ಮಹಿಳೆಯೊಬ್ಬನ್ನು ಆಕಸ್ಮಿಕವಾಗಿ ಮುಟ್ಟಿದ ಆರೋಪದ ಮೇಲೆ 16 ವರ್ಷದ ಮುಸ್ಲಿಂ ಬಾಲಕನನ್ನು ಸ್ಥಳೀಯರು ಕ್ರೂರವಾಗಿ ಥಳಿಸಿರುವ ಘಟನೆ ಏಪ್ರಿಲ್ 28 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಘಟನೆ ಬಗ್ಗೆ ಸ್ಥಳೀಯ ವರದಿಗಾರರೊಂದಿಗೆ ಮಾತನಾಡಿದ ರೆಹಾನ್, ಕಾಶಿ ವಿಶ್ವನಾಥ ದೇವಸ್ಥಾನದ ಬಳಿಯ ದಶಾಶ್ವಮೇಧ ಘಾಟ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತನ್ನ ಕೈ ಆಕಸ್ಮಿಕವಾಗಿ ಮಹಿಳೆಯನ್ನು ಸ್ಪರ್ಶಿಸಿದೆ ಎಂದು ಹೇಳಿದರು. ಬಾಲಕ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆಂದು ಭಾವಿಸಿ ಆಕೆ ಎಚ್ಚರಿಕೆ ನೀಡಿದ್ದಾರೆ.
ಆದರೆ, ಶೀಘ್ರದಲ್ಲೇ ರೆಹಾನ್‌ನನ್ನು ಸುತ್ತುವರೆದ ಜನರು, ಆತನ ಹೆಸರು ಮತ್ತು ಧರ್ಮದ ಹಿನ್ನಲೆ ಪ್ರಶ್ನಿಸಿದರು. ಕೂಡಲೇ ಆತನನ್ನು ಹತ್ತಿರದ ದೇವಸ್ಥಾನಕ್ಕೆ ಕರೆದೊಯ್ದು ಸುಮಾರು ಎರಡು ಗಂಟೆಗಳ ಕಾಲ ಕೋಲುಗಳಿಂದ ಹಲ್ಲೆ ನಡೆಸಿದರು ಎಂದು ಹುಡುಗ ಆರೋಪಿಸಿದ್ದಾನೆ.
ರೆಹಾನ್‌ಗೆ ಗಂಭೀರ ಗಾಯಗಳಾಗಿದ್ದವು; ಅವರ ಉಗುರುಗಳನ್ನು ಕ್ರೂರವಾಗಿ ಹೊರತೆಗೆದು ಬೆರಳುಗಳಿಗೆ ಹಾನಿ ಮಾಡಿದ್ದಾರೆ. ಬಾಲಕ ಹೇಗೋ ಮನೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದು, ಅಲ್ಲಿಂದ ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಸ್ತುತ ಆತನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.
ಅಲಿಘಢ| ಪಾಕ್ ಧ್ವಜದ ಮೇಲೆ ಮೂತ್ರ ವಿಸರ್ಜಿಸುವಂತೆ ಬಾಲಕನಿಗೆ ಬಲಪಂಥೀಯ ಗುಂಪಿನಿಂದ ಒತ್ತಾಯ


