ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ಸಂಯೋಜಿತ ಸಂಘಟನೆಯಾದ ರಾಷ್ಟ್ರೀಯ ಕಲಾ ಮಂಚ್ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಸುತ್ತುವರೆದು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ನಂತರ ವಿಶ್ವವಿದ್ಯಾಲಯದಲ್ಲಿ ಗಲಾಟೆ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಯರ
ಗಲಾಟೆ ವೇಳೇ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಬಗ್ಗೆ ವರದಿಯಾಗಿದೆ. ಘಟನೆಯನ್ನು ವಿದ್ಯಾರ್ಥಿ ಸಂಘಟನೆಗಳಾದ ಎಸ್‌ಎಫ್‌ಐ, ಮತ್ತು ಎನ್‌ಎಸ್‌ಯುಐನ ಜೆಎಂಐ ಘಟಕವು ಖಂಡಿಸಿದ್ದು, ಹಿಂದುತ್ವ ವಿದ್ಯಾರ್ಥಿ ಘಟಕವು ಕ್ಯಾಂಪಸ್‌ನಲ್ಲಿ ಶಾಂತಿಗೆ ಭಂಗ ತಂದಿದೆ ಎಂದು ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಘರ್ಷಣೆಗೆ ಕಾರಣವಾದ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಕ್ಕಾಗಿ ವಿಶ್ವವಿದ್ಯಾಲಯದ ಆಡಳಿತವನ್ನು ಎಸ್‌ಎಫ್‌ಐ ತರಾಟೆಗೆ ತೆಗೆದುಕೊಂಡಿದೆ. ‘ಜ್ಯೋತಿರ್ಮಯ 2024’ ಎಂಬ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಹಿರಿಯ ಆರ್‌ಎಸ್‌ಎಸ್ ಮತ್ತು ಎಬಿವಿಪಿ ನಾಯಕರು ಸೇರಿದಂತೆ ಕ್ಯಾಂಪಸ್‌ನ ಹೊರಗಿನ ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಮುಸ್ಲಿಂ ವಿದ್ಯಾರ್ಥಿಗಳನ್ನು ಸುತ್ತುವರೆದು ಜೈಶ್ರೀರಾಮ್ ಕೂಗಿದವರ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಮಾತ್ರ ಪೊಲೀಸರು ಲಾಠಿ ಚಾರ್ಜ್‌ನಲ್ಲಿ ಗುರಿ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಜಾಮಿಯಾದ ವಿದ್ಯಾರ್ಥಿಗಳಲ್ಲ ಮತ್ತು ನಿಗದಿತ ಸಮಯ ಮೀರಿದ ನಂತರವೂ ಅವರು ಸ್ಥಳ ಖಾಲಿ ಮಾಡಲು ನಿರಾಕರಿಸಿದರು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
Shame on Jamia Admin!
Shame on Jamia VC and Proctor!SFI Jamia condemns the attack on university students by outsider ABVP goons invited by the administration of Jamia. pic.twitter.com/7sc3ElgQSe
— SFI- Jamia Millia Islamia (@JmiSfi) October 22, 2024
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳು ”ಪ್ಯಾಲೆಸ್ತೀನ್ ಜಿಂದಾಬಾದ್” ಮತ್ತು “ಅಲ್ಲಾಹು ಅಕ್ಬರ್” ಘೋಷಣೆಗಳನ್ನು ಕೂಗಿದ್ದಾರೆ.
“ಹಬ್ಬದ ನೆಪದಲ್ಲಿ ಈ ಜನರು ತಮ್ಮ ಸ್ಥಳೀಯ ಗೂಂಡಾಗಳ ಗುಂಪಿನೊಂದಿಗೆ ಬಂದಿದ್ದರು. ಅವರು ಮುಸ್ಲಿಂ ವಿದ್ಯಾರ್ಥಿನಿಯರ ಮುಂದೆ ನಿಂತು ‘ಜೈ ಶ್ರೀ ರಾಮ್’ ಎಂದು ಕೋಮುವಾದಿ ಘೋಷಣೆಗಳನ್ನು ಕೂಗಲು ಪ್ರಯತ್ನಿಸಿದ್ದು, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ” ಎಂದು ಎಸ್ಎಫ್ಐ ಹೇಳಿಕೆಯಲ್ಲಿ ಹೇಳಿಕೊಂಡಿದೆ.
“ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ಅವರ ನಡವಳಿಕೆಯನ್ನು ವಿರೋಧಿಸಿದ್ದಾರೆ. ಈ ವೇಳೆ ಹಿಂದುತ್ವ ಸಂಘಟನೆಯ ರಾಜ್ಯ ನಾಯಕರ ನೇತೃತ್ವದ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಕ್ರೂರ ಹಿಂಸಾಚಾರ ನಡೆಸಿದ್ದಾರೆ. ಈ ಹಂತದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಭಾರೀ ಲಾಠಿ ಚಾರ್ಜ್ ನಡೆಸಿದ್ದಾರೆ. ಅವರ ಈ ಕಾರ್ಯಕ್ರಮ ಸಾಮಾನ್ಯ ವಿದ್ಯಾರ್ಥಿಗಳನ್ನು ನೋಯಿಸುವ ಮತ್ತು ಹೆದರಿಸುವಲ್ಲಿ ಕೊನೆಗೊಂಡಿತು. ಆದರೆ ನಿಜವಾದ ಗೂಂಡಾಗಳ ಮೇಲೆ ಪೊಲೀಸರು ಯಾವುದೆ ಕ್ರಮ ಕೈಗೊಂಡಿಲ್ಲ” ಎಂದು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.
“ನಾವು ನಡೆಸುವ ಯಾವುದೇ ಕಾರ್ಯಕ್ರಮಗಳ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಸಮಸ್ಯೆ ಮುಂದಿಡುತ್ತದೆ. ಅವರು ಯಾವಾಗಲೂ ನಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಾರೆ. ನಮ್ಮ ಕಲಿಕೆಗೆ ಅಡ್ಡಿಯಾಗುತ್ತದೆ ಮತ್ತು ನಮ್ಮ ಹೆಸರನ್ನು ಪೊಲೀಸರಿಗೆ ನೀಡುತ್ತೇವೆ ಎಂದು ಬೆದರಿಸುತ್ತಾರೆ” ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
“ಇದೇ ವಿಶ್ವವಿದ್ಯಾಲಯದ ಆಡಳಿತ ಆರ್‌ಎಸ್‌ಎಸ್ ಗೂಂಡಾಗಳನ್ನು ಕ್ಯಾಂಪಸ್‌ನೊಳಗೆ ನುಸುಳಲು ಅನುಮತಿ ನೀಡುತ್ತದೆ. ಅವರು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವ ಮೂಲಕ ಅವ್ಯವಸ್ಥೆ ಸೃಷ್ಟಿ ಮಾಡುತ್ತಾರೆ. ವಿಶೇಷವಾಗಿ ಮುಸ್ಲಿಂ ವಿದ್ಯಾರ್ಥಿನಿಗಳನ್ನು ಗುರಿಯಾಗಿಸಿಕೊಂಡು ಅವರು ಸಮಸ್ಯೆ ಸೃಷ್ಟಿಸುತ್ತಾರೆ. ನಂತರ ನಡೆದ ಎಲ್ಲಾ ಘಟನೆ ಈ ಕ್ರಿಯೆಗಳ ಪರಿಣಾಮವಾಗಿದೆ” ಎಂದು ಅವರು ಹೇಳಿದ್ದಾರೆ.
2019ರ ಡಿಸೆಂಬರ್‌ನಲ್ಲಿ CAA ವಿರೋಧಿ ಆಂದೋಲನದ ನಂತರ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳು ಮತ್ತು ಪ್ರತಿಭಟನೆಗಳ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ವಿಶ್ವವಿದ್ಯಾನಿಲಯದಲ್ಲಿನ ಎಲ್ಲಾ ರೀತಿಯ ಅಭಿವ್ಯಕ್ತಿಗಳನ್ನು ಮೌನವಾಗಿಸುವ ಮತ್ತು ಪೋಲೀಸರನ್ನು ಮುಂದಿಡುವ ಆಡಳಿತ ಮಂಡಳಿ, ಹಿಂದುತ್ವದ ಆಡಳಿತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
“ಸಾಮಾನ್ಯ ವಿದ್ಯಾರ್ಥಿಗಳಿಗೆ ಓದುವ ವಲಯಗಳನ್ನು ನಡೆಸುವ ಸ್ವಾತಂತ್ರ್ಯವೂ ಇಲ್ಲದಿರುವಾಗ, ಆಡಳಿತ ಮಂಡಳಿ ಇಂತಹ ಕಾರ್ಯಕ್ರಮಗಳಿಗೆ ಹೇಗೆ ಮತ್ತು ಏಕೆ ಅನುಮೋದಿಸಿದ್ದಾರೆ ಎಂಬುದಕ್ಕೆ ಅವರೇ ಉತ್ತರ ನೀಡಬೇಕು” ಎಂದು ಎಸ್ಎಫ್ಐ ಹೇಳಿಕೆಯಲ್ಲಿ ಹೇಳಿದೆ.
ಇದನ್ನೂ ಓದಿ: ಉಪಚುನಾವಣೆ | ಚನ್ನಪಟ್ಟಣ, ಸಂಡೂರಿಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್ : ಶಿಗ್ಗಾವಿಯಲ್ಲಿ ಹೊಸ ಲೆಕ್ಕಾಚಾರ.
ಉಪಚುನಾವಣೆ | ಚನ್ನಪಟ್ಟಣ, ಸಂಡೂರಿಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್ : ಶಿಗ್ಗಾವಿಯಲ್ಲಿ ಹೊಸ ಲೆಕ್ಕಾಚಾರ


