Homeಮುಖಪುಟ#KarnatakaGovtScams ಟಿಟ್ವರ್‌‌ನಲ್ಲಿ ಟ್ರೆಂಡಿಂಗ್‌

#KarnatakaGovtScams ಟಿಟ್ವರ್‌‌ನಲ್ಲಿ ಟ್ರೆಂಡಿಂಗ್‌

- Advertisement -
- Advertisement -

#KarnatakaGovtScams, #BJPಸರಕಾರವಜಾಗೊಳಿಸಿ ಹ್ಯಾಷ್‌ಟ್ಯಾಗ್‌ಗಳು ಸೋಮವಾರ ತಡರಾತ್ರಿಯವರೆಗೂ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಆಗಿದ್ದು, ಹಲವಾರು ಜನ ಟ್ವೀಟ್‌ ಮಾಡಿದ್ದಾರೆ.

ರಾಜ್ಯದಲ್ಲಿ ಒಂದಲ್ಲ ಒಂದು ಹಗರಣಗಳು ಬಯಲಿಗೆ ಬರುತ್ತಿವೆ. ಇದರ ನಡುವೆ ಕೋಮು ಪ್ರಚೋದನೆಯ ಘಟನೆಗಳು ನಡೆಯುತ್ತಿವೆ. ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಕೋಮುದ್ವೇಷ ಹರಡಲಾಗುತ್ತಿದೆ ಎಂಬ ಆರೋಪಗಳ ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶೇ. 40 ಭ್ರಷ್ಟಾಚಾರ ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಕೆಲವೇ ದಿನಗಳಲ್ಲಿ ಪಿಎಸ್‌ಐ ಪರೀಕ್ಷೆ ಹಗರಣ ಮುನ್ನೆಲೆಗೆ ಬಂದಿತು. ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಭವಿಷ್ಯದ ಕುರಿತು ಕನಸು ಕಾಣುತ್ತಿದ್ದ ಅಭ್ಯರ್ಥಿಗಳು ಕಾನೂನು ಸಮರಕ್ಕೆ ಇಳಿದಿದ್ದಾರೆ.

ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌, “2,500 ಕೋಟಿ ರೂ. ಕೊಟ್ಟರೆ ಮುಖ್ಯಮಂತ್ರಿ ಮಾಡಿಸುತ್ತೇವೆ ಎಂದು ಕೆಲವರು ನನ್ನ ಬಳಿ ಬಂದಿದ್ದರು” ಎಂದು ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇದೆಲ್ಲದರಿಂದ ಸರ್ಕಾರ ಪೇಚಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ #KarnatakaGovtScams #BJPಸರಕಾರವಜಾಗೊಳಿಸಿ ಹ್ಯಾಷ್‌ಟ್ಯಾಗ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್‌ ಮಜೀದ್‌, “ಬಿಟ್‌ಕಾಯಿನ್‌, ಮೊಟ್ಟೆ ಹಗರಣ, 40% ಕಮಿಷನ್‌ ಹಗರಣ, ಪಿಎಸ್‌ಐ ಹಗರಣ, ಸಹಾಯಕ ಹುದ್ದೆ ಪರೀಕ್ಷೆ ಹಗರಣ, ಜೆಇಇ ಹಗರಣ, ಬಿಬಿಎಂಪಿ ಹಗರಣ, ಶಾಲಾ ಸಮವಸ್ತ್ರ ಹಗರಣ, ಮೆಡಿಕಲ್‌ ಸೀಟ್ ಹಗರಣ” ಎಂದು ಪಟ್ಟಿ ಮಾಡಿದ್ದು, ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

ಎಸ್‌ಡಿಪಿಐನ ಮತ್ತೊಬ್ಬ ನಾಯಕರಾದ ಬಿ.ಆರ್‌.ಭಾಸ್ಕರ್‌ಪ್ರಸಾದ್‌ ಟ್ವೀಟ್‌ ಮಾಡಿ, “ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು” ಎಂದು ಒತ್ತಾಯಿಸಿದ್ದಾರೆ.

ಮಲ್ಪೆ ಬೀಚ್‌ನಲ್ಲಿ ನಿರ್ಮಿಸಲಾಗಿದ್ದ ತೇಲು ಮಂಚ ಮುರಿದುಬಿದ್ದದ್ದನ್ನು 40% ಕಮಿಷನ್‌ ಪ್ರಕರಣಕ್ಕೆ ಲಿಂಕ್‌ ಮಾಡಿ ಅನೇಕರು ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿರಿ: ವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ: ಪತ್ರಿಕಾಗೋಷ್ಠಿಯಲ್ಲೇ ‘ಪಬ್ಲಿಕ್ ಟಿವಿ’ ಪತ್ರಕರ್ತನಿಗೆ ಡಿಸಿಪಿ ಕ್ಲಾಸ್!

“#KarnatakaGovtScamsಗೆ ಯಾವುದೇ ಒಂದು ಪಕ್ಷ ಹೊಣೆಯಲ್ಲ. ಇದು ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಸಾಮೂಹಿಕ ವೈಫಲ್ಯ. ಇದು ಹಿಂದೆ ಸಂಭವಿಸಿದೆ, ಈಗ ನಡೆಯುತ್ತಿದೆ ಮತ್ತು ಭವಿಷ್ಯದಲ್ಲಿ ಮುಂದುವರಿಯುತ್ತದೆ (ನೀವು ಎಚ್ಚರಗೊಳ್ಳದಿದ್ದರೆ)” ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....