ಮುಂದಿನ ತಿಂಗಳು ಅಮೆರಿಕಾದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನಲೆಯಲ್ಲಿ ನಡೆದ ಅಧ್ಯಕ್ಷೀಯ ಸಂವಾದದ ಮಧ್ಯೆ ಅಮೆರಿಕಾ ಅಧ್ಯಕ್ಷ ಟೊನಾಲ್ಡ್ ಟ್ರಂಪ್, “ಭಾರತದ ಕಡೆ ನೋಡಿ, ಅದು ತುಂಬಾ ಹೊಲಸಾಗಿದೆ” ಎಂದು ಹೇಳಿದ್ದಾರೆ.
“ಚೀನಾ, ರಷ್ಯಾ, ಭಾರತವನ್ನು ನೋಡಿ. ಆ ದೇಶಗಳು ಎಷ್ಟು ಹೊಲಸಾಗಿವೆ. ಭಾರತದಲ್ಲಂತೂ ವಾಯು ಮಾಲಿನ್ಯ ಮಿತಿಮೀರಿದೆ. ವಾತಾವರಣದಲ್ಲಿನ ಬದಲಾವಣೆ ಅಧಿಕವಾಗುತ್ತಿದೆ. ಅದೊಂದು ಹೊಲಸಿನಿಂದ ತುಂಬಿರುವ ದೇಶ. ಇದೇ ಕಾರಣಕ್ಕೆ ನಾನು ಪ್ಯಾರಿಸ್ ಒಪ್ಪಂದದಿಂದ ಹೊರ ನಡೆದಿದ್ದೆ. ಏಕೆಂದರೆ ಇವರು ಪರಿಸರದ ಮೇಲೆ ಮಾಡುವ ಮಾರಕ ದಾಳಿಗೆ ನಾವು ಟ್ರಿಲಿಯನ್ ಡಾಲರ್‌ಗಳಷ್ಟು ನೀಡಬೇಕೆ? ನಾವು ಇಷ್ಟು ಅನುದಾನ ನೀಡಿದ್ದರೂ ಸಹ ನಮ್ಮನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿತ್ತು. ಅದಕ್ಕಾಗಿಯೇ ನಾನು ಪ್ಯಾರಿಸ್ ಒಪ್ಪಂದದಿಂದ ಹೊರನಡೆದಿದ್ದೆ” ಎಂದು ಪ್ಯಾರಿಸ್ ಒಪ್ಪಂದದಿಂದ ಅಮೆರಿಕಾ ಹೊರನಡೆದಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ನರೇಂದ್ರ ಮೋದಿ ಎದುರಲ್ಲೇ ಪಾಕ್ ಹೊಗಳಿದ ಡೊನಾಲ್ಡ್ ಟ್ರಂಪ್ : ವ್ಯಾಪಕ ಟ್ರೋಲ್
ಮಾಜಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪ್ರಮುಖ ಪಾತ್ರ ವಹಿಸಿದ್ದ ಜಾಗತಿಕ ಒಪ್ಪಂದವಾದ 2015 ರ ಪ್ಯಾರಿಸ್ ಹವಾಮಾನ ಒಪ್ಪಂದದಿಂದ 2017 ರಲ್ಲಿ ಅಮೆರಿಕಾ ಹೊರಬಂದಿತ್ತು. ಪ್ಯಾರಿಸ್ ಹವಾಮಾನ ಒಪ್ಪಂದವು ಜಾಗತಿಕ ತಾಪಮಾನ ಏರಿಕೆಯನ್ನು ಎರಡು ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಮಾಡುವ ಗುರಿ ಹೊಂದಿದೆ.
— Arif Shekh (@ArifshaikhAsad) October 23, 2020
ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಭಾರತದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಲಾಗುತ್ತಿದೆ. ಕಾಂಗ್ರೆಸ್ ನ ಕಪಿಲ್ ಸಿಬಲ್ ಅಧ್ಯಕ್ಷ ಟ್ರಂಪ್ ಈ ಹಿಂದೆ ಟ್ರಂಪ್ ಭಾರತದ ಬಗ್ಗೆ ಮಾಡಿದ್ದ ಹೇಳಿಕೆಗಳನ್ನು ಮತ್ತೇ ನೆನಪಿಸಿದರು.
Trump : Fruits of Friendship
1) Questions India’s COVID death toll
2) Says India sends dirt up into the air
India “ air is filthy “3) Called India “ tariff king “
The result of “Howdy Modi “ !
— Kapil Sibal (@KapilSibal) October 23, 2020
ಇದನ್ನೂ ಓದಿ: ಟ್ರಂಪ್ ಭೇಟಿ ಮತ್ತು ಸ್ಲಂ ಸುತ್ತಲಿನ ಗೋಡೆ; ಅಸಲಿಗೆ ಮೋದಿ ಪ್ರತಿನಿಧಿಸುತ್ತಿರುವ ಭಾರತ ಯಾವುದು?
ಪತ್ರಕರ್ತೆ ರಾಣಾ ಅಯೂಬ್ ಪ್ರಧಾನಿ ಮೋದಿಯ ಕುರಿತು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, “ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್ ಭಾರತವನ್ನಷ್ಟೇ ಹೊಲಸು ಎಂದು ಕರೆದಿದ್ದಾರೆ. ನನ್ನನ್ನು ಅವರು ಇನ್ನೂ ಪ್ರೀತಿಸುತ್ತಾರೆ ಎಂದು ನನಗೆ ಗೊತ್ತು” ಎಂದಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಟ್ರಂಪ್ ಅವರನ್ನು “ನನ್ನ ಸ್ನೇಹಿತ” ಎಂದು ಹೇಳಿದ್ದರು.
My friend Doland Trump called India filthy. But i know he still loves me
— Rana Ayyub (@RanaAyyub) October 23, 2020
ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ, ಟ್ರಂಪ್ ಟೀಕೆಗಳನ್ನು “ದುರದೃಷ್ಟಕರ” ಎಂದು ವಿಷಾದ ವ್ಯಕ್ತಪಡಿಸುತ್ತಾ, ಹವಾಮಾನ ಬದಲಾವಣೆಯ ಗುರಿಗಳಿಗೆ ಭಾರತ ಬದ್ಧವಾಗಿದೆ ಎಂದು ನೆನಪಿಸಿದರು.
What an unfortunate comment to make about India, @realDonaldTrump .
Reminder: India stands committed to climate change goals, US chose to withdraw, much against the wishes of many Americans. Thank you.— Priyanka Chaturvedi (@priyankac19) October 23, 2020
“Look at India, it’s filthy!” I hope you’re listening @narendramodi. “Ab ki bar Trump sarkar.”
— Aatish Taseer (@AatishTaseer) October 23, 2020
ನವೆಂಬರ್ 3 ರಂದು ಅಮೆರಿಕಾದಲ್ಲಿ ಚುನಾವಣೆ ನಡೆಯಲಿದ್ದು, ಇದು ಎರಡನೇ ಮತ್ತು ಅಂತಿಮ ಅಧ್ಯಕ್ಷೀಯ ಸಂವಾದವಾಗಿದೆ. ಭಾರತ ಮತ್ತು ಚೀನಾದಂತಹ ದೇಶಗಳು ಹವಾಮಾನ ವೈಪರೀತ್ಯದ ಬಗ್ಗೆ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಪದೇ ಪದೇ ದೂಷಿಸುತ್ತಿದ್ದಾರೆ.
2018 ರ ಡಿಸೆಂಬರ್‌ನಲ್ಲಿ ಪ್ರಕಟವಾದ ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್‌ನ ಪ್ರಕ್ಷೇಪಣದ ಪ್ರಕಾರ, 2017 ರಲ್ಲಿ ಜಾಗತಿಕವಾಗಿ ಹೊರಸೂಸುವ ಇಂಗಾಲದ ಡೈಆಕ್ಸೈಡ್‌ನಲ್ಲಿ 7% ರಷ್ಟು ಇಂಗಾಲವನ್ನು ಭಾರತ ಹೊರಸೂಸುತ್ತಿದ್ದು, ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ದಾವೋಸ್‌ನಲ್ಲಿ ಮೋದಿ, ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ ಬಿಲಿಯನೇರ್ ಜಾರ್ಜ್ ಸೊರೊಸ್


