ರಾಜ್ಯದ ಮೈಸೂರು ಕ್ಯಾಂಪಸ್‌ನಲ್ಲಿ ನೇಮಕಗೊಂಡಿದ್ದ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಫೌಂಡೇಶನ್‌ನಿಂದ ತರಬೇತಿ ಪಡೆದ 300 ಕ್ಕೂ ಹೆಚ್ಚು ಹೊಸಬರನ್ನುಇನ್ಫೋಸಿಸ್ ವಜಾಗೊಳಿಸಿದೆ ಎಂಬುವುದನ್ನು ಒಪ್ಪಿಕೊಂಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಆದಾಗ್ಯೂ, ಐಟಿ ವಲಯದ ಒಕ್ಕೂಟವಾದ ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ವಜಾಗೊಳಿಸಲಾಗಿರುವ ಸಂಖ್ಯೆಯನ್ನು 700 ಎಂದು ಹೇಳಿದ್ದು ವಿವಾದವೇರ್ಪಟ್ಟಿದೆ.
ಕುತೂಹಲಕಾರಿ ವಿಚಾರವೇನೆಂದರೆ, ಇನ್ಫೋಸಿಸ್ ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ವಜಾಗೊಳಿಸಿದ್ದು ಇದೇ ಮೊದಲಾಗಿದ್ದು, ಈ ಹಿಂದೆ ಸುಮಾರು 500 ಜನರನ್ನು ವಜಾಗೊಳಿಸಲಾಗಿತ್ತು ಎಂದು ವಜಾಗೊಳಿಸಲ್ಪಟ್ಟ ವ್ಯಕ್ತಿಯೊಬ್ಬರು ಅಂದಾಜಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ. ಮೈಸೂರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಇನ್ಫೋಸಿಸ್ ಅಕ್ಟೋಬರ್ 2024 ರಲ್ಲಿ ಕೆಲವೇ ತಿಂಗಳುಗಳ ಹಿಂದೆ ನೇಮಕಗೊಂಡಿದ್ದ ಸುಮಾರು 700 ಕ್ಯಾಂಪಸ್ ನೇಮಕಾತಿಗಳನ್ನು ಬಲವಂತವಾಗಿ ವಜಾಗೊಳಿಸಲು ಪ್ರಾರಂಭಿಸಿದ್ದು, ಇದು ಆಘಾತಕಾರಿ ಮತ್ತು ಅನೈತಿಕ ಕ್ರಮವಾಗಿದೆ. ಈ ಉದ್ಯೋಗಿಗಳು ತಮ್ಮ ಆಫರ್ ಲೆಟರ್‌ಗಳನ್ನು ಸ್ವೀಕರಿಸಿ ಈಗಾಗಲೇ ಎರಡು ವರ್ಷಗಳ ಕಾಲ ಕಾಯಬೇಕಾಗಿತ್ತು” ಎಂದು ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲುಜಾ ಹೇಳಿದ್ದಾರೆ.
ಇನ್ಫೋಸಿಸ್ ಶುಕ್ರವಾರ ಈ ಉದ್ಯೋಗಿಗಳನ್ನು ತನ್ನ ಮೈಸೂರು ಕ್ಯಾಂಪಸ್‌ನ ಸಭೆ ಕೊಠಡಿಗಳಿಗೆ ಕರೆಸಿತು. ಅಲ್ಲಿ ಅವರನ್ನು “ಪರಸ್ಪರ ಬೇರ್ಪಡಿಕೆ” ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು ಎಂದು ಒಕ್ಕೂಟವು ಹೇಳಿದೆ.
ದೇಶದ ಎಲ್ಲಾ ಪ್ರದೇಶದಿಂದ ಇದ್ದ ಉದ್ಯೋಗಿಗಳನ್ನು ಪೂರ್ಣ ದಿನದ ನೋಟಿಸ್ ಅವಧಿ ಕೂಡಾ ನೀಡದೆ ಸಂಜೆಯೊಳಗೆ ಇನ್ಫೋಸಿಸ್ ಆವರಣವನ್ನು ತೊರೆಯುವಂತೆ ಹೇಳಲಾಯಿತು ಎಂದು ಮಾಜಿ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಜೊತೆಗೆ ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರ ಸುರಕ್ಷತಾ ಕಳವಳವನ್ನು ಕೂಡಾ ಅವರು ಎತ್ತಿ ತೋರಿಸಿದ್ದಾರೆ.
“ಮುಂದಿನ ಕೆಲವು ಬ್ಯಾಚ್‌ಗಳ ಹೆಚ್ಚಿನ ವಜಾಗಳು ಕೂಡಾ ಮುಂದೆ ನಡೆಯಲಿದೆ” ಎಂದು ಮಾಜಿ ಉದ್ಯೋಗಿ ಹೇಳಿದ್ದಾರೆ. ಅದಾಗ್ಯೂ, ಇನ್ಫೋಸಿಸ್ ನೀಡಿರುವ ಅಧಿಕೃತ ಹೇಳಿಕೆಯಲ್ಲಿ, “ವಜಾಗೊಳಿಸಲ್ಪಟ್ಟ ಉದ್ಯೋಗಿಗಳ ಸಂಖ್ಯೆ 300 ಕ್ಕಿಂತ ಸ್ವಲ್ಪ ಹೆಚ್ಚಿದೆ ಮತ್ತು ನಾವು ಯಾರನ್ನೂ ಬಲವಂತವಾಗಿ ವಜಾಗೊಳಿಸಿಲ್ಲ” ಎಂದು ಸ್ಪಷ್ಟಪಡಿಸಿದೆ.
“ಇನ್ಫೋಸಿಸ್ ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದೆ. ಅಲ್ಲಿ ಎಲ್ಲಾ ಹೊಸಬರು ತಮ್ಮ ಮೈಸೂರು ಕ್ಯಾಂಪಸ್‌ನಲ್ಲಿ ಮೂಲಭೂತ ತರಬೇತಿಯನ್ನು ಪಡೆದ ನಂತರ ಆಂತರಿಕ ಮೌಲ್ಯಮಾಪನಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಎಲ್ಲಾ ಹೊಸಬರು ಮೌಲ್ಯಮಾಪನವನ್ನು ಪೂರ್ಣಗೊಳಿಸಲು ಮೂರು ಪ್ರಯತ್ನಗಳನ್ನು ಪಡೆಯುತ್ತಾರೆ, ವಿಫಲವಾದರೆ ಅವರು ಸಂಸ್ಥೆಯೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ, ಇದು ಅವರ ನಡುವೆ ನಡೆಸಲಾದ ಒಪ್ಪಂದದಲ್ಲಿಯೂ ಉಲ್ಲೇಖಿಸಲಾಗಿದೆ” ಎಂದು ಇನ್ಫೋಸಿಸ್ ಹೇಳಿದೆ.
“ಇದು ನಿಮಗೆ ತಿಳಿಸಲಾದ ತರಬೇತಿ ಮೌಲ್ಯಮಾಪನ ಫಲಿತಾಂಶದ ಮುಂದುವರಿಕೆಯಾಗಿದೆ. ಮುಂದಿನ ಹಂತಗಳನ್ನು ಚರ್ಚಿಸಲು ಫೆಬ್ರವರಿ 7, 2025 ರಂದು ಎಚ್‌ಆರ್‌ಡಿಯೊಂದಿಗೆ ಸಭೆಯನ್ನು ನಿಗದಿಪಡಿಸಲಾಗಿದೆ. ನೀವು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು, ಆದ್ದರಿಂದ ದಯವಿಟ್ಟು ಇದರ ಬಗ್ಗೆ ಚರ್ಚಿಸಬೇಡಿ ಅಥವಾ ಈ ಕ್ಯಾಲೆಂಡರ್ ಆಹ್ವಾನವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.” ಎಂದು ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ ಇನ್ಫೋಸಿಸ್ ಹೇಳಿದೆ.
ಇನ್ಫೋಸಿಸ್ ಕ್ರಮವನ್ನು ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ವಿರೋಧಿಸಿದ್ದು, ಅವದ ಕ್ರಮಗಳು 1947 ರ ಕೈಗಾರಿಕಾ ವಿವಾದ ಕಾಯ್ದೆ ಸೇರಿದಂತೆ ಭಾರತೀಯ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತವೆ. ಒಕ್ಕೂಟವು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತ ದೂರು ಸಲ್ಲಿಸುತ್ತಿದ್ದು, ತಕ್ಷಣದ ಹಸ್ತಕ್ಷೇಪ ಮತ್ತು ಇನ್ಫೋಸಿಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದೆ. ಮೈಸೂರು
ಇದನ್ನೂಓದಿ: ದೆಹಲಿ ಚುನಾವಣಾ ಫಲಿತಾಂಶ: ಬಿಜೆಪಿಯ ಕೈ ಬಲಪಡಿಸಿದ ಮಹಿಳಾ ಮತ್ತು ಮಧ್ಯಮ ವರ್ಗದ ಮತದಾರರು
ದೆಹಲಿ ಚುನಾವಣಾ ಫಲಿತಾಂಶ: ಬಿಜೆಪಿಯ ಕೈ ಬಲಪಡಿಸಿದ ಮಹಿಳಾ ಮತ್ತು ಮಧ್ಯಮ ವರ್ಗದ ಮತದಾರರು


