Homeಮುಖಪುಟಮುಸ್ಲಿಂ ಮತಗಳು ಬೇಕಾಗಿಲ್ಲ; ಅದಕ್ಕಾಗಿ ಅವರ ಬಳಿ ಹೋಗುವುದಿಲ್ಲ: ಅಸ್ಸಾಂ ಸಿಎಂ

ಮುಸ್ಲಿಂ ಮತಗಳು ಬೇಕಾಗಿಲ್ಲ; ಅದಕ್ಕಾಗಿ ಅವರ ಬಳಿ ಹೋಗುವುದಿಲ್ಲ: ಅಸ್ಸಾಂ ಸಿಎಂ

- Advertisement -

ಅಸ್ಸಾಂನಲ್ಲಿ ಬಂಗಾಳಿ ಮೂಲದ ಮುಸ್ಲಿಂ ಸಮುದಾಯದ ಮತಗಳು ಬಿಜೆಪಿಗೆ ಅಗತ್ಯವಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಶನಿವಾರ ಹೇಳಿದ್ದಾರೆ. ‘ಇಂಡಿಯಾ ಟುಡೇ ಕಾನ್ಕ್ಲೇವ್-2021’ ಕಾರ್ಯಕ್ರದಲ್ಲಿ ಅವರು ಮಾತನಾಡುತ್ತಿದ್ದರು.

“ನನಗೆ ಮಿಯಾ ಮತಗಳು ಬೇಡ, ನಾವು ಸಾಮರಸ್ಯದಿಂದ ಬದುಕುತ್ತೇವೆ. ನಾನು ಅವರ ಬಳಿ ಮತಕ್ಕಾಗಿ ಹೋಗುವುದಿಲ್ಲ, ಅವರು ನನ್ನ ಬಳಿಗೆ ಬರುವುದಿಲ್ಲ. ಅಸ್ಸಾಂ ಅಸ್ಮಿತೆ, ಸಂಸ್ಕೃತಿ ಮತ್ತು ಭೂಮಿಯನ್ನು ಕಳೆದುಕೊಂಡಿರುವುದಕ್ಕೆ ಮೂಲ ಕಾರಣ, ವಲಸಿಗ ಮುಸ್ಲಿಮರು ಎಂದು ರಾಜ್ಯದ ಅನೇಕ ಜನರು ನಂಬಿದ್ದಾರೆ” ಎಂದು ಹಿಮಾಂತ ಶರ್ಮಾ ಹೇದ್ದಾರೆ.

ಇದನ್ನೂ ಓದಿ: ಅಸ್ಸಾಂ: ಕ್ಯಾಮರಾ ಮುಂದೆಯೆ ಪೊಲೀಸರಿಂದ ಕ್ರೂರವಾಗಿ ಹತ್ಯೆಯಾದ ವ್ಯಕ್ತಿ ಅಕ್ರಮ ನಿವಾಸಿಯಲ್ಲ!

ಅಸ್ಸಾಂನಲ್ಲಿ ಬಂಗಾಳಿ ಆಡುಭಾಷೆಯ ಮುಸ್ಲಿಂ ಸಮುದಾಯವನ್ನು ‘ಮಿಯಾ ಮುಸ್ಲಿಮರು’ ಎಂದು ಸಾಮಾನ್ಯವಾಗಿ ಆಡುಮಾತಿನಲ್ಲಿ ಕರೆಯಲಾಗುತ್ತದೆ.

“ವಲಸಿಗ ಮುಸ್ಲಿಮರು ಜನಸಂಖ್ಯೆ ಹೆಚ್ಚಿಸುತ್ತಿರುವುದರಿಂದ ಅತಿಕ್ರಮಣ ನಡೆಯುತ್ತಿದೆ. ಅನೇಕ ಅಸ್ಸಾಮಿ ಜನರು ಈ ರೀತಿ ಯೋಚಿಸುತ್ತಾರೆ. ಈ ಪ್ರಕ್ರಿಯೆಯು ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಯಿತು. ನಾನು ಈ ಇತಿಹಾಸದ ಹೊರೆಯನ್ನು ನನ್ನೊಂದಿಗೆ ಹೊತ್ತುಕೊಂಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮತದಾರರು ಮೂರ್ಖರಲ್ಲ, ಕಾಂಗ್ರೆಸ್‌ನ ಗೆಲ್ಲುವ ಅಭ್ಯರ್ಥಿಗೆ ಮತ ನೀಡುತ್ತಾರೆ: ಸಿದ್ದರಾಮಯ್ಯ

ಕಳೆದ ತಿಂಗಳಷ್ಟೇ ಸಿಪಜಾರ್‌ನ ಧೋಲ್ಪುರ್-3 ಗ್ರಾಮದಲ್ಲಿ ಒಕ್ಕಲೆಬ್ಬಿಸುವುದರ ವಿರುದ್ದ ಘರ್ಷಣೆಗಳು ನಡೆದಿದ್ದವು. ಈ ಘರ್ಷನೆಯಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಒಬ್ಬ ಪೊಲೀಸ್ ಸೇರಿದಂತೆ ಕನಿಷ್ಠ 12 ಮಂದಿ ಗಾಯಗೊಂಡಿದ್ದರು.

ಪೊಲೀಸರ ಗುಂಡಿಗೆ ನೆಲಕ್ಕುರುಳಿದ ವ್ಯಕ್ತಿಯನ್ನು ಪೋಲಿಸರ ಗುಂಪು ಥಳಿಸಿದ್ದು ಮಾತ್ರವಲ್ಲದೆ, ಸರ್ಕಾರಿ ಛಾಯಾಗ್ರಾಹಕ ಕೂಡಾ ವ್ಯಕ್ತಿಯ ಎದೆಯ ಮೇಲೆ ಕುಪ್ಪಳಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದನು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು.

“ಅಸ್ಸಾಂನಲ್ಲಿ ಯಾವುದೇ ದ್ವೇಷದ ಪ್ರತಿಪಾದನೆಯನ್ನು ಮಾಡುತ್ತಿಲ್ಲ. ಸಾವಿರ ಕುಟುಂಬದ ಬಳಿ 77,000 ಎಕರೆ ಭೂಮಿ ಇರುವುದರಿಂದ ನಾವು ಅವರನ್ನು ಹೊರಹಾಕಿದ್ದೇವೆ. ನಮ್ಮ ನೀತಿಯೆಂದರೆ ಒಂದು ಕುಟುಂಬವು 2 ಎಕರೆಗಿಂತ ಹೆಚ್ಚು ಭೂಮಿಯನ್ನು ಆಕ್ರಮಿಸಬಾರದು. ನಾವು ಅನೇಕ ಜನರಿಗೆ ಭೂಮಿಯನ್ನು ನೀಡಬೇಕು. ಜನರು ಭೂಮಿಯನ್ನು ಅತಿಕ್ರಮಿಸಿದರೆ ನಾವು ಅವರನ್ನು ಹೊರಹಾಕಬೇಕು. ಹೊರಹಾಕುವುದು ನಿರಂತರ ಪ್ರಕ್ರಿಯೆ” ಎಂದು ಅಸ್ಸಾಂನಲ್ಲಿ ನಡೆಯುತ್ತಿರುವ ಒಕ್ಕಲೆಬ್ಬಿಸುವ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಲು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಒತ್ತಾಯ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಸ್ಸಾಂನಲ್ಲಿ 10 ಎಕರೆಗಿಂತ ಹೆಚ್ಚು ಜಮೀನು ಇರುವಕುಟುಂಬಗಳ ಸಂಖ್ಯೆ 89000. ಅದರಲ್ಲಿ, 1000 ಕುಟುಂಬಗಳನ್ನು, ಸೆಲೆಕ್ಟ್ ಮಾಡಿ ಹೊರ ಹಾಕಿದರೆ ನ್ಯಾಯವೆ? ರಾಜ್ಯ ಮುಖಂಡರು ಜಾತಿ, ಧರ್ಮ ಆಧರಿಸಿ ಈ ರೀತಿಯ ನ್ಯಾಯ ಕೊಟ್ಟರೆ, ಇವರು ಜನನಾಯಕರಾಗಲು ಯೋಗ್ಯರೇ?

  2. “ಮುಸ್ಲಿಮರ ಮತಗಳು ಬೇಕಾಗಿಲ್ಲ” ಎಂದು ಹೇಳುವುದು ಸಂವಿಧಾನ ವಿರೋಧಿ ಹೇಳಿಕೆ.

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ | Naanu Gauri

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ

0
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) 159 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೆಸರಿಸಲಾದ ಪ್ರಮುಖ ಮುಖಗಳಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು...
Wordpress Social Share Plugin powered by Ultimatelysocial
Shares