Homeಮುಖಪುಟತಮ್ಮ ಭೂಮಿ ಆಕ್ರಮಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ದಲಿತ ಯುವಕನ ಹತ್ಯೆ

ತಮ್ಮ ಭೂಮಿ ಆಕ್ರಮಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ದಲಿತ ಯುವಕನ ಹತ್ಯೆ

ದಲಿತರಾಗಿರದಿದ್ದರೆ ತಮ್ಮ ಮಗನನ್ನು ಕೊಲ್ಲಲಾಗುತ್ತಿರಲಿಲ್ಲ ಎಂದು ಕುಟುಂಬವು ಪ್ರತಿಪಾದಿಸಿದೆ.

- Advertisement -
- Advertisement -

ಜಮ್ಮುವಿನ ಉಧಂಪುರ ಜಿಲ್ಲೆಯ ದಂಡಿಯಾಲ್ ಗ್ರಾಮದಲ್ಲಿ ಜುಲೈ 2 ರಂದು ಹಾಡಹಗಲೆ 26 ವರ್ಷದ ರಾಹುಲ್ ಭಗತ್ ಎಂಬ ದಲಿತ ಯುವಕನನ್ನು ಭೂವಿವಾದಲ್ಲಿ ಹತ್ಯೆ ಮಾಡಲಾಗಿದೆ. ಬೈಕ್ ಮೆಕ್ಯಾನಿಕ್ ಆಗಿದ್ದ ಭಗತ್ ಬೆಳಿಗ್ಗೆ 11 ಗಂಟೆಗೆ ಕೆಲವು ದಾಖಲೆಗಳನ್ನು ತರಲು ಪೊಲೀಸ್ ಠಾಣೆಯಿಂದ ಮನೆಗೆ ತೆರಳುತ್ತಿದ್ದಾಗ  ಬೆನ್ನಟ್ಟಿ ಕೊಲೆ ಮಾಡಲಾಗಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಉದಂಪೂರ್ ಠಾಣಾ ಅಧಿಕಾರಿ ವಿಜಯ್ ಚೌದರಿ, ’ಭಗತ್ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಭೂ ವಿವಾದ ಭಾಗಿಯಾಗಿದ್ದು, ಭೂ ವಿವಾದಕ್ಕಾಗಿ ಯುವಕನನ್ನು ಕೊಲ್ಲಲಾಯಿತು. ಇದು ಲ್ಯಾಂಡ್ ಮಾಫಿಯಾದ ಪ್ರಕರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿದೆ’ ಎಂದು ಹೇಳಿದ್ದಾರೆ.

ಆದರೆ ಗ್ರಾಮದ ನಿವಾಸಿಗಳು, ಸಂತ್ರಸ್ತನು ತನ್ನ ಜಮೀನನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವವರ ಬಗ್ಗೆ ನ್ಯಾಯಾಲಯವನ್ನು ಸಂಪರ್ಕಿಸಿದ ನಂತರ ವಿವಾದ ಉಂಟಾಯಿತು ಎಂದಿದ್ದಾರೆ.

“ಹಲವು ವರ್ಷಗಳ ಹಿಂದೆ ಭಗತ್‌ನ ಅನಕ್ಷರಸ್ಥ ಅಜ್ಜ ಹಳ್ಳಿಯ ಕೆಲವರಿಗೆ ಭೂಮಿಯನ್ನು ಮಾರಿದ್ದು, ಅವರ ಮರಣದ ನಂತರ ಮೇಲ್ಜಾತಿಯ ಜನರನ್ನೊಳಗೊಂಡ ಲ್ಯಾಂಡ್ ಮಾಫಿಯಾವು ಸಂಪೂರ್ಣ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಲು ಪ್ರಾರಂಭಿಸಿತು. ಅದಕ್ಕಾಗಿ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯನ್ನು ಹಿಂಪಡೆಯುವಂತೆ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು, ದಾವೆಯನ್ನು ಕುಟುಂಬ ಮುಂದುವರೆಸಿತ್ತು” ಎಂದು ಗ್ರಾಮಸ್ಥರಾದ ಕಬೀರ್ ಸಂಘಟನ್ ಅಧ್ಯಕ್ಷ ರಾಮ್ ಲಾಲ್ ಹೇಳಿದ್ದಾರೆ.

ಪೊಲೀಸರು ಜಾತಿ ಆಧಾರದಲ್ಲಿ ಹತ್ಯೆ ಆಗಿಲ್ಲ ಎಂದು ಹೇಳುತ್ತಿದ್ದರೆ ದಲಿತರಾಗಿರದಿದ್ದರೆ ತಮ್ಮ ಮಗನನ್ನು ಕೊಲ್ಲಲಾಗುತ್ತಿರಲಿಲ್ಲ ಎಂದು ಕುಟುಂಬವು ಪ್ರತಿಪಾದಿಸಿದೆ.

ರಾಹುಲ್ ಭಗತ್‌ಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಜಮ್ಮುವಿನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, “ಜಾತಿ ತಾರತಮ್ಯವನ್ನು ನಿಲ್ಲಿಸಿ”, “ದಲಿತ ಲೈವ್ಸ್ ಮ್ಯಾಟರ್,” “ಜಸ್ಟೀಸ್ ಫಾರ್ ರಾಹುಲ್ ಭಗತ್” ಫಲಕಗಳನ್ನು ಹಿಡಿದು ಪ್ರತಿಭಟನೆಗಳು ನಡೆಯುತ್ತಿದೆ.

ಚಿತ್ರ ಕೃಪೆ: ನ್ಯೂಸ್ ಕ್ಲಿಕ್

“ಇದು ಜಾತಿ ಹಿಂಸಾಚಾರದ ಶುದ್ಧ ಪ್ರಕರಣವಾಗಿದ್ದು. ಮೃತ ದೇಹವನ್ನು ಬಹುತೇಕ ವಿರೂಪಗೊಳಿಸಿ ದಲಿತರಲ್ಲಿ ಭಯ ಹುಟ್ಟಿಸುಂತೆ ಮಾಡಲಾಗಿದೆ. ಅವರು ಯಾವುದೇ ದಲಿತರು ಮತ್ತೆ ಧ್ವನಿ ಎತ್ತದಂತೆ ಬಯಸಿದ್ದರು. ಇದು ಮೊದಲ ಪ್ರಕರಣವಲ್ಲ. ಈ ಹಿಂದೆ ಇದೇ ರೀತಿಯ ಘಟನೆಗಳು ನಡೆದಿವೆ ಹಾಗೂ ಪೊಲೀಸರು ಯಾವಾಗಲೂ ಪ್ರಕರಣಗಳನ್ನು ಭೂ ವಿವಾದಗಳು ಎಂದು ಮುಚ್ಚಿ ಹಾಕುತ್ತಾರೆ. ಈಗ ನಾವು ಸುಮ್ಮನಿರುವುದಿಲ್ಲ” ಎಂದು ಅಂಬೇಡ್ಕರ್ ಯುವ ಸಂಘಟನ್ ಅಧ್ಯಕ್ಷ ಸತೀಶ್ ವಿದ್ರೋಹಿ ಹೇಳಿದ್ದಾರೆ.

ಸ್ಥಳೀಯ ಉಧಂಪುರ್ ಪೊಲೀಸರು  ಆರೋಪಿಗಳ ಪರವಾಗಿದ್ದು ಹಾಗೂ ಹತ್ಯೆಯಲ್ಲಿ ಪೊಲೀಸರು ಕೂಡಾ ಭಾಗಿಯಾಗಿದ್ದಾರೆ ಆದ್ದರಿಂದ ಪ್ರಕರಣವನ್ನು ಹೊರಗಿನಿಂದ ತನಿಖೆ ನಡೆಸಬೇಕೆಂದು ಹತ್ಯಗೀಡಾದ ಭಗತ್ ಕುಟುಂಬ ಹಾಗೂ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಯಾಕೆಂದರೆ ಪೊಲೀಸ್ ಠಾಣೆಯಿಂದ ಭಗತ್ ಒಬ್ಬಂಟಿಯಾಗಿ ಹೋಗುತ್ತಿದ್ದಾರೆ ಎಂದು ಹಂತಕರಿಗೆ ಹೇಗೆ ಗೊತ್ತಾಯಿತು ಎಂಬ ಪ್ರಶ್ನೆಯನ್ನು ಸಾಮಾಜಿಕ ಕಾರ್ಯಕರ್ತರು ಇಟ್ಟಿದ್ದಾರೆ. 


ಓದಿ: ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...