ಅಕ್ರಮ ಎಂದು ಆರೋಪಿಸಿ ಮಹಾರಾಷ್ಟ್ರ ವಿಲೇ ಪಾರ್ಲೆಯಲ್ಲಿ ದೇವಾಲಯ ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಜೈನ ಸಮುದಾಯದ ಸದಸ್ಯರು ನಡೆಸಿದ ಪ್ರತಿಭಟನೆಯ ನಂತರ ಮುಂಬೈನ ಪಾಲಿಕೆ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಭಾನುವಾರ ವರದಿ ಮಾಡಿದೆ. ಏಪ್ರಿಲ್ 16 ರಂದು ದೇವಾಲಯವನ್ನು ಕೆಡವಲಾಗಿದ್ದು, ಇದನ್ನು ಶ್ರೀ 1008 ದಿಗಂಬರ ಜೈನ ಮಂದಿರ ಟ್ರಸ್ಟ್ ನಿರ್ವಹಿಸುತ್ತದೆ. ಮುಂಬೈ | ದೇವಾಲಯ
ಪಾಲಿಕೆಯ ನಡೆಯ ವಿರುದ್ಧ ಹತ್ತಾರು ಸಾವಿರ ಜನರು ಪ್ರತಿಭಟನೆ ನಡೆಸಿದ ನಂತರ ಮುಂಬೈನ ಕೆ ಪೂರ್ವ ವಾರ್ಡ್‌ನ ಉಸ್ತುವಾರಿ ವಹಿಸಿದ್ದ ಸಹಾಯಕ ಆಯುಕ್ತ ನವನಾಥ್ ಘಡ್ಗೆ ಪಾಟೀಲ್ ಅವರನ್ನು ವರ್ಗಾಯಿಸಲಾಗಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಬರೆದ ಪತ್ರದಲ್ಲಿ, ಧ್ವಂಸ ಮಾಡಿದ್ದಕ್ಕಾಗಿ ಬೃಹನ್‌ಮುಂಬೈ ಪಾಲಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿ ಅವರನ್ನು ವರ್ಗಾಯಿಸಲಾಗಿದೆ ಎಂದು ವಿಲೇ ಪಾರ್ಲೆ ಶಾಸಕ ಪರಾಗ್ ಅಲವಾನಿ ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ.
ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಜೈನ ಪೂಜಾ ಸ್ಥಳವನ್ನು ಕೆಡವಲಾಗಿದೆ ಮತ್ತು ಎಲ್ಲಾ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ ಎಂದು ಅಧಿಕಾರಿ ಪಾಟೀಲ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ. ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆ ಮತ್ತು ಮುಂಬೈ ಮಹಾನಗರ ಪಾಲಿಕೆ ಕಾಯ್ದೆಯಡಿಯಲ್ಲಿ ಹೊರಡಿಸಲಾದ ನೋಟಿಸ್ ಆಧರಿಸಿ ಪಾಲಿಕೆಯು ಅದನ್ನು ಕೆಡವಲು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ. ಮುಂಬೈ | ದೇವಾಲಯ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮೇ 8ಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪು: ನ್ಯಾಯಕ್ಕಾಗಿ ಸುದೀರ್ಘ 17 ವರ್ಷ; ಈ ಕುರಿತು ಒಂದು ಸಂಕ್ಷಿಪ್ತ ವರದಿ
ಮೇ 8ಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪು: ನ್ಯಾಯಕ್ಕಾಗಿ ಸುದೀರ್ಘ 17 ವರ್ಷ; ಈ ಕುರಿತು ಒಂದು ಸಂಕ್ಷಿಪ್ತ ವರದಿ

