ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲು ನಿರಾಕರಿಸಿ ರಾಹುಲ್ ಗಾಂಧಿಯವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರ ಮನವೊಲಿಸಲು ಇಂದು ಯೂತ್ ಕಾಂಗ್ರೆಸ್ ನಿಂದ ದೇಶಾದ್ಯಂತ #MyLeaderRahulGandhi (ನನ್ನ ನಾಯಕ ರಾಹುಲ್ ಗಾಂಧಿ) ಅಭಿಯಾನ ಆರಂಭವಾಗಿದ್ದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ.

ಬಹುತೇಕ ಎಲ್ಲಾ ರಾಜ್ಯದ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೆಳಿಗ್ಗೆ 10ಗಂಟೆಯಿಂದ ಸಾಮಾಜಿಕ ಜಾಲತಾಣದಲ್ಲಿ ಮತ್ತು ಬೀದಿಯಲ್ಲಿ ಅಭಿಯಾನ ನಡೆಸುತ್ತಿದ್ದು ಎಲ್ಲೆಡೆ ವೈರಲ್ ಆಗಿದೆ.
ಇನ್ನು ಬಹಳಷ್ಟು ಜನ ಕೇಶವ್ ಚಂದ್ ಯಾದವ್ ಅವರ ನೇತೃತ್ವದಲ್ಲಿ ರಾಹುಲ್ ಗಾಂಧಿಯವರ ನಿವಾಸ 12 ತುಘಲಕ್ ಲೇನ್ ತಲುಪಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಉಳಿಯಬೇಕು ಮತ್ತು ಪಕ್ಷಕ್ಕೆ ಹೊಸ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಿದ್ದಾರೆ.

ನೀವು ದೇಶದ ಲಕ್ಷಾಂತರ, ಕೋಟಿ ಜನರ ನಾಯಕರಾಗಿದ್ದೀರಿ, ಯಾರಾದರೂ ಕಾಂಗ್ರೆಸ್ ಅನ್ನು ಮುನ್ನಡೆಸಲು ಸಾಧ್ಯವಾದರೆ ಅವರು ನೀವೇ. ನಮ್ಮನ್ನು ಮುನ್ನಡೆಸಲು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಎಂದು ಕಾರ್ಯಕರ್ತನೊಬ್ಬ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾನೆ.

ಯೂತ್ ಕಾಂಗ್ರೆಸ್ ಕಾರ್ಯಕರ್ತರ ಬೇಡಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ರಾಹುಲ್ ಗಾಂಧಿಯವರು ರಾಜೀನಾಮೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಈ ನಿರ್ಣಾಯಕ ಹಂತದಲ್ಲಿ ಪಕ್ಷವನ್ನು ಮುನ್ನಡೆಸಬೇಕು.
ಅವರು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪಕ್ಷವನ್ನು ಪುನರುಜ್ಜೀವನಗೊಳಿಸಲು ಬದ್ಧರಾಗಿದ್ದಾರೆ. ಯಾವುದು ಅಸಾಧ್ಯವಲ್ಲ ಎಂದು ಸಂಜಯ್ ನಿರುಪಮ್ ಎಂಬುವವರು ಟ್ವೀಟ್ ಮಾಡಿದ್ದಾರೆ.
I fully agree with Youth Congress workers's demand that @RahulGandhi should withdraw his resignation and continue to lead the party at this critical juncture.
He is hard working,dedicated and committed to revive the party.
The turn around is not impossible.#MyLeaderRahulGandhi— Sanjay Nirupam (@sanjaynirupam) June 26, 2019
ಇನ್ನೊಂದಿಷ್ಟು ಫೋಟೊಗಳು ಇಲ್ಲಿವೆ..



