Homeಮುಖಪುಟನರೇಂದ್ರ ಮೋದಿ ಎದುರಲ್ಲೇ ಪಾಕ್ ಹೊಗಳಿದ ಡೊನಾಲ್ಡ್‌ ಟ್ರಂಪ್ : ವ್ಯಾಪಕ ಟ್ರೋಲ್‌

ನರೇಂದ್ರ ಮೋದಿ ಎದುರಲ್ಲೇ ಪಾಕ್ ಹೊಗಳಿದ ಡೊನಾಲ್ಡ್‌ ಟ್ರಂಪ್ : ವ್ಯಾಪಕ ಟ್ರೋಲ್‌

- Advertisement -
- Advertisement -

ಸುಮಾರು ನೂರು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಗುಜರಾತ್‌ನ ಮೊಟೇರಾ ಕ್ರೀಡಾಂಗಣದಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾರತ ನೆಲದಲ್ಲಿ ಪಾಕಿಸ್ತಾನವನ್ನು ಹೊಗಳುವುದು ದೇಶದ್ರೋಹಕ್ಕೆ ಸಮಾನವಾಗಿದೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕ್‌ ಹೊಗಳಿರುವುದು ವೈರಲ್‌ ಆಗಿದೆ.

ವೇದಿಕೆಯಲ್ಲಿ ಟ್ರಂಪ್‌ ಮಾತನಾಡುತ್ತಾ.. “ಪಾಕಿಸ್ತಾನದ ಜೊತೆಗಿನ ನಮ್ಮ ಸಂಬಂಧ ಉತ್ತಮವಾಗಿದೆ, ನಾವು ಪಾಕಿಸ್ತಾನದ ಜೊತೆಗೆ ಪ್ರಗತಿಯನ್ನು ಪ್ರಾರಂಭಿಸಿದ್ದೇವೆ” ಎಂದು ಪಾಕಿಸ್ತಾನವನ್ನು ಹೊಗಳಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಮೋದಿ ಮೂಕವಿಸ್ಮಿತರಾಗಿದ್ದರು. ಮಾತು ಮುಂದುವರೆಸುತ್ತಾ ‘ಭವಿಷ್ಯದಲ್ಲಿ ದಕ್ಷಿಣ ಏಷ್ಯ ದೇಶಗಳ ಸ್ಥಿರತೆ ಮತ್ತು ಸೌರ್ಹಾದತೆಯನ್ನು ನಾವು ಸಾಧಿಸಬೇಕಿದೆ’ ಎಂದರು.

ವಿಡಿಯೋ ನೋಡಿ;

ಟ್ರಂಪ್‌

ನರೇಂದ್ರ ಮೋದಿ ಎದುರಲ್ಲೇ ಪಾಕ್ ಹೊಗಳಿದ ಡೊನಾಲ್ಡ್‌ ಟ್ರಂಪ್

Posted by Naanu Gauri on Monday, February 24, 2020

ಟ್ರಂಪ್‌ರ ಈ ಭಾಷಣದ ಕುರಿತು ಸಾಮಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಹಲವರು ಇದು ದೇಶದ್ರೋಹ ವ್ಯಾಪ್ತಿಗೆ ಬರುವುದಿಲ್ಲವೇ ಎಂದು ಬಿಜೆಪಿ ಅಭಿಮಾನಿಗಳಿಗೆ ಕುಟುಕಿದ್ದಾರೆ. ಇದೇ ಭಾಷಣದಲ್ಲಿ ಮುಂದುವರೆದು ‘ಅಮೇರಿಕಾ ಮತ್ತು ಭಾರತ ಇಸ್ಲಾಮಿಕ್ ಭಯೋತ್ಪಾದನೆಯನ್ನು ಕೊನೆಗಾಣಿಸಲು ಕೆಲಸ ಮಾಡುತ್ತಿದ್ದೇವೆ ಎಂದೂ ಹೇಳಿದರು’ ಇದಲ್ಲದೆ ಭಾರತದ ಜನಪ್ರಿಯ ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರ ಹೆಸರನ್ನು ‘ಸ್ವಾಮಿ ವಿವೇಕಾಮೊನೊಂಡಾ…’ ಎಂಬಂತೆ ಉಚ್ಛರಿಸಿದ್ದೂ ವ್ಯಾಪಕ ಟೀಕೆಗೆ ಒಳಗಾಗಿದೆ.

ಹಲವು ದಿನಗಳಿಂದ ಕೆಲವು ಬಿಜೆಪಿ ಅಭಿಮಾನಿಗಳು ಡೊನಾಲ್ಡ್ ಟ್ರಂಪ್ ನ ಪ್ರತಿಮೆ ಹಾಗೂ ಫೋಟೋಗಳಿಗೆ ಪೂಜೆ ಸಲ್ಲಿಸಿದ್ದು ವರದಿಗಳಾಗಿದ್ದವು. ಭಾಷಣದ ಹಿನ್ನಲೆಯಲ್ಲಿ ಇದನ್ನು ಪ್ರಶ್ನೆಸುತ್ತಾ ಬಿಜೆಪಿ ಬೆಂಬಲಿಗರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್ ಗಳು ಶುರುವಾಗಿದೆ.

ಅಮೇರಿಕಾದಲ್ಲೂ ಟೀಕೆ

ಅಮೇರಿಕಾದ ಪ್ರಜಾತಂತ್ರವಾದಿಗಳು ಟ್ರಂಪ್ ಹಾಗೂ ಆತನ ನೀತಿಗಳ ವಿರುದ್ಧ ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದಾರೆ. ತಾನು ಭಾರತ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ಟ್ರಂಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಾಗ “ಭಾರತದಿಂದ ವಾಪಾಸ್ ಬರಬೇಡ” ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಇನ್ನೂ ಕೆಲವರು “ಅಮೇರಿಕನಾಗಿ ಭಾರತೀಯರಲ್ಲಿ ಮೊದಲೇ ಕ್ಷಮೆ ಕೇಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಇವರಲ್ಲಿ ಹಲವರು ಸೆಲೆಬ್ರಿಟಿಗಳಾಗಿದ್ದು ಟ್ವಿಟ್ಟರ್‌ನ ವೆರಿಫೈಡ್ ಅಕೌಂಟ್ ಹೊಂದಿರುವವರೇ ಟ್ವೀಟಿಸಿದ್ದಾರೆ ಎನ್ನುವುದು ಗಮನಾರ್ಹ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...