Homeಮುಖಪುಟವಿವರಗಳನ್ನು ತಪ್ಪಾಗಿ ದಾಖಲಿಸಿದ ಬರೋಡಾ ಬ್ಯಾಂಕ್; ರೈತರಿಗೆ ಫಸಲ್ ಭೀಮಾ ವಿಮೆಯ ನಿರಾಕರಣೆ

ವಿವರಗಳನ್ನು ತಪ್ಪಾಗಿ ದಾಖಲಿಸಿದ ಬರೋಡಾ ಬ್ಯಾಂಕ್; ರೈತರಿಗೆ ಫಸಲ್ ಭೀಮಾ ವಿಮೆಯ ನಿರಾಕರಣೆ

ನಿಜವಾಗಿಯೂ ಭೂಮಿ ಇರುವುದು ಟ್ಯೂಬ್‌ವೆಲ್-ನೀರಾವರಿ ಪ್ರದೇಶದಲ್ಲಿ, ಆದರೆ ಪಾಲಿಸಿ-ಡಾಕುಮೆಂಟ್‌ಗಳು ಕಾಲುವೆ-ನೀರಾವರಿ ಪ್ರದೇಶ ಎಂದು ತಪ್ಪಾಗಿ ದಾಖಲಿಸಿವೆ.

- Advertisement -
- Advertisement -

ರಾಜಸ್ತಾನದ ಶ್ರೀ ಗಂಗಾನಗರ ಜಿಲ್ಲೆಯ ಕಿಸಾನ್ ಕಾರ್ಡ್ ಹೊಂದಿರುವ ರೈತರು 2019 ರ ’ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ಯ ವಿಮಾ ಹಣ ಪಡೆಯಲು ಪರದಾಡುತ್ತಿದ್ದಾರೆ. ವಿಮಾ ಪಾಲಿಸಿಯಲ್ಲಿ ಬ್ಯಾಂಕ್ ಆಫ್ ಬರೋಡ ರೈತರ ಭೂ ವಿವರಗಳನ್ನು ತಪ್ಪಾಗಿ ದಾಖಲಿಸಿರುವುದೇ ಇದಕ್ಕೆ ಕಾರಣ.

ಶ್ರೀ ಗಂಗಾನಗರ ಜಿಲ್ಲೆಯ ಸುರತ್‌ಘರ್ ಹೋಬಳಿಯ ರಾಕೇಶ್ ಕುಮಾರ್ ಎಂಬ ರೈತರು ಕೌನ್‌ಪಲ್ಸಾರ್ ಎಂಬ ಗ್ರಾಮದಲ್ಲಿ ಜಮೀನು ಹೊಂದಿದ್ದಾರೆ. ತಹಸೀಲ್ದಾರ್ ನೀಡಿರುವ ಭೂ ದಾಖಲೆ ಇದನ್ನು ಪುಷ್ಟಿಕರಿಸುತ್ತದೆ.
ಆದರೆ ರಾಕೇಶ್ ಅವರ ಫಸಲ್ ಭೀಮಾ ಪಾಲಿಸಿ (2019 ರ ಮುಂಗಾರು ಮತ್ತು ಹಿಂಗಾರು)ಗಳಲ್ಲಿ ಜಮೀನು ಎರಡು ಗ್ರಾಮಗಳಲ್ಲಿ ಇದೆಯೆಂದು ದಾಖಲಾಗಿದೆ. ಮುಂಗಾರು ಅವಧಿಯ ಪಾಲಿಸಿಯಲ್ಲಿ ಜಮೀನು 16 ಎಸ್‌ಎಲ್‌ಡಿ ಎಂಬ ಗ್ರಾಮದಲ್ಲಿ ಇರುವುದಾಗಿ, ಹಿಂಗಾರು ಅವಧಿಯ ಪಾಲಿಸಿಯಲ್ಲಿ ಜಮೀನು ತಿಲಾವಳಿ ಗ್ರಾಮದಲ್ಲಿ ಇರುವುದಾಗಿ ನಮೂದಿತವಾಗಿದೆ.

ಈ ಬದಲಾವಣೆಯ ಕಾರಣಕ್ಕೆ ರಾಕೇಶ್ ಅವರಿಗೆ ವಿಮಾ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ’ಪರಿಹಾರ ಒದಗಿಲಸಲು ವಿಮಾ ಕಂಪನಿಗಳು ಇನ್ನು ಮುಂದೆ ಜವಾಬ್ದಾರರಾಗಿರುವುದಿಲ್ಲ. ಅವು ತಮ್ಮ ಲಾಭವನ್ನು ಗರಿಷ್ಠಗೊಳಿಸುವುದಕ್ಕೆ ಯತ್ನಿಸಲಿವೆ. ಇದಕ್ಕೆ ಪೂರಕವಾಗಿ ಬ್ಯಾಂಕ್ ಉದ್ದೇಶಪೂರ್ವಕವಾಗಿಯೇ ತಪ್ಪಾದ ವಿವರಗಳನ್ನು ನಮೂದಿಸಿದೆ’ ಎಂದು ರಾಕೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

’ರೈತರ ಜಮೀನುಗಳು ಬಾವಿ ಆಶ್ರಯಿತ ನೀರಾವರಿ ಪ್ರದೇಶದಲ್ಲಿವೆ ಎಂದು ಬ್ಯಾಂಕ್ ತೋರಿಸುತ್ತಿದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಒಳ್ಳೆ ಫಸಲು ಬರುವುದರಿಂದ, ಬೆಳೆ ನಷ್ಟಕ್ಕೆ ನೀಡಲ್ಪಡುವ ಪರಿಹಾರ/ವಿಮಾಹಣ ತುಂಬ ನಗಣ್ಯವಾಗಿರುತ್ತದೆ’ ಎಂದು ರಾಕೇಶ್ ಹೇಳುತ್ತಾರೆ. ’ನನ್ನ ಜಮೀನಿನ ವಿಷಯಕ್ಕೆ ಬಂದರೆ ಅದು ಇರುವುದು ಟ್ಯೂಬ್‌ವೆಲ್ ನೀರಾವರಿ ಪ್ರದೇಶದಲ್ಲಿ. ಆದರೆ ಬ್ಯಾಂಕ್ ಅದನ್ನು ಕಾಲುವೆ-ನೀರಾವರಿ ಪ್ರದೇಶದ ಹಳ್ಳಿಯಲ್ಲಿದೆ ಎಂದು ತಪ್ಪಾದ ಗ್ರಾಮವನ್ನು ನಮೂದು ಮಾಡಿದೆ’ ಎಂದು ಅವರು ಆಕ್ರೋಶ ವ್ಯಕಶಪಡಿಸಿದ್ದಾರೆ.

ಟ್ಯೂಬ್‌ವೆಲ್ ನೀರಾವರಿ ಪ್ರದೇಶದಲ್ಲಿ ಅನುಕೂಲಕರವಲ್ಲದ ಹೊತ್ತಿನಲ್ಲಿ ನೀರು ಬಿಡುವುದು ಮತ್ತು ವಿದ್ಯುತ್‌ನ ಅಸಮರ್ಪಕ ಸರಬರಾಜು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಅವರ ಫಸಲನ್ನು ಬಾಧಿಸಿ, ಅವರಿಗೆ ನಷ್ಟವುಂಟು ಮಾಡುತ್ತದೆ. ಈ ನಷ್ಟವನ್ನು ವಿಮಾ ಪರಿಹಾರದಲ್ಲಿ ಪಡೆಯಲು ರೈತರು ಬಯಸುತ್ತಿದ್ದಾರೆ.

’ಚಲಿಗಾಲ ಆರಂಭವಾದ ಕೂಡಲೇ ರಾತ್ರಿ 9 ರಿಂದ ಬೆಳಗಿನ 3 ರವರೆಗೆ ವಿದ್ಯುತ್ ಸರಬರಾಜು ಮಾಡುವುದರಿಂದ ನೀರು ಹಾಯಿಸಲು ರೈತರಿಗೆ ಕಷ್ಟವಾಗುತ್ತಿದೆ ಎಂದು ರಾಕೇಶ್ ಹೇಳುತ್ತಾರೆ. ಸುರತ್‌ಘರ್ ‌ಹೋಬಳಿಯಲ್ಲಿ ಬಹುಪಾಲು ರೈತರು ಟ್ಯೂಬ್‌ವೆಲ್‌ಗಳಿಂದ ಪಡೆಯುವ ನೀರನ್ನು ಹನಿ ನೀರಾವರಿ ಪದ್ಧತಿ ಬಳಸಿ ನೀರಾವರಿ ಮಾಡುತ್ತಾರೆ. ರಾತ್ರಿ ಸಂದರ್ಭದಲ್ಲಿ ವಿದ್ಯುತ್ ಸರಬರಾಜು ಮಾಡುವುದರಿಂದ ಆ ಚಳಿಯಲ್ಲಿ ಡ್ರಿಪ್ ಪೈಪ್‌ಗಳನ್ನು ಆ ಕಡೆಯಿಂದ ಈ ಕಡೆಗೆ ಶಿಫ್ಟ್‌ ಮಾಡುವುದು ಕಷ್ಟ. ಈ ನಡುವೆ ನೀರು ಸೋರಿಕೆಯಾಗಿದೆಯಾ ಎಂದು ಪರೀಕ್ಷಿಸುತ್ತಿರಬೇಕು. ಹೆಚ್ಚು ಪ್ರಮಾಣದ ಅಥವಾ ಕಡಿಮೆ ಪ್ರಮಾಣದ ನೀರನ್ನು ಬೆಳೆಗಳಿಗೆ ಹಾಯಿಸಿದರೆ ಅದು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ

ಸುರತ್‌ಘರ್ ರೈತರು ವಿದ್ಯುತ್ ಮಂಡಳಿ ಕಚೇರಿ ವಿರುದ್ಧ ಆಗಾಗ ಪ್ರತಿಭಟನೆ ನಡೆಸಿ ವಿದ್ಯುತ್ ಸರಬರಾಜು ಸಮಯವನ್ನು ಹಗಲಿನಲ್ಲಿ ನಿಗದಿಪಡಿಸಿ ಎಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಟ್ಯೂಬ್-ವೆಲ್ ನೀರಾವರಿಯ ಕಷ್ಟಗಳು ಕಾಲುವೆ-ನೀರಾವರಿಯಲ್ಲಿ ಅಷ್ಟಾಗಿ ಇಲ್ಲ. ಕಾಲುವೆ ನೀರು ನೇರವಾಗಿ ಜಮೀನು ತಲುಪತ್ತದೆ. ವಿದ್ಯುತ್‌ನ ಹಂಗೂ ಇರುವುದಿಲ್ಲ.ಇಂತಹ ಸಂದರ್ಭದಲ್ಲೇ ಟ್ಯೂಬ್‌ವೆಲ್ ನೀರಾವರಿ ಪ್ರದೇಶವನ್ನು ಕಾಲುವೆ-ನೀರಾವರಿ ಪ್ರದೇಶ ಎಂದು ತೋರಿಸಿದ ಬ್ಯಾಂಕ್ ರೈತರಿಗೆ ವಿಮಾ ಪರಿಹಾರ ನಿರಾಕರಿಸುತ್ತಿದೆ.

ದಿ ವೈರ್ ಜೊತೆ ಮಾತನಾಡಿರುವ ಸುರತ್‌ಘರ್ ಬರೋಡಾ ಬ್ಯಾಂಕ್ ಫೀಲ್ಡ್ ಆಫೀಸರ್ ಕಾಲ್ರಾಮ್, “2019 ಕ್ಕೆ ಸಂಬಂಧಿಸಿದಂತೆ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿದೆ. ನಾವು ಆಧಾರ್ ವಿವರಗಳನ್ನು ಎಂಟ್ರಿ ಮಾಡಿದಾಗ, ಅದು ಹಿಂದಿನ ವರ್ಷದ ವಿವರಗಳನ್ನೇ ತೆಗೆದುಕೊಂಡ ಪರಿಣಾಮ ಮಿಸ್‌ಮ್ಯಾಚ್ ಸಂಭವಿಸಿದೆ. ಈಗ ಮ್ಯಾನುವಲ್ ಆಗಿ ವಿವರ ಸೇರಿಸುತ್ತಿದ್ದು, ಅಂತಹ ಸಮಸ್ಯೆ ಮತ್ತೆ ಸಂಭವಿಸದು’ ಎನ್ನುತ್ತಾರೆ.

ಇದನ್ನೂ ಓದಿ: ರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು

ಫಸಲ್ ಬೀಮಾ ಯೋಜನೆಯ ಪೋರ್ಟಲ್‌ನಲ್ಲೇ ಹಲವಾರು ಸಮಸ್ಯೆಗಳಿದ್ದು, ಅದರ ಪರಿಣಾಮಗಳನ್ನು ರೈತರು ಅನುಭವಿಸುತ್ತಿದ್ದಾರೆ. ಹಿರಿಯ ಕೃಷಿ ವಿಜ್ಞಾನಿಯೊಬ್ಬರ ಪ್ರಕಾರ, ಈ ಪೋರ್ಟಲ್‌ನ ಡ್ರಾಪ್ ಬಾಕ್ಸ್‌ನಲ್ಲಿ ನೂರಾರು ಗ್ರಾಮಗಳ ಹೆಸರು ಗೋಚರಿಸುವುದೇ ಇಲ್ಲ. ಹೀಗಾಗಿ ಸಮೀಪದ ಯಾವುದೋ ಗ್ರಾಮದ ಹೆಸರು ನಮೂದಿತಗೊಂಡು ರೈತರು ಪರಿತಪಿಸಬೇಕಾಗಿದೆ’ ಎಂದಿದ್ದಾರೆ.

2018 ರ ಸೆಪ್ಟೆಂಬರ್‌ನಲ್ಲಿ ಹನುಮಾನಘರ್ ಜಿಲ್ಲೆಯ ಹಲವು ಗ್ರಾಮಗಳ ರೈತರಿಗೆ ವಿಮಾ ಪರಿಹಾರ ನಿರಾಕರಿಸಲ್ಪಟ್ಟಿತ್ತು. ಅಲ್ಲಿನ ಎಸ್‌ಬಿಐ ಶಾಖೆಯು ರೈತರ ಪ್ರಿಮಿಯಂ ಹಣವನ್ನು ಬಜಾಜ್ ಅಲಾಯನ್ಸ್ ವಿಮಾ ಕಂಪನಿಗೆ ಕಟ್ಟದಿದುದೇ ಇದಕ್ಕೆ ಕಾರಣವಾಗಿತ್ತು. ಈ ವಿಮಾ ಕಂಪನಿಗೆ ಪ್ರಿಮಿಯಂ ಕಟ್ಟುವ ಬದಲು ಅಗ್ರಿಕಲ್ಚರಲ್ ಇನ್ಸುರನ್ಸ್ ಕಂಪನಿಗೆ ಪ್ರಿಮಿಯಂ ಹಣವನ್ನು ಎಸ್‌ಬಿಐ ಶಾಖೆ ವರ್ಗಾಯಿಸಿತ್ತು! ಈ ವಿಮಾ ಕಂಪನಿ ಹಣ ವಾಪಸ್ ಮಾಡಿತಾದರೂ ಅಷ್ಟು ಹೊತ್ತಿಗೆ ಪಾವತಿಸುವ ಅವಧಿ ಮುಗಿದಿತ್ತು.

2019 ರ ಏಪ್ರಿಲ್‌ನಲ್ಲಿ ಹನುಮಾನ್‌ಘರ್ ಹೋಬಳಿಯ ನೊಹಾರ್ ಹೋಬಳಿಯ 135 ಕಿಸಾನ್ ಕಾರ್ಡುದಾರ ರೈತರಿಗೆ ವಿಮಾ ಹಣ ನಿರಾಕರಿಸಲಾಗಿತು. ಅವರ 2017ರ ಪ್ರಿಮಿಯಂ ಹಣವನ್ನು ಆಕ್ಸಿಸ್ ಬ್ಯಾಂಕ್ ಆ ರೈತರು ಬೆಳೆಯದೇ ಇದ್ದ ಹತ್ತಿ ಬೆಳೆಗೆ ವರ್ಗಾಯಿಸಿತ್ತು!

ಇದನ್ನೂ ಓದಿ: ಬಹುತ್ವದ ದೇಶದಲ್ಲಿ ಸಂಧಾನ-ಚೌಕಾಶಿಗೆ ಕದ ಮುಚ್ಚುತ್ತಿರುವ ಪ್ರಭುತ್ವಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...