Homeಅಂತರಾಷ್ಟ್ರೀಯಅಮೆರಿಕ ಇತಿಹಾಸದಲ್ಲೆ ನನ್ನ ಅವಧಿ ಅತ್ಯುತ್ತಮ; ಅದೀಗ ಕೊನೆಯಾಗುತ್ತಿದೆ- ಟ್ರಂಪ್

ಅಮೆರಿಕ ಇತಿಹಾಸದಲ್ಲೆ ನನ್ನ ಅವಧಿ ಅತ್ಯುತ್ತಮ; ಅದೀಗ ಕೊನೆಯಾಗುತ್ತಿದೆ- ಟ್ರಂಪ್

ಕೊನೆಗೂ ತನ್ನ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಕೊಂಡ ‌ಅಮೆರಿಕಾದ ನಿರ್ಗಮಿತ ಅಧ್ಯಕ್ಷ

- Advertisement -
- Advertisement -

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವನ್ನು ಡೊನಾಲ್ಡ್ ಟ್ರಂಪ್ ಕೊನೆಗೂ ಒಪ್ಪಿಕೊಂಡಿದ್ದಾರೆ. ಸುಗಮ, ಕ್ರಮಬದ್ದ ಹಾಗೂ ತಡೆರಹಿತವಾಗಿ ಅಧಿಕಾರವನ್ನು ಹಸ್ತಾಂತರಿಸುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಸಂಸತ್‌ ಕಟ್ಟಡದ ಮೇಲೆ ನಡೆದ ದಾಳಿಯನ್ನು ಅವರು ಖಂಡಿಸಿದ್ದಾರೆ.

ಬುಧವಾರ ಅಮೆರಿಕ ಸಂಸತ್‌‌ನಲ್ಲಿ ಜೋ ಬೈಡೆನ್ ಗೆಲುವನ್ನು ಪ್ರಮಾಣೀಕರಿಸುವ ಕಾರ್ಯಕ್ರಮದ ಸಮಯದಲ್ಲಿ ಕಟ್ಟಡಕ್ಕೆ ಮುತ್ತಿಗೆ ಹಾಕಿರುವ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ್ದರು. ಈ ವೇಳೆ ನಾಲ್ವರು ಮೃತಪಟ್ಟಿದ್ದರು. ಅಮೆರಿಕ ಸಂಸತ್‌ ಚುನಾವಣಾ ಫಲಿತಾಂಶಗಳನ್ನು ಪ್ರಮಾಣೀಕರಿಸಿದ್ದು, ನೂತನ ಆಡಳಿತ ಜನವರಿ 20 ರಂದು ಪ್ರಾರಂಭವಾಲಿದೆ.

ಇದನ್ನೂ ಓದಿ: ಅಮೆರಿಕ ಸಂಸತ್‌ ದಾಳಿಯಲ್ಲಿ ಭಾರತೀಯ ಧ್ವಜ ಹಾರಾಟ: ವ್ಯಾಪಕ ಟೀಕೆ

“ಚುನಾವಣಾ ಫಲಿತಾಂಶಕ್ಕೆ ನನ್ನ ಸಮ್ಮತಿಯಿಲ್ಲವಾದರೂ, ಜನವರಿ 20 ರಂದು ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯಲಿದೆ. ನನ್ನ ಅಧಿಕಾರಾವಧಿ ಅಮೆರಿಕದ ಅಧ್ಯಕ್ಷೀಯ ಇತಿಹಾಸದಲ್ಲೇ ಮೊದಲ ಅತ್ಯುತ್ತಮ ಅವಧಿಯಾಗಿದೆ. ಅದು ಈಗ ಕೊನೆಯಾಗುತ್ತಿದೆಯಾದರೂ, ಅವೆುರಿಕವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿಸುವ ನಮ್ಮ ಹೋರಾಟದ ಆರಂಭವಾಗಿದೆ” ಎಂದು ಅವರು ಹೇಳಿದ್ದಾರೆ.

ಅಲ್ಲದೆ ತಮ್ಮ ಬೆಂಬಲಿಗರ ಹಿಂಸಾಚಾರವನ್ನು ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ. “ಇದೊಂದು ಹೇಯ ಕೃತ್ಯ. ಎಲ್ಲ ಅಮೆರಿಕನ್ನರಂತೆ ನಾನು ಕೂಡಾ ಹಿಂಸಾಚಾರ, ಕಾನೂನು ಬಾಹಿರ ಚಟುವಟಿಕೆ ಮತ್ತು ಹಾನಿಕರ ಘಟನೆಯಿಂದ ಅಸಮಾಧಾನಗೊಂಡಿದ್ದೇನೆ. ಅಮೆರಿಕ ಸಂಸತ್‌ ಕಟ್ಟಡವನ್ನು ಸುರಕ್ಷಿತವಾಗಿರಿಸಲು ಮತ್ತು ಒಳನುಗ್ಗಿದ ಪ್ರತಿಭಟನಕಾರರನ್ನು ಹೊರಹಾಕಲು ತಕ್ಷಣ ನ್ಯಾಷನಲ್ ಗಾರ್ಡ್ ನಿಯೋಜಿಸಿ ಫೆಡರಲ್ ಕಾನೂನು ಜಾರಿಗೊಳಿಸಿದ್ದೇನೆ. ಅಮೆರಿಕ ಯಾವತ್ತೂ ಕಾನೂನು ಸುವ್ಯವಸ್ಥೆಯ ರಾಷ್ಟ್ರವಾಗಿರಬೇಕು” ಎಂದು ಹೇಳಿದ್ದಾರೆ.

ಗಲಭೆಕೋರರನ್ನು ದೇಶೀಯ ಭಯೋತ್ಪಾದಕರೆಂದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್

ಸಂಸತ್‌ ಕಟ್ಟಡದ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸಿರುವ ನಿಯೋಜಿತ ಅಧ್ಯಕ್ಷ ಜೋ ಬೈಡೆನ್, ಗಲಭೆಕೋರರನ್ನು ದೇಶೀಯ ಭಯೋತ್ಪಾದಕರು ಎಂದು ಕರೆದಿದ್ದಾರೆ. ಅಲ್ಲದೆ ಘಟನೆಗೆ ಡೊನಾಲ್ಡ್ ಟ್ರಂಪ್ ಕಾರಣ ಎಂದು ಆರೋಪಿಸಿದ ಅವರು, ಇದು ದೇಶದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ ಎಂದಿದ್ದಾರೆ.

ಇದನ್ನೂ ಓದಿ: ಜೋ ಬೈಡನ್-ಕಮಲಾ ಹ್ಯಾರಿಸ್ ಗೆಲುವನ್ನು ಅಂಗೀಕರಿಸಿದ ಅಮೆರಿಕ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...