Homeಮುಖಪುಟನಾಗ್ಪುರ ಗಲಭೆ | 'ಹೂಕೋಸು' ಮೂಲಕ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡುತ್ತಿರುವ ಬಿಜೆಪಿ ಪರ ಬಲಪಂಥೀಯರು!

ನಾಗ್ಪುರ ಗಲಭೆ | ‘ಹೂಕೋಸು’ ಮೂಲಕ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡುತ್ತಿರುವ ಬಿಜೆಪಿ ಪರ ಬಲಪಂಥೀಯರು!

- Advertisement -
- Advertisement -

ಮೊಘಲ್ ದೊರೆ ಔರಂಗಜೇಬ್ ಅವರ ಸಮಾಧಿಯನ್ನು ಕೆಡವಬೇಕೆಂದು ಒತ್ತಾಯಿಸಿ ಬಿಜೆಪಿಯ ಪರ ಸಂಘಟನೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ದುಷ್ಕರ್ಮಿಗಳ ನಡೆಸಿದ ಪ್ರತಿಭಟನೆಗಳ ನಂತರ ಮಹಾರಾಷ್ಟ್ರದ ನಾಗ್ಪುರದಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ ಕೆಲವು ಬಲಪಂಥೀಯ ಸಾಮಾಜಿಕ ಮಾಧ್ಯಮ ಖಾತೆಗಳು ಮುಸ್ಲಿಮರ ಹತ್ಯಾಕಾಂಡ ನಡೆಸಬೇಕು ಎಂದು ಸೂಚಿಸಿ ಮತ್ತು ಅದನ್ನು ಪ್ರಚೋದಿಸುವ ಸಂಕೇತವಾಗಿ ಹೂಕೋಸಿನ ಚಿತ್ರಗಳನ್ನು ಹಂಚಿಕೊಳ್ಳುತ್ತಿವೆ. ಇದು 1989ರ ಭಾಗಲ್ಪುರ ಗಲಭೆಗಳನ್ನು ನೆನಪಿಸುತ್ತದೆ. ನಾಗ್ಪುರ ಗಲಭೆ

ನಾಗ್ಪುರ ಗಲಭೆಯ ವಿಚಾರವಾಗಿ ಬಲಫಂಥೀಯರು ಟ್ವಿಟರ್‌ನಲ್ಲಿ ಹೂ ಕೋಸಿನ ಚಿತ್ರ ಯಾಕೆ ಹಂಚಿಕೊಳ್ಳುತ್ತಿದ್ದಾರೆ?

ಬಲಪಂಥೀಯ ಎಕ್ಸ್ ಖಾತೆ @HPhobiaWatch, “ನಾಗ್ಪುರಕ್ಕೆ ಪರಿಹಾರವಿದೆ” ಎಂಬ ಶೀರ್ಷಿಕೆಯೊಂದಿಗೆ ಹೂಕೋಸು ಕೊಯ್ಲು ಮಾಡುವ ಮಹಿಳೆಯ ಚಿತ್ರವನ್ನು ಪೋಸ್ಟ್ ಮಾಡಿದೆ. ಇದೇ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಾ, @HitRunDFI ಎಂಬ ಮತ್ತೊಂದು ಖಾತೆ, “ಹಿಂದೂಗಳಿಗೆ ವಿನಂತಿ: ಈ ಬಾರಿ ಕುಳಿತುಕೊಳ್ಳುವ ಬಾತುಕೋಳಿಗಳಾಗಬೇಡಿ. ಗುರಿಯನ್ನು ಹೊಂದಿ, ಕನಿಷ್ಠ 2 ರಿಂದ 3 ಸಂಖ್ಯೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಮತ್ತು ಕಾರ್ಯನಿರ್ವಹಿಸಿ. ಅಲ್ಲದೆ, ನೀವು ಏನೂ ಮಾಡದಿದ್ದರೂ ಕೂಡಾ ಎಲ್ಲರೂ ನಿಮ್ಮನ್ನು ದೂಷಿಸುತ್ತಾರೆ ಎಂಬುದನ್ನು ನೆನಪಿಡಿ. ಆದ್ದರಿಂದ ಕೆಟ್ಟ PR ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ.” ಎಂದು ಬರೆದುಕೊಂಡಿದೆ.

“ಕೃಷಿಯು ಹಿಂಸಾತ್ಮಕ ಮನಸ್ಸುಗಳ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ. ಬಹುಶಃ ನಾಗ್ಪುರಕ್ಕೆ ಹೆಚ್ಚಿನ ಹೂಕೋಸು ಕೃಷಿಯ ಅಗತ್ಯವಿರುತ್ತದೆ” ಎಂದು ಮತ್ತೊಂದು ಖಾತೆ @Karthik0412 ಬರೆದಿದೆ. ನಾಗ್ಪುರ ಗಲಭೆ

ಹೂಕೋಸು ಮೂಲಕ ಬಲಪಂಥಿಯರು ಏನು ಸೂಚಿಸುತ್ತಿದ್ದಾರೆ?

ಈ ಸಂದರ್ಭದಲ್ಲಿ ಹೂಕೋಸು ಮತ್ತು ಹೂಕೋಸು ಕೃಷಿಯ ಉಲ್ಲೇಖವು 1989 ರ ಭಾಗಲ್ಪುರ ಹಿಂಸಾಚಾರದ ನೇರ ಪ್ರತಿಪಾದನೆಯಾಗಿದೆ. ಈ ಗಲಭೆಯು ಬಾಬರಿ ಮಸೀದಿ ಧ್ವಂಸ ಮಾಡುವ ಅರೆಸ್ಸೆಸ್‌ ಮತ್ತು ಸಂಘಪರಿವಾರದ ಕೃತ್ಯದ ಸಮಯದಲ್ಲಿ ನಡೆಯಿತು. ಈ ವೇಳೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಬಿಜೆಪಿ ಪರ ಸಂಘಟನೆಯಾದ ವಿಎಚ್‌ಪಿಯ ದುಷ್ಕರ್ಮಿಗಳು ಸೇರಿದಂತೆ ಬಲಪಂಥೀಯ ಗುಂಪುಗಳ ಕೈಯಲ್ಲಿ 900 ಕ್ಕೂ ಹೆಚ್ಚು ಮುಸ್ಲಿಮರು ಕ್ರೂರವಾಗಿ ಹತರಾದರು.

ಹಿಂಸಾಚಾರದ ನಂತರ ಇದನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಬಿಹಾರದ ಲೋಗೈನ್‌ನ ಹೂಕೋಸು ಹೊಲಗಳಿಂದ ನೂರಕ್ಕೂ ಹೆಚ್ಚು ಮುಸ್ಲಿಮರ ಮೃತ ದೇಹಗಳನ್ನು ಪತ್ತೆ ಮಾಡಲಾಗಿತ್ತು ಎಂದು ಈ ವರದಿಗಳು ಹೇಳಿದ್ದವು. ಸುಮಾರು ಎರಡು ತಿಂಗಳ ಕಾಲ ನಡೆದ ಮತ್ತು ಭಾಗಲ್ಪುರದ ಗ್ರಾಮೀಣ ಪ್ರದೇಶದ ಸುಮಾರು 200 ಹಳ್ಳಿಗಳ ಮೇಲೆ ಪರಿಣಾಮ ಬೀರಿದ ಈ ಹಿಂಸಾಚಾರದಲ್ಲಿ ಸಾವಿರಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದರು ಅಧಿಕೃತ ಮಾಹಿತಿಗಳು ತಿಳಿಸಿವೆ.

ಆದಾಗ್ಯೂ, ಇತರ ಮೂಲಗಳು ಸಾವಿನ ಸಂಖ್ಯೆಯನ್ನು 2000 ಎಂದು ಹೇಳುತ್ತವೆ. ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (PUDR) ವರದಿಯು, ಸತ್ತವರಲ್ಲಿ 93% ಮುಸ್ಲಿಮರು ಎಂದು ಸೂಚಿಸಿತ್ತು.

ಡಿಸೆಂಬರ್ 1989 ರಲ್ಲಿ ಸತ್ಯೇಂದ್ರ ನಾರಾಯಣ್ ಸಿನ್ಹಾ ನೇತೃತ್ವದ ರಾಜ್ಯ ಸರ್ಕಾರವು ಸ್ಥಾಪಿಸಿದ ಭಾಗಲ್ಪುರ ಗಲಭೆ ವಿಚಾರಣಾ ಆಯೋಗದ ಸದಸ್ಯರ ವರದಿಯು, ಬಾಬರಿ ಮಸೀದಿ ಒಡೆಯಲು ಪ್ರಚೋಧಿಸುವ ರಾಮ ಜನ್ಮಭೂಮಿ ಮೆರವಣಿಗೆಯನ್ನು ಮುಸ್ಲಿಂ ಪ್ರಾಬಲ್ಯದ ಪ್ರದೇಶದ ಮೂಲಕ ಹಾದುಹೋಗಲು ಅವಕಾಶ ಮಾಡಿಕೊಟ್ಟಿದ್ದೆ ಇದಕ್ಕೆ ಕಾರಣ ಎಂದು ಹೇಳಿತ್ತು.

ಈ ವರದಿಯು ಆಡಳಿತವು ಹಿಂಸೆಯನ್ನು ತಡೆಯುವಲ್ಲಿ ತೋರಿದ ಅಸಮರ್ಥತೆ ಮತ್ತು ಉದಾಸೀನತೆಯನ್ನು ಎತ್ತಿ ತೋರಿಸಿತ್ತು. ಜೊತೆಗೆ ವರದಿಯಲ್ಲಿ, ಸೂಪರಿಂಟೆಂಡೆಂಟ್ ಕೆ.ಎಸ್. ತ್ರಿವೇದಿ “ಘಟಿಸಿದ ಗಲಭೆಗೆ ಸಂಪೂರ್ಣ ಹೊಣೆಗಾರ” ಎಂದು ಕಂಡುಕೊಂಡಿತ್ತು. ಈ ವೇಳೆ ಬಿಜೆಪಿ ಮತ್ತು ಅದರ ದುಷ್ಕರ್ಮಿಗಳ ಸಂಘಟನೆ ವಿಎಚ್‌ಪಿ ತ್ರಿವೇದಿ ವಿರುದ್ಧದ ಶಿಸ್ತು ಕ್ರಮವನ್ನು ಪ್ರಶ್ನಿಸಿದ್ದವು. ಇದರ ನಂತರ ಆಗಿನ ಪ್ರಧಾನಿ ರಾಜೀವ್ ಗಾಂಧಿ ರಾಜ್ಯ ಸರ್ಕಾರ ಹೊರಡಿಸಿದ ಅವರ ವರ್ಗಾವಣೆಯನ್ನು ರದ್ದುಗೊಳಿಸಿದ್ದರು.

ಭಾಗಲ್ಪುರ ಹಿಂಸಾಚಾರವು ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಕಲೆಯಾಗಿ ಉಳಿದಿದೆ. ಘಟನೆಯ ನಂತರ ಬಿಹಾರದಲ್ಲಿ ಅಧಿಕಾರಕ್ಕೆ ಬಂದ ಅನೇಕ ಸರ್ಕಾರಗಳು ಸರಿಯಾದ ತನಿಖೆಗಳನ್ನು ನಡೆಸಲು ಮತ್ತು ಬಲಿಪಶುಗಳಿಗೆ ನ್ಯಾಯ ಒದಗಿಸಲು ವಿಫಲವಾಗಿವೆ.

ಈ ಘಟನೆಯನ್ನು “ಗೋಬಿ ಕೆ ಕೆತ್” (ಹೂ ಕೋಸಿನ ತೋಟ) ಎಂದು ಕರೆಯಲಾಗುತ್ತದೆ ಮತ್ತು ಇದು ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿದಿದೆ. ನಾಗ್ಪುರ ಗಲಭೆಯ ಸಂದರ್ಭದಲ್ಲಿ ಬಲಪಂಥೀಯರು ಹೂ ಕೋಸಿನ ಚಿತ್ರಗಳನ್ನು ಹಾಕುವ ಮೂಲಕ ಈ ಐತಿಹಾಸಿಕ ಘಟನೆಯನ್ನು ಸಾಂಕೇತಿಕವಾಗಿ ಸೂಚಿಸುತ್ತಿದ್ದಾರೆ. ಇದು ಒಂದು ರೀತಿಯ ಕೋಡೆಡ್ ಸಂದೇಶವಾಗಿದ್ದು, ಭಾಗಲ್ಪುರದಂತೆಯೇ ನಾಗ್ಪುರದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುವ ಉದ್ದೇಶ ಇದಾಗಿದೆ ಎಂದು ಹಲವಾರು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಕೃಪೆ:TNIE

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಬಿಜೆಪಿಯ ಇಬ್ಬರು ಎಂಎಲ್‌ಸಿಗಳಿಗೆ ಕಾಂಗ್ರೆಸ್ ಸೇರುವಂತೆ ಸದನದಲ್ಲೆ ಆಫರ್ ನೀಡಿದ ಡಿ.ಕೆ. ಶಿವಕುಮಾರ್!

ಬಿಜೆಪಿಯ ಇಬ್ಬರು ಎಂಎಲ್‌ಸಿಗಳಿಗೆ ಕಾಂಗ್ರೆಸ್ ಸೇರುವಂತೆ ಸದನದಲ್ಲೆ ಆಫರ್ ನೀಡಿದ ಡಿ.ಕೆ. ಶಿವಕುಮಾರ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...