ಕಾರಣ ದೂರು ನೀಡಲಾಗಿತ್ತು. ಇದರ ನಂತರ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಲಾಗಿದೆ.

ರಾಜ್ಯದಲ್ಲಿ 6 ನೇ ತರಗತಿಯಿಂದ 8 ನೇ ತರಗತಿಯವರೆಗಿನ ತರಗತಿಗಳನ್ನು ಮತ್ತೇ ಪ್ರಾರಂಭಿಸಲು ಇತ್ತೀಚೆಗಷ್ಟೇ ಅನುಮತಿ ನೀಡಲಾಗಿತ್ತು. ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಗಳು ಕಟ್ಟುನಿಟ್ಟಾದ ಕೊರೊನಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸರ್ಕಾರ ಎಚ್ಚರಿಸಿತ್ತು.

ಬುಧವಾರ(ಇಂದು) ಬೆಳಿಗ್ಗೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 629 ಹೊಸ ಕೊರೊನಾ ಪ್ರಕರಣಗಳು ವರದಿ ಆಗಿತ್ತು.

ಇದನ್ನೂ ಓದಿ: ಕೇರಳ: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂ. ಆರ್ಥಿಕ ನೆರವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಕಾಲದ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...