ಮುಂಬೈ ಪೊಲೀಸರು ನಿನ್ನೆ ನಿಧನರಾದ ನಟ ಇರ್ಫಾನ್ ಖಾನ್ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಅಪರೂಪದ ಕ್ಯಾನ್ಸರ್‌ನೊಂದಿಗೆ ಎರಡು ವರ್ಷಗಳ ಹೋರಾಟದ ನಂತರ ಅವರು ನಿನ್ನೆ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.
ಮುಂಬೈ ಪೊಲೀಸರು ನಟನನ್ನು ಸ್ಮರಿಸಲು ಸೃಜನಶೀಲ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇಂದು ಮುಂಜಾನೆ ಮುಂಬೈ ಪೊಲೀಸರು ಟ್ವಿಟ್ಟರ್‌ನಲ್ಲಿ ನಟನಿಗೆ ಗೌರವ ಸಲ್ಲಿಸುವುದರ ಜೊತೆಗೆ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿಯೇ ಇರಲು ಸಂದೇಶವನ್ನು ರವಾನಿಸಿದ್ದಾರೆ.
“ನಮ್ಮ ನೆನಪುಗಳಲ್ಲಿ ನೀವು ಜೀವಂತವಾಗಿರಲು ಜಗತ್ತಿಗೆ ಹಲವು ಮಾರ್ಗಗಳನ್ನು ಮತ್ತು ಸಾಧನಗಳನ್ನು ನೀಡಿದ್ದೀರಿ!” ಎಂದ ಮುಂಬೈ ಪೊಲೀಸ್ ತನ್ನ ಟ್ವೀಟ್ ಹೇಳಿ, ಅದನ್ನು #RememberingIrrfan #StayHome #StaySafe #TributeToTheLegend #RIPIrrfanKhan ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪೋಸ್ಟ್ ಮಾಡಲಾಗಿದೆ.
Re-Meme-Bering Irrfan
You have given the world many ways & means to keep you alive in our memories! #RememberingIrrfan #StayHome #StaySafe #TributeToTheLegend #RIPIrrfanKhan pic.twitter.com/cxQfmrcKOA
— Mumbai Police (@MumbaiPolice) April 30, 2020
ಟ್ವೀಟ್‌ನಲ್ಲಿ ಇರ್ಫಾನ್ ಖಾನ್ ಅವರ ಎರಡು ಚಿತ್ರಗಳಿದ್ದು, ಅದರಲ್ಲಿ ಇರ್ಫಾನ್ ಖಾನ್ ‘ಲಾಕ್‌ಡೌನ್ ಸಮಯದಲ್ಲಿ ಸುಳ್ಳು’ ಎಂಬ ಸಂದೇಶಕ್ಕೆ ಬೇಡ ಎಂಬಂತೆ ಸೂಚಿಸುತ್ತಾರೆ, ಮತ್ತೊಂದು ಚಿತ್ರದಲ್ಲಿ ‘ಇರ್ಫಾನ್ ಖಾನ್ ಮೂವಿ ಮ್ಯಾರಥಾನ್ ಮನೆಯಲ್ಲೇ’ ಎಂಬ ಸಂದೇಶವನ್ನು ನೋಡಿ ನಗುತ್ತಾರೆ.
ಇದನ್ನೂ ಓದಿ: ಹಿಂದಿ ಚಿತ್ರರಂಗದ ಹಿರಿಯ ನಟ ರಿಷಿ ಕಪೂರ್ ನಿಧನ
ಭಾರತದ ಅತ್ಯುತ್ತಮ ಮತ್ತು ಬಹುಮುಖ ಪ್ರತಿಭೆಯ ನಟರಲ್ಲಿ ಒಬ್ಬರಾದ ಖಾನ್ ಅವರ ಪತ್ನಿ ಸುತಪಾ ಮತ್ತು ಅವರ ಪುತ್ರರಾದ ಬಾಬಿಲ್ ಮತ್ತು ಅಯಾನ್ ಅವರನ್ನು ಅಗಲಿದ್ದಾರೆ.
ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದ ನಟನನ್ನು ಅವರ ಕುಟುಂಬ ಹಾಗೂ ಸ್ನೇಹಿತರಾದ ನಿರ್ದೇಶಕ ಟಿಗ್ಮಂಶು ಧುಲಿಯಾ ಮತ್ತು ವಿಶಾಲ್ ಭರದ್ವಾಜ್ ಅವರ ಸಮ್ಮುಖದಲ್ಲಿ ನಿನ್ನೆ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ವರ್ಸೋವಾ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.
ಇವರಿಗೆ 2018 ರಲ್ಲಿ ನ್ಯೂರೋಎಂಡೋಕ್ರೈನ್ ಗೆಡ್ಡೆ ಇರುವುದು ಪತ್ತಯಾಗಿತ್ತು. ರಾಜಕಾರಣಿಗಳು, ಕ್ರೀಡಾ ತಾರೆಗಳು, ಪೌರಕಾರ್ಮಿಕರು ಮತ್ತು ಅವರ ಸಹೋದ್ಯೋಗಿಗಳು ಮತ್ತು ಭಾರತ ಮತ್ತು ವಿದೇಶಗಳಲ್ಲಿ ಅನೇಕ ಅಭಿಮಾನಿಗಳು ಸೇರಿದಂತೆ ಎಲ್ಲಾ ಭಾಗಗಳಿಂದಲೂ ಇರ್ಫಾನ್ ಖಾನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ನಟ “ಅಪರೂಪದ ಪ್ರತಿಭೆ” ಮತ್ತು ಅವರ ಪಾತ್ರಗಳನ್ನು ಯಾವಾಗಲೂ ಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ವಿವಿಧ ಮಾಧ್ಯಮಗಳಲ್ಲಿ ಇರ್ಫಾನ್ ಖಾನ್ ಅವರ ಬಹುಮುಖ ಪ್ರತಿಭೆಗಾಗಿ ಸ್ಮರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರಲ್ಲದೆ, ಅವರ ನಿಧನವು ಸಿನಿಮಾ ಮತ್ತು ರಂಗಭೂಮಿ ಜಗತ್ತಿಗೆ ನಷ್ಟವಾಗಿದೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Irrfan Khan Passes Away: ಪ್ರಸಿದ್ಧ ಹಿಂದಿ ನಟ ಇರ್ಫಾನ್ ಖಾನ್ ಇನ್ನಿಲ್ಲ


