Homeಮುಖಪುಟಈ ದೇಶದಲ್ಲಿ ಆ್ಯಬುಲೆನ್ಸ್‌ಗೂ ಜಾಗವಿಲ್ಲವೇ? : ಒಂದು ಪತ್ರ

ಈ ದೇಶದಲ್ಲಿ ಆ್ಯಬುಲೆನ್ಸ್‌ಗೂ ಜಾಗವಿಲ್ಲವೇ? : ಒಂದು ಪತ್ರ

- Advertisement -
- Advertisement -

‘ಈ ದೇಶದಲ್ಲಿ ಆ್ಯಂಬುಲೆನ್ಸ್‌ಗೂ ಜಾಗವಿಲ್ಲ’ ಎಂಬ ಮಾತು ಎಂತಹ ಗಟ್ಟಿ ಮನಸ್ಸಿನವರನ್ನೂ ಒಮ್ಮೆ ಕಾಡಿಸದೆ ಬಿಡದು. ಇದು ಕವಲುದಾರಿ ಸಿನಿಮಾದ ಒಂದು ದೃಶ್ಯ. ಅನಂತನಾಗ್‌ಗೆ ಗುಂಡೇಟು ಬಿದ್ದು, ಅವರನ್ನು ಉಳಿಸಬೇಕೆಂದು ಟ್ರಾಫಿಕ್ ಪೊಲೀಸ್‌ ಆದ ಹೀರೋ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಾನೆ. ಆದರೆ ರಸ್ತೆಯುದ್ದಕ್ಕೂ ಟ್ರಾಫಿಕ್. ಸೈರನ್ ಹಾಕಿದ್ದರೂ ಜಾಗಬಿಡುವವರಿಲ್ಲ. ಅನಂತ್‌ನಾಗ್ ರಸ್ತೆ ಮಧ್ಯದಲ್ಲೇ ಕೊನೆಯುಸಿರೆಳೆಯುತ್ತಾರೆ.
ಈ ದೃಶ್ಯವನ್ನು ನೋಡಿದ ಮೇಲೆ ಎಲ್ಲೇ ಆ್ಯಬುಂಲೆನ್ಸ್ ಶಬ್ದ ಕೇಳಿದರೂ ತಕ್ಷಣವೇ ಗಮನ ರಸ್ತೆಯೆಡೆಗೆ ಕೇಂದ್ರೀಕರಿಸುವಂತಾಗಿದೆ. ಇಂದು ಬೆಳಗ್ಗೆ ನಾನು ಕೆ.ಆರ್.ಮಾರ್ಕೆಟ್ ಬಳಿ ಬಸ್ಸಿನಲ್ಲಿ ಬರುತ್ತಿದ್ದಾಗ ಹಿಂದಿನಿಂದ ಆ್ಯಂಬುಲೆನ್ಸ್ ಶಬ್ದ ಬಂತು. ತಕ್ಷವೇ ತಿರುಗಿ ನೋಡಿದೆ. ನಾಕುಳಿತಿದ್ದ ಬಸ್ಸಿನಿಂದ ಸ್ವಲ್ಪವೇ ದೂರದಲ್ಲಿತ್ತು. ಅದರ ಮುಂದೆ ಒಂದೆರಡು ಕಾರುಗಳು ಬೈಕುಗಳು ಬರುತ್ತಿದ್ದವು. ಅವರಾರೂ ಆ್ಯಂಬುಲೆನ್ಸ್‌ಗೆ ಸೈಡ್ ಕೊಡಲಿಲ್ಲ. ಬದಲಾಗಿ ಮತ್ತೊಂದೆರಡು ಬೈಕುಗಳು ಆ್ಯಬುಲೆನ್ಸ್‌ಗೆ ಸೈಡ್‌ ಹೊಡೆದು ಮುಂದೆಬರುತ್ತಿದ್ದವು. ದುರದೃಷ್ಟವೆಂದರೆ ನಾನು ಕುಳಿತಿದ್ದ ಬಸ್ಸು ಕೂಡ ಜಾಗಬಿಡಲಿಲ್ಲ, ಹಾಗೇ ಮುಂದೆ ಬಂತು. ಅಲ್ಲಿದ್ದ ಟ್ರಾಫಿಕ್ ಪೋಲಿಸ್ ಕೂಡ ಒಂದು ಹೆಜ್ಜೆ ಅಲುಗಾಡದೆ ನಿಂತಲ್ಲೇ ನಿಂತು, ಅಲ್ಲಿಯ ಸನ್ನಿವೇಶವನ್ನು ನೋಡುತ್ತಿದ್ದರು ಬಿಟ್ಟರೆ, ಆ್ಯಂಬುಲೆನ್ಸ್‌ಗೆ ಜಾಗ ಬಿಡಿಸುವ ಕೆಲಸ ಮಾಡಲೇ ಇಲ್ಲ.

ಇದು ಒಂದು ಉದಾಹರಣೆಯಷ್ಟೇ ಇಂತಹವು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಟ್ರಾಫಿಕ್ ಇಲ್ಲದ ರಸ್ತೆಗಳಲ್ಲೂ ಆ್ಯಬುಲೆನ್ಸ್‌ಗೆ ಸೈಡ್ ಕೊಡದೆ ಮಧ್ಯ ರಸ್ತೆಯಲ್ಲಿ ಹೋಗುವವರೂ ಇದ್ದಾರೆ. ಆ್ಯಬುಲೆನ್ಸ್ ಜೊತೆಗೆ ರೇಸ್‌ಗೆ ಬಿದ್ದವರಂತೆ ಅದರ ಜೊತೆಗೇ ರೇಸ್ ಹೋಗುವವರೂ ಇದ್ದಾರೆ. ಇವರೆಲ್ಲರ ನಡುವೆ ಟ್ರಾಫಿಕ್ ನಿಯಂತ್ರಿಸಿ ಆ್ಯಬುಲೆನ್ಸ್‌ಗೆ ಜಾಗಮಾಡಿಕೊಡುವ ಸಹನೆಯನ್ನೂ ನಮ್ಮ ಟ್ರಾಫಿಕ್ ಪೊಲೀಸರು ಕಳೆದುಕೊಂಡಿದ್ದಾರೆ. ಎಂತಹ ವಿಪರ್ಯಾಸವೆಂದರೆ ವಿಕ್ಟೋರಿಯಾ ಆಸ್ಪತ್ರೆಯ ಮುಖ್ಯದ್ವಾರದ ಮುಂದೆಯೇ ಬಿಎಂಟಿಸಿ ಬಸ್ಸುಗಳ ಮತ್ತು ಆಟೋ ನಿಲ್ದಾಣಗಳಿದ್ದು ಆ್ಯಬುಲೆನ್ಸ್ ಅಲ್ಲಿ ನಿಲ್ಲುವ ಬಸ್ಸುಗಳನ್ನು ದಾಟಿ ಆಸ್ಪತ್ರೆಯೊಳಗೆ ಹೋಗಬೇಕಾದರೆ ಅದೇ ಒಂದು ದೊಡ್ಡ ಸಾಹಸವಾಗಿರುತ್ತದೆ.

ಇಂತಹ ಎಷ್ಟೋ ಘಟನೆಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ವಾಹನ ಸವಾರರು ಆ್ಯಂಬುಲೆನ್ಸ್‌ಗೆ ಜಾಗ ಕೊಡದೆ ತಡವಾಗುವುದರಿಂದ ಬದುಕುಳಿಯಬಹುದಾದ ಎಷ್ಟೋ ಜೀವಗಳು ದಾರಿ ಮಧ್ಯದಲ್ಲೇ ಅಸುನೀಗುತ್ತವೆ. ಆದರೂ ನಮ್ಮ ಅಂತಃಕರಣ ಕಲಕುವುದೇ ಇಲ್ಲ, ನಾವೆಷ್ಟು ಅಸೂಕ್ಷ್ಮರಾಗಿದ್ದೇವೆ ಎಂದು ಪ್ರತಿಯೊಬ್ಬನೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಇವು ಕವಲುದಾರಿ ಸಿನಿಮಾದ ಆ ಮಾತನ್ನು ಮತ್ತೆ ಮತ್ತೆ ನನಪಿಸುತ್ತವೆ.

ಅಲ್ಲದೆ ರಸ್ತೆಯಲ್ಲಿ ಸಾಯುವ ಸ್ಥಿತಿಯಲ್ಲಿದ್ದವರನ್ನು ರಕ್ಷಿಸದೆ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾ ನಿಲ್ಲುವ, ಬಟ್ಟೆ ನೋಡಿ ಕಳ್ಳನೆಂದು ಹೊಡೆದು ಕೊಲ್ಲುವ, ಒಂಬತ್ತು ತಿಂಗಳ ಕಂದಮ್ಮಳನ್ನು ಅತ್ಯಾಚಾರಕ್ಕೆ ಯತ್ನಸುವ ಕ್ರೂರ ಮನಸ್ಸುಗಳ ಮಧ್ಯೆ ಆ್ಯಂಬುಲೆನ್ಸ್‌ ಒಳಗೆ ಸಾವು-ಬದುಕಿನಲ್ಲಿ ಹೋರಾಟ ಮಾಡುವವರ ನೋವು ಹೇಗೆ ತಾನೇ ಅರ್ಥವಾದೀತು ಎಂದು ನಮಗೆ ನಾವೇ ಕೇಳಿಕೊಳ್ಳಬೇಕು, ನಮ್ಮಿಂದಾಗುವ ಮಾನವೀಯ ಕೆಲಸಗಳನ್ನು ಮಾಡಬೇಕು.

ಅಂದರೆ ಎಲ್ಲರೂ ಹೀಗೆ ಇದ್ದಾರೆ ಎಂದರ್ಥವಲ್ಲ. ಆದರೂ ಒಳ್ಳೆಯ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆಯೇ ಎಂಬ ಭಯಕ್ಕೆ ಈ ಪತ್ರ ಬರೆದೆ. ಇದೆಲ್ಲದರ ನಡುವೆ ಮೊನ್ನೆ ಒಬ್ಬ ಟ್ರಾಫಿಕ್ ಪೋಲಿಸ್ ಬಟ್ಟೆರಹಿತನಾಗಿ ಬಿದ್ದಿದ್ದ ಬುದ್ದಮಾಂದ್ಯನಿಗೆ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದರು ಇಂತಹವರನ್ನು ನೋಡಿ ನಾವೆಲ್ಲರೂ ಕಲಿಯಬೇಕಿದೆ.

ಸೋಮಶೇಖರ್ ಚಲ್ಯ, ಮಂಡ್ಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...