Homeಕರ್ನಾಟಕವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ ನೀಡಿ ‘ಮುಸ್ಲಿಂ ದ್ವೇಷ’ ಹರಡಿದ ದಿಗ್ವಿಜಯ & ಪಬ್ಲಿಕ್...

ವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ ನೀಡಿ ‘ಮುಸ್ಲಿಂ ದ್ವೇಷ’ ಹರಡಿದ ದಿಗ್ವಿಜಯ & ಪಬ್ಲಿಕ್ ಟಿವಿ

- Advertisement -
- Advertisement -

ಹಣಕಾಸಿನ ವಿಚಾರವಾಗಿ ಪರಸ್ಪರ ದ್ವೇಷದಿಂದ ಸಂಚಿನಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಸೋಮವಾರದಂದು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಆದರೆ ಕನ್ನಡ ಸುದ್ದಿ ಚಾನೆಲ್‌ಗಳಾದ ದಿಗ್ವಿಜಯ ನ್ಯೂಸ್ ಮತ್ತು ಪಬ್ಲಿಕ್ ಟಿವಿ ಘಟನೆಗೆ ‘ಕೋಮು ಆಯಾಮ’ವನ್ನು ಸೇರಿಸಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಹಲವಾರು ವರದಿ ಮಾಡುವ ಮೂಲಕ ‘ಕೋಮು ಗಲಭೆ’ಗೆ ಕುಮ್ಮಕ್ಕು ನೀಡಿವೆ.

ಘಟನೆಯ ವಿವರ

ಹೆಣ್ಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ, ಫಯಾಝ್‌ ಎಂಬುವರು 35 ಲಕ್ಷಕ್ಕೆ ಮನೆಯೊಂದನ್ನು ಮಾರಿದ್ದರು. ಈ ಮನೆಯನ್ನು ಅಝೀಮ್‌ ಎಂಬ ವ್ಯಕ್ತಿ ಮಾರಾಟ ಮಾಡಿಸಿದ್ದ. ಇದರ ನಂತರ ಮನೆಗೆ 40 ಲಕ್ಷ ನೀಡಬೇಕು ಎಂದು ಫಯಾಝ್‌‌ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಇಬ್ಬರ ನಡುವೆ ದ್ವೇಷ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಫಯಾಝ್, ಮುನಾವರ್‌ ಮತ್ತು ಅಸ್ಗರ್‌ ಎಂಬವರು ಸೇರಿ, ಅಝೀಮ್‌ ಮತ್ತು ಆತನ ಸಂಗಡಿಗರ ವಿರುದ್ದ ದ್ವೇಷದಿಂದ ಸಂಚೊಂದನ್ನು ರೂಪಿಸಿದ್ದರು. ಇದೀಗ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆರೋಪಿಗಳ ಬಳಿ ಹಲವು ಬಾಟಲ್‌‌ಗಳಷ್ಟು ಪೆಟ್ರೋಲ್ ಬಾಂಬ್‌, ನಾಡಾ ಪಿಸ್ತೂಲ್, ಜೀವಂತ ಗುಂಡು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿಕೊಳ್ಳಲಾಗಿದೆ. ಮೂವರು ಆರೋಪಿಗಳು ಸರಾಯಿ ಪಾಳ್ಯದ ನಿವಾಸಿಗಳು ಎಂದು ವರದಿಯಾಗಿದೆ.

ಕೋಮು ಗಲಭೆಗೆ ಕುಮ್ಮಕ್ಕು ನೀಡಿದ ಪಬ್ಲಿಕ್ ಟಿವಿ ಮತ್ತು ದಿಗ್ವಿಜಯ ಟಿವಿ

ಆರೋಪಿಗಳ ಬಂಧನ ನಡೆಯುತ್ತಿದ್ದಂತೆ ಪಬ್ಲಿಕ್ ಟಿವಿ ತನ್ನ ಒಂದು ವಿಡಿಯೊ ಸುದ್ದಿಯಲ್ಲಿ, “ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಸಂಚು. ಹನುಮಾನ್ ಚಾಲಿಸಾಗೆ ಪ್ರತಿಯಾಗಿ ಪೆಟ್ರೋಲ್ ಬಾಂಬ್. ಹಿಂದೂ ದೇವಸ್ಥಾನಗಳ ಮೇಲೆ ಪೆಟ್ರೋಲ್ ಬಾಂಬ್ ಹುನ್ನಾರ. ಹತ್ತು ಬಿಯರ್‌ ಬಾಟಲಿಗಳಲ್ಲಿ ಪೆಟ್ರೋಲ್ ದಾಳಿಗೆ ಪ್ಲಾನ್ ಮಾಡಿದ್ದಾರೆ” ಎಂದು ಕಪೋಲಕಲ್ಪಿತ ಸುಳ್ಳು ವರದಿ ಮಾಡಿದೆ.

ಇದನ್ನೂ ಓದಿ: ಗಲಭೆಗೆ ಪ್ರಚೋದನೆ: ಪಬ್ಲಿಕ್ ಟಿವಿ ರಂಗನಾಥ್‌ ವಿರುದ್ಧ ಜಾಮೀನು ರಹಿತ ಕೇಸ್‌ ದಾಖಲಿಸುವಂತೆ ಕೋರ್ಟ್‌ ಸೂಚನೆ

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್‌‌ ಕೂಡಾ, ಯಾವುದೆ ಆಧಾರವಿಲ್ಲದೆ ಕೋಮು ಗಲಭೆಗೆ ಕುಮ್ಮಕ್ಕು ನೀಡುವಂತೆ ಮಾತನಾಡುತ್ತಾ ಮುಸ್ಲಿಂ ದ್ವೇಷ ಹರಡುವಂತೆ ಮಾತನಾಡಿದ್ದಾರೆ. ಅವರು ನಿರೂಪಣೆ ಮಾಡುತ್ತಾ, ಕುರಾನ್‌, ಹರಾಂ ವಿಚಾರ ಹೇಳುತ್ತಾ, ಘಟನೆಗೆ ಇಡೀ ಮುಸ್ಲಿಂ ಸಮುದಾಯ ಕಾರಣ ಹಾಗೂ ಕೋಮು ಗಲಭೆಗೆ ಅವರೇ ಹೇಳಿಕೊಡುತ್ತಾರೆ ಎಂಬಂತೆ ವೀಕ್ಷಕರನ್ನು ದಾರಿ ತಪ್ಪಿಸಿದ್ದಾರೆ.

ಪಬ್ಲಿಕ್ ಟಿವಿ ಯಾವುದೆ ಆಧಾರವಿಲ್ಲದೆ, ಕೋಮು ದ್ವೇಷ ಹರಡುವ ಇಂತಹ ಹಲವು ವಿಡಿಯೊ ಸುದ್ದಿಗಳನ್ನು ಇದೇ ಪ್ರಕರಣದ ವಿಚಾರವಾಗಿ ಮಾಡಿದೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಕನ್ನಡ ಮತ್ತೊಂದು ಸುದ್ದಿ ಮಾಧ್ಯಮವಾದ ದಿಗ್ವಿಜಯ ನ್ಯೂಸ್ ಕೂಡಾ ಇದೇ ರೀತಿಯ ಸುದ್ದಿಯನ್ನು ಮಾಡಿದೆ. ಅದನ್ನು ಕೆಳಗೆ ನೋಡಬಹುದು.

ಪೊಲೀಸರು ಹೇಳಿದ್ದೇನು?

ವೈಯಕ್ತಿಕ ದ್ವೇಷ ಹಿನ್ನಲೆಯಲ್ಲಿ ನಡೆದ ಸಂಚನ್ನು ವಿಫಲಗೊಳಿಸಿ ಆರೋಪಿಗಳನ್ನು ಬಂಧಿಸುತ್ತಿದ್ದಂತೆ, ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಘಟನೆಗೆ ಕೋಮು ಆಯಾಮ ನೀಡಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವಲ್ಲಿ ನಿರತವಾಗಿದ್ದವು. ಈ ವೇಳೆ ಪತ್ರಿಕಾಗೋಷ್ಠಿ ನಡೆಸಿದ ಡಿಸಿಪಿ ಭೀಮಾ ಶಂಕರ್ ಗುಳೇದ್, “ಪ್ರಕರಣವು ವೈಯಕ್ತಿಕ ದ್ವೇಷದ್ದಾಗಿದ್ದು, ಯಾವುದೆ ಕೋಮು ಆಯಾಮದಿಂದ ನಡೆದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಪ್ಯಾಲೆಸ್ತೀನ್‌‌ನ ದಿಟ್ಟ ಬಾಲಕಿಯನ್ನು ಉಕ್ರೇನ್‌‌‌ನವರು ಎಂದು ವರದಿ ಮಾಡಿದ ಪಬ್ಲಿಕ್ ಟಿವಿ ಮತ್ತು ಸುವರ್ಣ ಟಿವಿ!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಪಿ, “ಫಯಾಝ್‌ ಎಂಬುವರು 35 ಲಕ್ಷಕ್ಕೆ ಮನೆಯೊಂದನ್ನು ಮಾರಿದ್ದರು. ಈ ಮನೆಯನ್ನು ಅಝೀಮ್‌ ಎಂಬ ವ್ಯಕ್ತಿ ಮಾರಾಟ ಮಾಡಿಸಿದ್ದ. ಇದರ ನಂತರ ಮನೆಗೆ 40 ಲಕ್ಷ ನೀಡಬೇಕು ಎಂದು ಫಯಾಝ್‌‌ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಇಬ್ಬರ ನಡುವೆ ದ್ವೇಷ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಫಯಾಝ್, ಮುನಾವರ್‌ ಮತ್ತು ಅಸ್ಗರ್‌ ಎಂಬವರು ಸೇರಿ, ಅಝೀಮ್‌ ಮತ್ತು ಆತನ ಸಂಗಡಿಗರ ವಿರುದ್ದ ದ್ವೇಷದಿಂದ ಸಂಚೊಂದನ್ನು ರೂಪಿಸಿದ್ದರು. ಆದರೆ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ”ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೂ, ಹಿಂದೂಗಳ ಕೊಲೆಗೆ ಸಂಚು ಎಂಬ ಮಾಧ್ಯಮ ವರದಿಗೂ ಯಾವುದೇ ಸಂಬಂಧವಿಲ್ಲ ಎಂದು ಭೀಮಾ ಶಂಕರ್ ಗುಳೇದ್ ಹೇಳಿದ್ದು, “ಯಾವುದೇ ದೇವಸ್ಥಾನಕ್ಕೂ ದಾಳಿ ಮಾಡಲು ಸಂಚು ರೂಪಿಸಿರಲಿಲ್ಲ. ಇದು ವೈಯಕ್ತಿಕ ದ್ವೇಷ ಹಿನ್ನಲೆಯಲ್ಲಿ ನಡೆದ ಘಟನೆ. ಯಾವುದೆ ಸಂಘಟನೆಯ ಕೈವಾಡ ಪ್ರಕರಣದಲ್ಲಿ ಇಲ್ಲ. ಅಲ್ಲದೆ ಪೆಟ್ರೋಲ್ ಬಾಂಬ್ ಹಾಕುವ ಯಾವುದೆ ಉದ್ದೇಶ ಇರಲಿಲ್ಲ. ಪೆಟ್ರೋಲ್ ಬಾಂಬ್ ರೆಡಿ ಮಾಡಿಟ್ಟು, ಅದನ್ನು ವಿರೋಧಿ ಗುಂಪಿನ ಮೇಲೆ ಗೂಬೆ ಕೂರಿಸುವ ಉದ್ದೇಶ ಅವರಿಗೆ ಇತ್ತು” ಎಂದು ತಿಳಿಸಿದ್ದಾರೆ.

ಕೋಮು ದ್ವೇಷ ಹರಡಿದ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಡಿಸಿಪಿ ಆಕ್ರೋಶ

ಪತ್ರಿಕಾಗೋಷ್ಠಿಯ ವೇಳೆ ಪಬ್ಲಿಕ್ ಟಿವಿ ವರದಿಗಾರ ಮುರಳಿ ಎಂಬವರ ಮೇಲೆ ಡಿಸಿಪಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡಾ ನಡೆದಿದೆ. ವರದಿಗಾರ ಮುರಳಿ ಎಂಬವರು ಘಟನೆಗೆ, ಕೋಮು ಆಯಾಮ ಇದೆಯೆ ಎಂಬಂತ ಪ್ರಶ್ನೆಗಳನ್ನು ಪದೇ ಪದೇ ಕೇಳಿದಾಗ ಆಕ್ರೋಶ ಭರಿತರಾದ ಡಿಸಿಪಿ, “ಘಟನೆಗೆ ಯಾವುದೆ ಕೋಮು ಆಯಾಮ ಇಲ್ಲ ಎಂಬ ಬಗ್ಗೆ ನಾನು ಬೆಳಿಗ್ಗೆಯೆ ನಿಮಗೆ ಸ್ಪಷ್ಟವಾಗಿ ಹೇಳಿದ್ದೇನೆ. ಆದರೂ ನೀವು ಆ ತರ ಬರೆಯುತ್ತೀರಲ್ಲ. ನಾನು ನಿಮಗೆ ತುಂಬಾ ತುಂಬಾ ನಿರ್ದಿಷ್ಠವಾಗಿ ಹೇಳಿದ್ದೇನೆ” ಎಂದು ಹೇಳಿದ್ದಾರೆ.

“ಈ ಘಟನೆಗೂ ಹಿಂದೂಗಳ ಭಜನೆಗೂ ಯಾವುದೆ ಸಂಬಂಧವಿಲ್ಲ ಎಂದು ಹೇಳಿದ್ದೇನೆ. ಬಾಯಿಗೆ ಬಂದಿದ್ದು ಬರೀತಿರಾ ನೀವು. ಏನು ಬರೆದಿದ್ದೀರಾ ನೀವು? ನೋಡಿ” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: 2000 ನೋಟಲ್ಲಿ ‘ಚಿಪ್‌ ವರದಿ’ಯ ಮೂಲವನ್ನು ಬಿಚ್ಚಿಟ್ಟ ಪಬ್ಲಿಕ್ ಟಿವಿ ನಿರೂಪಕ?

‘ನಾನು ಆಂಕರ್‌, ನೀವು ವರದಿಗಾರನೊಂದಿಗೆ ವಿಚಾರಿಸಿ’: ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್‌

ಯಾವುದೆ ಆಧಾರವಿಲ್ಲದೆ ವರದಿ ನಿರೂಪಿಸಿದ ಪತ್ರಕರ್ತ ಅರುಣ್ ಬಡಿಗೇರ್‌ ಬಳಿ ನಾನುಗೌರಿ.ಕಾಂ ಪ್ರತಿಕ್ರಿಯೆ ಕೇಳಿದಾಗ ಅವರು, “ನಾನು ನಿರೂಪಕ ಮಾತ್ರ, ನೀವು ವರದಿಗಾರನೊಂದಿಗೆ ವಿಚಾರಿಸಿ” ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿ ಸಂಪಾದಕ ಎಚ್‌.ಆರ್‌. ರಂಗನಾಥ್ ಮತ್ತು ನಿರೂಪಕ ಅರುಣ್ ಬಡಿಗೇರ್‌ ವಿರುದ್ದ ಈ ಹಿಂದೆ ಕೂಡಾ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದರು. ಅವರ ವಿರುದ್ದ ಎಫ್‌ಐಆ‌ರ್‌ ದಾಖಲಿಸಲು ನ್ಯಾಯಾಲಯ ಆದೇಶ ಕೂಡಾ ನೀಡಿತ್ತು. ಹಿಜಾಬ್‌ ವಿಚಾರದ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವಾಗ ‘ಭಾರತವು ಹಿಂದೂ ಧರ್ಮದ ಆಧಾರಲ್ಲಿ ನಿರ್ಮಾಣವಾಗಿದೆ’ ಎಂದು ಹೇಳಿದ್ದರು. ಹೀಗಾಗಿ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...

ಬುರ್ಖಾ ಧರಿಸದ ಕಾರಣಕ್ಕೆ ಪತ್ನಿ-ಮಕ್ಕಳ ಕೊಲೆ; ಮನೆಯೊಳಗೆ ಹೂತುಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಘೋರ ಘಟನೆಯಿಂದು ವರದಿಯಾಗಿದೆ, ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ತ್ರಿವಳಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಫಾರೂಕ್ ಎಂದು...

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ವಿಶೇಷ ಕಾರ್ಯಾಚರಣೆ: ಮೊಬೈಲ್ ಫೋನ್, ಗಾಂಜಾ ವಶ: ಡಿಜಿಪಿ ಅಲೋಕ್ ಕುಮಾರ್

ಕರ್ನಾಟಕದ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾಕುಗಳು ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿದ್ದುಪಡಿ ಸೌಲಭ್ಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು...