ಮುಂಬೈನಲ್ಲಿ ಇಂದು ಆಶ್ಚರ್‍ಯವೊಂದು ಜರುಗಿದೆ. ಒಂದೇ ದಿನ ಪೌರತ್ವ ಕಾಯ್ದೆಯ ಪರ ಮತ್ತು ವಿರುದ್ಧ ಬೃಹತ್ ಪ್ರತಿಭಟನೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಅದೂ ಕೇವಲ ನಾಲ್ಕು ಕಿ.ಮೀ ಅಂತರದಲ್ಲಿರುವ ಮೈದಾನಗಳಲ್ಲಿ ಬೃಹತ್ ಪ್ರತಿಭಟನೆಗಳು ಜರುಗಿವೆ. ಇಷ್ಟಾದರೂ ಯಾವುದೇ ಹಿಂಸಾತ್ಮಕ ಘಟನೆಗಳು ನಡೆದ ವರದಿಯಾಗಿಲ್ಲ.

ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಪರವಾಗಿ ಮಾಜಿ ಮುಖ್ಯಮಂತ್ರಿಯ ದೇವೇಂದ್ರ ಫಡ್ನವಿಸ್‌ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಅಜಾದ್ ಮೈದಾನದಲ್ಲಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿದೆ.
Modi Modi Chant at #CAAJanJangran rally in Mumbai .
Massive Crowd#MumbaiSupportsCAA #IndiaSupportsCAA pic.twitter.com/8AspzBmmF2
— Suresh Nakhua ?? ( सुरेश नाखुआ ) (@SureshNakhua) December 27, 2019
ಪೌರತ್ವ ಕಾಯ್ದೆ, ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ ಸಂಯೋಜನೆಯು ನೋಟು ರದ್ಧತಿಯ ಪುನರಾವರ್ತನೆಯಂತೆ ಕಾಣುತ್ತಿದೆ. ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕೇವಲ ಧಾರ್ಮಿಕ ವಿಷಯವಲ್ಲ, ಇದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ನೋಟು ರದ್ಧತಿಯ ಭಾಗ 2 ನಮಗೆ ಬೇಡ” ಎಂದು ಕಾರ್ಯಕರ್ತರು ಆಜಾದ್ ಮೈದಾನದಲ್ಲಿ ಸಾರಿ ಹೇಳಿದ್ದಾರೆ.
"Ham Kagaz Nahin Dikhaenge": @varungrover recites his viral poem to thousands of peaceful protesters who came to Azad Maidan today to raise their concern against CAA-NRC. Listen and share pic.twitter.com/H4ISKa4Axl
— Jairaj Singh (@JairajSinghR) December 27, 2019
“ಎನ್‌ಪಿಆರ್ ಎನ್‌ಆರ್‌ಸಿಗೆ ಮೊದಲ ಹೆಜ್ಜೆಯಾಗಿದೆ. ಸರ್ಕಾರ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಈ ಪ್ರತಿಭಟನೆ ನಿಲ್ಲುವುದಿಲ್ಲ, ಕಾಯ್ದೆ ವಾಪಸ್ ತೆಗೆದುಕೊಳ್ಳುವವರೆಗೂ ಇದು ಮುಂದುವರಿಯುತ್ತದೆ” ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದ್ದಾರೆ. “ಇದು ಸರ್ವಾಧಿಕಾರಿ ಆಡಳಿತ. ಅವರು ಏನು ಬೇಕಾದರೂ ಮಾಡಬಹುದು ಎಂದು ಅದು ಭಾವಿಸಿದಂತಿದೆ. ಸಂವಿಧಾನವನ್ನು ರಕ್ಷಿಸುವುದು ಈ ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದ್ದಾರೆ. ಸ್ವರ ಭಾಸ್ಕರ್ ಸೇರಿದಂತೆ ಅನೇಕ ನಟರು ಮತ್ತು ಸೆಲೆಬ್ರಿಟಿಗಳು ಸಹ ಆಜಾದ್ ಮೈದಾನದ ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದಾರೆ.


ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆಯುತ್ತಿರುವ ಪೌರತ್ವ ಕಾಯ್ದೆ ಪರ ಇರುವ ವೇದಿಕೆಯಲ್ಲಿ, ಭಾರೀ ಭಾರತದ ಧ್ವಜ ಮತ್ತು ಸಾವರ್ಕರ್ ಅವರ ಪೋಸ್ಟರ್ ಇದೆ. ಪೌರತ್ವ ಪರ ಕಾಯ್ದೆ ರ್‍ಯಾಲಿಯಲ್ಲಿ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಉಪಸ್ಥಿತರಿದ್ದರು.
ಇಷ್ಟಾದರೂ ಸಹ ಹಿಂಸಾತ್ಮಕ ಘಟನೆಗಳು ನಡೆಯಲು ಮಹಾರಾಷ್ಟ್ರದ ನೂತನ ಸರ್ಕಾರ ಅವಕಾಶಕೊಟ್ಟಿಲ್ಲ. ಶಾಂತಿಯುತ ಪ್ರತಿಭಟನೆಗೆ ಅದು ಅನುವು ಮಾಡಿಕೊಡುವ ಮೂಲಕ ಮಾದರಿಯಾಗಿದೆ.


