ಇತ್ತೀಚಿನ ವಾರಗಳಲ್ಲಿ ಮ್ಯಾನ್ಮಾರ್‌ನ ಸೈಬರ್-ಸ್ಕ್ಯಾಮ್ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರನ್ನು ರಕ್ಷಿಸಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಇದರಲ್ಲಿ ಹಲವಾರು ಭಾರತೀಯ ನಾಗರಿಕರು ಕೂಡಾ ಇದ್ದರು ಎಂದು ವರದಿ ಹೇಳಿದೆ. ಇಂತಹ ಸೈಬರ್ ಸ್ಕ್ಯಾಮ್ ಕಾಲ್ ಸೆಂಟರ್‌ಗಳ ವಿರುದ್ಧ ಥಾಯ್ಲೆಂಡ್‌ನಲ್ಲಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ಮ್ಯಾನ್ಮಾರ್
ರಕ್ಷಿಸಲ್ಪಟ್ಟ ಜನರು ನಿರುದ್ಯೋಗಿಗಳಾಗಿದ್ದು, ಅವರನ್ನು ಕೆಲಸಕ್ಕೆಂದು ಕರೆಸಿ ಸೈಬರ್ ಸ್ಕ್ಯಾಮ್ ಕಾಲ್ ಸೆಂಟರ್‌ನಲ್ಲಿ ವಂಚನೆ ನಡೆಸುವ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು ಎಂದು ವರದಿಯಾಗಿದೆ. ಇಲ್ಲಿ ಕಾರ್ಮಿಕರನ್ನು ಚಿತ್ರಹಿಂಸೆ ಮಾಡಲಾಗುತ್ತಿತ್ತು ಎಂದು ವರದಿ ಹೇಳಿದೆ. ಪ್ರತಿದಿನ 20 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಲಾಗುತ್ತಿತ್ತು ಮತ್ತು ತಮಗೆ ನೀಡಿದ್ದ ವಂಚನೆಯ ಗುರಿಗಳನ್ನು ಸಾಧಿಸಲು ಸಾಧ್ಯವಾಗದಿದ್ದಾಗ ಥಳಿಸಲಾಗುತ್ತಿತ್ತು ಎಂದು ಸಂತ್ರಸ್ತರು ಎಂದು ಹೇಳಿದ್ದಾರೆ. ಮ್ಯಾನ್ಮಾರ್
ಹಗರಣ ನಡೆಸುವ ಈ ರೀತಿಯ ಸೈಬರ್ ಸ್ಕ್ಯಾಮ್ ಕಾಲ್ ಸೆಂಟರ್‌ಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿ, ಮ್ಯಾನ್ಮಾರ್‌ನ ಮೈವಾಡಿಯಲ್ಲಿರುವ ಕೇಂದ್ರಗಳಿಂದ 140 ಭಾರತೀಯ ನಾಗರಿಕರನ್ನು ರಕ್ಷಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಬುಧವಾರ ವರದಿ ಮಾಡಿದೆ. ಭಾರತ ಸರ್ಕಾರವು ಅವರನ್ನು ಸ್ವದೇಶಕ್ಕೆ ಹಿಂದಿರುಗಿಸಲು ಅನುಕೂಲ ಮಾಡಿಕೊಡುತ್ತಿದೆ ಎಂದು ವರದಿ ಹೇಳಿದೆ.
ಫೆಬ್ರವರಿ 19 ರಂದು ಥಾಯ್ಲೆಂಡ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು ಮ್ಯಾನ್ಮಾರ್‌ನಲ್ಲಿರುವ ಅಕ್ರಮ ಕಾಲ್ ಸೆಂಟರ್‌ಗಳಿಂದ ಸುಮಾರು 7,000 ಜನರನ್ನು ರಕ್ಷಿಸಲಾಗಿದ್ದು, ಅವರನ್ನು ಗಡಿಯಾಚೆಗೆ ಥಾಯ್ಲೆಂಡ್‌ಗೆ ಕರೆತರಲು ಕಾಯುತ್ತಿದ್ದಾರೆ ಎಂದು ಹೇಳಿದ್ದರು.
ಇಂಹತ ಕೇಂದ್ರಗಳಿಂದ ರಕ್ಷಿಸಲ್ಪಟ್ಟ ಸುಮಾರು 10,000 ವಿದೇಶಿಯರನ್ನು ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಥಾಯ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ಕಾಂಬೋಡಿಯನ್ ನಗರವಾದ ಪೊಯ್ಪೆಟ್‌ನಲ್ಲಿಯೂ ಕೂಡಾ, ಥಾಯ್ಲೆಂಡ್ ಅಧಿಕಾರಿಗಳು ಶಂಕಿತ ಸ್ಕ್ಯಾಮ್ ಕಾಲ್ ಸೆಂಟರ್‌ಗಳಿಗೆ ಗಡಿಯಾಚೆಗಿನ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಕಾಂಬೋಜಾ ನ್ಯೂಸ್ ವರದಿ ಮಾಡಿದೆ. ಥಾಯ್ಲೆಂಡ್‌ನ ಈ ಕ್ರಮವು ಕಾಂಬೋಡಿಯನ್ ಕಾನೂನು ಜಾರಿ ಅಧಿಕಾರಿಗಳೊಂದಿಗೆ ವಿವಾದಕ್ಕೆ ಕಾರಣವಾಯಿತು. ಥೈಲ್ಯಾಂಡ್‌ನ ಈ ಕ್ರಮವು ಸ್ಥಳೀಯ ಅಧಿಕಾರಿಗಳ ಸಹಯೋಗಕ್ಕಿಂತ ಏಕಪಕ್ಷೀಯ ಕ್ರಮವಾಗಿದೆ ಎಂದು ಅವರು ಹೇಳಿದ್ದರು.
22 ವರ್ಷದ ಚೀನೀ ನಟನನ್ನು ಕರೆಯ ಮೂಲಕ ವಂಚಿಸಿ ಅಪಹರಿಸಿದ ನಂತರ ಥಾಯ್ಲೆಂಡ್ ಇಂತಹ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿತು. ಚಲನಚಿತ್ರ ನಿರ್ಮಾಪಕರೊಂದಿಗೆ ಪಾತ್ರವರ್ಗದ ಸಭೆ ಎಂದು ಭಾವಿಸಿ ಥಾಯ್ಲೆಂಡ್‌ಗೆ ಬಂದ ನಂತರ ಈ ನಟನನ್ನು ಅಪಹರಿಸಲಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸೈಬರ್ ವಂಚನೆಗಳು ತೀವ್ರವಾಗಿ ಹೆಚ್ಚಾಗಲು ಮ್ಯಾನ್ಮಾರ್‌ನಲ್ಲಿರುವಂತಹ ವಂಚನೆ ಜಾಲವು ಕಾರಣವಾಗಿದೆ ಎಂದು ಸ್ಕ್ರಾಲ್ ಡಾಟ್ ಇನ್ ವರದಿ ಮಾಡಿದೆ.
ಗೃಹ ಸಚಿವಾಲಯದ ಅಡಿಯಲ್ಲಿರುವ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ಪ್ರಕಾರ, ಕಳೆದ ವರ್ಷ ಕೇವಲ ಒಂಬತ್ತು ತಿಂಗಳಲ್ಲಿ ಭಾರತೀಯರು ಸೈಬರ್ ಹಗರಣಗಳ ಕಾರಣಕ್ಕೆ 11,333 ಕೋಟಿ ರೂ. ಅಥವಾ 1.3 ಬಿಲಿಯನ್ ಡಾಲರ್‌ಗಳನ್ನು ಕಳೆದುಕೊಂಡಿದ್ದಾರೆ.
ಮೇ ತಿಂಗಳಲ್ಲಿ, ಭಾರತದ ವಿದೇಶಾಂಗ ಸಚಿವಾಲಯವು ಕಾಂಬೋಡಿಯಾ ಮತ್ತು ಲಾವೋಸ್‌ನ ನಕಲಿ ಉದ್ಯೋಗಾವಕಾಶಗಳ ಬಗ್ಗೆ ಎಚ್ಚರಿಸಿತ್ತು. ಸರ್ಕಾರದಿಂದ ಅನುಮೋದಿಸಲ್ಪಟ್ಟ ಅಧಿಕೃತ ಏಜೆಂಟ್‌ಗಳ ಮೂಲಕ ಮಾತ್ರ ಉದ್ಯೋಗವನ್ನು ಪಡೆಯುವಂತೆ ಕೇಳಿಕೊಂಡಿತ್ತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: 121 ಜನರು ಬಲಿಯಾಗಿದ್ದ ಹತ್ರಾಸ್ ಕಾಲ್ತುಳಿತ ಪ್ರಕರಣದಲ್ಲಿ ಭೋಲೆ ಬಾಬಾಗೆ ಕ್ಲೀನ್ ಚಿಟ್ : ವರದಿ
121 ಜನರು ಬಲಿಯಾಗಿದ್ದ ಹತ್ರಾಸ್ ಕಾಲ್ತುಳಿತ ಪ್ರಕರಣದಲ್ಲಿ ಭೋಲೆ ಬಾಬಾಗೆ ಕ್ಲೀನ್ ಚಿಟ್ : ವರದಿ

