ಮಹಾರಾಷ್ಟ್ರದ ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಅಂತಿಮ ಸೀಟು ಹಂಚಿಕೆ ಸೂತ್ರವನ್ನು ಶುಕ್ರವಾರ ಬೆಳಿಗ್ಗೆ ಪ್ರಕಟಿಸಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಗುರುವಾರ ಹೇಳಿದ್ದಾರೆ. ರಾಜ್ಯದ 288 ಕ್ಷೇತ್ರಗಳಲ್ಲಿ ಪ್ರಮುಖ ಮೂರು ಪಕ್ಷಗಳು ತಲಾ 85 ಕ್ಷೇತ್ರಗಳನ್ನು ಹಂಚಿಕೊಂಡಿರುವುದಾಗಿ ಬುಧವಾರ ಹೇಳಿತ್ತು. ಒಟ್ಟು 270 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಸ್ಪರ್ಧಿಸಲಿದ್ದು, ಉಳಿದ 18 ಕ್ಷೇತ್ರವನ್ನು ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳಿಗೆ ಬಿಟ್ಟುಕೊಡುವುದಾಗಿ ಹೇಳಿದ್ದರು.
ನವೆಂಬರ್ 20 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಖಚಿತವಾಗಿರುವ ಕೆಲವು ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಪಕ್ಷವು ಈಗಾಗಲೇ ಕೇಳಿದೆ ಎಂದು ಪಟೋಲೆ ಮುಂಬೈ ಅಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಂತಿಮ ಸೀಟು ಹಂಚಿಕೆಯನ್ನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ. ಬುಧವಾರ ಮಾತನಾಡಿದ್ದ ಅವರು ರಾಜ್ಯದ ಎಲ್ಲಾ 288 ಕ್ಷೇತ್ರಗಳಲ್ಲೂ ತಮ್ಮ ಎಂವಿಎ ಮೈತ್ರಿ ಸ್ಪರ್ಧಿಸುವುದಾಗಿ ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹಲವು ದಿನಗಳ ಬಹಿರಂಗ ಅಸಮಾಧಾನದ ನಂತರ, ಪ್ರತಿಪಕ್ಷಗಳ ಮೈತ್ರಿಯು ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಮತ್ತು ಶಿವಸೇನೆ (ಯುಬಿಟಿ) ಒಟ್ಟು 288 ಸ್ಥಾನಗಳಲ್ಲಿ ತಲಾ 85 ಸ್ಥಾನಗಳ ಸೀಟುಗಳನ್ನು ಹಂಚಿಕೊಂಡಿದ್ದೇವೆ ಎಂದು ಬುಧವಾರ ಘೋಷಿಸಿತ್ತು.
ಇದಕ್ಕೂ ಮುನ್ನ ಗುರುವಾರ ಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಮಿತ್ರಪಕ್ಷಗಳ ನಡುವೆ ಕೆಲವು ಸ್ಥಾನಗಳನ್ನು ವಿನಿಮಯ ಮಾಡಿಕೊಳ್ಳುವ ಸಾಧ್ಯತೆಯಿದ್ದು, ಶಿವಸೇನೆ ಅಂತಿಮವಾಗಿ 100 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮನ್ನು ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಘೋಷಣೆಗಳನ್ನು ಕೂಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಂವಿಎ ಅಧಿಕಾರಕ್ಕೆ ತರುವುದು ತಮ್ಮ ಮೊದಲ ಕೆಲಸ ಎಂದು ಪಟೋಲೆ ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಬುಧವಾರ ಸೀಟು ಹಂಚಿಕೆ ಸೂತ್ರದ ಕುರಿತು ಮಾತನಾಡಿದ್ದ ಪಟೋಲೆ, “ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಶಿವಸೇನೆ (ಯುಬಿಟಿ) ತಲಾ 85 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಉಳಿದ 18 ಸ್ಥಾನಗಳ ಬಗ್ಗೆ ನಾವು ಸಮಾಜವಾದಿ ಪಕ್ಷ ಸೇರಿದಂತೆ ನಮ್ಮ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತೇವೆ ಮತ್ತು ನಾಳೆ ಅವುಗಳನ್ನು ಹಂಚಿಕೆ ಮಾಡುತ್ತೇವೆ” ಎಂದು ಅವರು ಹೇಳಿದ್ದರು.
ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಗಳು ತಮ್ಮ ಲೋಕಸಭಾ ಚುನಾವಣೆಯ ಪ್ರದರ್ಶನವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿವೆ. ಲೋಕಸಭೆಯಲ್ಲಿ ಆಡಳಿತರೂಢ ಮಹಾಯುತಿ 17 ಕ್ಷೇತ್ರಗಳನ್ನು ಗೆದ್ದರೆ, 30 ಸ್ಥಾನವನ್ನು ವಿಪಕ್ಷಗಳ ಮಹಾ ವಿಕಾಸ್ ಅಘಾಡಿ ಗೆದ್ದುಕೊಂಡಿತ್ತು. ಕಾಂಗ್ರೆಸ್ ಸ್ಪರ್ಧಿಸಿದ 17 ಸ್ಥಾನಗಳಲ್ಲಿ 13 ಮತ್ತು ಶಿವಸೇನೆ-UBT ಅದು ಸ್ಪರ್ಧಿಸಿದ 21 ಸ್ಥಾನಗಳಲ್ಲಿ 9 ರಲ್ಲಿ ಗೆದ್ದಿತ್ತು.
ಇದನ್ನೂ ಓದಿ: ಬೆಂಗಳೂರು ಪ್ರವಾಹ | ಸ್ಥಳಾಂತರಕ್ಕೆ ನಿರಾಕರಿಸಿದ 20 ಮನೆಯ ಬಾಗಿಲು ಒಡೆದು ತೆರವುಗೊಳಿಸಲು ಡಿಸಿಎಂ ಸೂಚನೆ
ಬೆಂಗಳೂರು ಪ್ರವಾಹ | ಸ್ಥಳಾಂತರಕ್ಕೆ ನಿರಾಕರಿಸಿದ 20 ಮನೆಯ ಬಾಗಿಲು ಒಡೆದು ತೆರವುಗೊಳಿಸಲು ಡಿಸಿಎಂ ಸೂಚನೆ


