ಬಜರಂಗದಳ ಮುಖಂಡನಿಂದ ಹತ್ಯೆಗೊಳಗಾದ ದಲಿತ ಯುವಕನಿಗೆ ನ್ಯಾಯ ಸಿಗಬೇಕು ಮತ್ತು ಆರೋಪಿ ಕೃಷ್ಣನನ್ನು ಬಂಧಿಸಬೇಕೆಂದು ಎಂದು ಒತ್ತಾಯಿಸಿ ಬೆಳ್ತಂಗಡಿಯಿಂದ ಧರ್ಮಸ್ಥಳದ ಕನ್ಯಾಡಿವರೆಗೆ ಶುಕ್ರವಾರ ಸಂಜೆ 7 ಗಂಟೆಗೆ ಪಾದಯಾತ್ರೆ ನಡೆಸಲು ಕಾಂಗ್ರೆಸ್ ಮತ್ತು ಪ್ರಗತಿಪರ ಸಂಘಟನೆಗಳು ನಿರ್ಧರಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಬಳಿಯ ಕನ್ಯಾಡಿ ಗ್ರಾಮದ ಪರಶಿಷ್ಟ ಜಾತಿಗೆ ಸೇರಿದ ದಿನೇಶ್ (40) ಎಂಬ ಯುವಕನನ್ನು ಅದೇ ಗ್ರಾಮದ ಕೃಷ್ಣ ಎಂಬ ಬಜರಂಗದಳ ಮುಖಂಡನೊಬ್ಬ ತೀವ್ರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಆತ ಹಲ್ಲೆ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರಯಾಗಿವೆ. ಅದರಲ್ಲಿ ದಿನೇಶ್ ಎಂಬ ದಲಿತ ಯುವಕನನ್ನು ಬಜರಂಗದಳ ಮುಖಂಡ ಕೃಷ್ಣ ಎಳೆದಾಡಿ, ಥಳಿಸುವುದು ದಾಖಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ
ಫೆಬ್ರವರಿ 23 ರಂದು ಕೃಷ್ಣ ಎಂಬ ಬಜರಂಗದಳ ಮುಖಂಡನು ದಿನೇಶ್‌ಗೆ ನಿನ್ನ ಜಮೀನನ ದಾಖಲೆಗಳನ್ನು ನಾನು ಮಾಡಿಕೊಟ್ಟಿದ್ದೇನೆ. ಆದರೆ ನೀನು ಯಾವಾಗಲೂ ಕಾಂಗ್ರೆಸ್ ಕಾಂಗ್ರೆಸ್ ಎಂದು ಬೊಬ್ಬೆ ಹಾಕುತ್ತೀಯೆ ಎಂದು ಬೈದಿದ್ದಾರೆ. ಆಗ ಕೊಲೆಗೀಡಾದ ದಿನೇಶ್ ಇಲ್ಲ ನನ್ನ ಜಮೀನಿನ ದಾಖಲೆಗಳನ್ನು ಕಾಂಗ್ರೆಸ್‌ನವರು ಮಾಡಿಕೊಟ್ಟಿದ್ದಾರೆ ಸಾರ್ವಜನಿಕವಾಗಿ ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಕೃಷ್ಣ ದಿನೇಶ್‌ಗೆ ಮನಬಂದಂತೆ ಥಳಿಸಿದ್ದಾನೆ. ಆತನ ಹೊಟ್ಟೆ ಮೇಲೆ ಕೈಯಿಂದ ಗುದ್ದಿ, ಕಾಲಿನಿಂದ ಒದ್ದಿದ್ದಾನೆ. ಇಷ್ಟೆಲ್ಲಾ ಹೊಡೆದಾಗ ದಿನೇಶ್ ತನ್ನ ಬಳಿ ಹಣವಿಲ್ಲದ ಕಾರಣ ಹೊಟ್ಟೆ ನೋವೆಂದು ಮನೆಯಲ್ಲಿ ಅಳುತ್ತಾ, ಒದ್ದಾಡುತ್ತಿದ್ದನು. ಆಗ ಕಾರಣ ಕೇಳಿದಾಗ ಕೃಷ್ಣ ಥಳಿಸಿದ್ದನ್ನು ಮನೆಯವರಿಗೆ ತಿಳಿಸಿದ್ದಾನೆ.
ಇದರಿಂದ ಕುಪಿತಗೊಂಡ ಮನೆಯವರು ಕೃಷ್ಣನ ಬಳಿ ಜಗಳವಾಡಿ, ನೀನೆ ಆಸ್ಪತ್ರೆಗೆ ತೋರಿಸು ಎಂದು ತಾಕೀತು ಮಾಡಿದ್ದಾರೆ. ಕೃಷ್ಣ ಫೆಬ್ರವರಿ 24 ರಂದು ಸಂತ್ರಸ್ತ ದಿನೇಶ್ ರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ವೈದ್ಯರ ಬಳಿ ಸುಳ್ಳು ಹೇಳಿದ್ದಾನೆ. ಆದರೆ ಹೊಟ್ಟೆಯಲ್ಲಿನ ಒಳನೋವುಗಳಿಂದ ಬಳಲುತ್ತಿದ್ದ ದಿನೇಶ್ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 25ರ ಬೆಳಗ್ಗಿನ ಜಾವ 2.30ರಲ್ಲಿ ನಿಧನರಾಗಿದ್ದಾರೆ.
ಬಜರಂಗದಳ ಮುಖಂಡನಿಂದ ದಲಿತನ ಹತ್ಯೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಬಳಿಯ ಕನ್ಯಾಡಿ ಗ್ರಾಮದ ಪರಶಿಷ್ಟ ಜಾತಿಗೆ ಸೇರಿದ ದಿನೇಶ್ ನಾಯ್ಕ್ (40) ಎಂಬ ಕಾರ್ಮಿಕನನ್ನು ಕೃಷ್ಣ ಎಂಬ ಬಜರಂಗದಳ ಮುಖಂಡನೊಬ್ಬ ಹತ್ಯೆ ಮಾಡಿದ್ದಾನೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. pic.twitter.com/iEEHumOTId
— Naanu Gauri (@naanugauri) February 25, 2022
ಈ ಕುರಿತು ಮೃತನ ತಾಯಿ ಪದ್ಮಾವತಿಯವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿ ಇತರ ಕಾಲಂಗಳಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ನಡೆಯುತ್ತಿದೆ. ಆದರೆ ಇದುವರೆಗೂ ಆರೋಪಿಯ ಬಂಧನವಾಗಿಲ್ಲ.
ಪ್ರಕರಣದ ಆರೋಪಿ ಕೃಷ್ಣ ಎಂಬಾತನು ಭಾಸ್ಕರ್ ಧರ್ಮಸ್ಥಳ ಎಂಬ ಸ್ಥಳೀಯ ಬಜರಂಗದಳದ ಜಿಲ್ಲಾ ಸಂಚಾಲಕನ ಸಹೋದರ ಎನ್ನಲಾಗಿದೆ.
“ಬೆಳ್ತಂಗಡಿಯ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲರವರು ನಾನುಗೌರಿ ಜೊತೆಗೆ ಮಾತನಾಡಿ, “ಆರೋಪಿಗಳು ಪ್ರಬಲ ರಾಜಕೀಯ ಬೆಂಬಲ ಹೊಂದಿರುವ ಕಾರಣಕ್ಕೆ ಅವರನ್ನು ಇನ್ನೂ ಬಂಧಿಸಿಲ್ಲ. ಇದು ಕೊಲೆ ಪ್ರಕರಣವಾಗಿದೆ ಮತ್ತು ಎಸ್‌ಸಿ, ಎಸ್ಟಿ ಅಟ್ರಾಸಿಟಿ ಕಾಯ್ದೆಯಡಿ ಬರುತ್ತದೆ. ಆದರೂ ಆರೋಪಿಗಳನ್ನು ಬಂಧಿಸಿಲ್ಲ. ಹಾಗಾಗಿ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಪ್ರಗತಿಪರ ಸಂಘಟನಗಳು ಬೆಳ್ತಂಗಡಿಯಿಂದ ಧರ್ಮಸ್ಥಳ ಕನ್ಯಾಡಿವರೆಗೂ ಪಾದಯಾತ್ರೆ ನಡೆಸುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ: ಬಜರಂಗದಳ ಮುಖಂಡನಿಂದ ದಲಿತ ಯುವಕನ ಹತ್ಯೆ – ಪ್ರಕರಣ ದಾಖಲು


