ಫೆಬ್ರವರಿ 24ರಂದು ಗುಜರಾತಿನ ಅಹ್ಮದಬಾದ್‌ನಲ್ಲಿ ನಡೆಯಲಿರುವ ನಮಸ್ತೆ ಟ್ರಂಪ್ ಕಾರ್ಯಕ್ರದಲ್ಲಿ 70 ಲಕ್ಷ ಜನ ಸೇರುತ್ತಾರೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು. ಆದರೆ ಅಹ್ಮದಾಬಾದ್‌ನ 22 ಕಿ.ಮೀ ಉದ್ದದ ರೋಡ್ ಶೋನಲ್ಲಿ ಸುಮಾರು ಒಂದು ಲಕ್ಷ ಜನ ಸೇರುತ್ತಾರೆ ಎಂದು ನಗರದ ಮುನ್ಸಿಪಲ್ ಕಮಿಷನರ್ ವಿಜಯ್ ಟ್ವೀಟ್ ಮಾಡಿದ್ದಾರೆ.
#MaruAmdavad says #NamasteTrump#IndiaRoadShow is getting bigger & bigger ??????
More than 1 lakh participants already confirmed for the 22 km roadshow
Great opportunity for #Ahmedabad to present Indian Culture to the World
Keep following @AmdavadAMC for more details https://t.co/xcJJbwgUE7
— Vijay Nehra (@vnehra) February 16, 2020
ಅಮೆರಿಕದ ಅಧ್ಯಕ್ಷ ಟ್ರಂಪ್ ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ “ನಮ್ಮನ್ನು ಭಾರತ ಉತ್ತಮವಾಗಿ ಪರಿಗಣಿಸುತ್ತಿಲ್ಲ, ಆದರೆ ನಾನು ಪ್ರಧಾನಿ ಮೋದಿಯವರನ್ನು ತುಂಬಾ ಇಷ್ಟಪಡುತ್ತೇನೆ. ವಿಮಾನ ನಿಲ್ದಾಣ ಮತ್ತು ಈವೆಂಟ್ ನಡುವೆ ನಾವು 7 ಮಿಲಿಯನ್ (70 ಲಕ್ಷ) ಜನರು ಇರುತ್ತಾರೆಂದು ಅವರು ನನಗೆ ಹೇಳಿದರು” ಎಂದು ಹೇಳಿದ್ದರು.
ಈ ಸಂಖ್ಯೆಯೇ ಉತ್ಪ್ರೇಕ್ಷೆಯಾಗಿದೆ. ಏಕೆಂದರೆ ಗುಜರಾತ್‌ನ ಪ್ರಮುಖ ನಗರಗಳಲ್ಲಿ ಒಂದಾದ ಅಹಮದಾಬಾದ್‌ನ ಒಟ್ಟು ಜನಸಂಖ್ಯೆಯೇ 70-80 ಲಕ್ಷ ಇದೆ. ಹೀಗಿದ್ದ ಮೇಲೆ ಒಂದು ರೋಡ್ ಶೋಗೆ 70 ಲಕ್ಷ ಜನ ಸೇರಿಸುವುದು ಕನಸಿನ ಮಾತೇ ಸರಿ.
ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು ಮೊದಲು ಮಹಾತ್ಮ ಗಾಂಧಿಯವರೊಂದಿಗೆ ನಿಕಟ ಸಂಬಂಧ ಹೊಂದಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಉಭಯ ನಾಯಕರು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಮೊಟೆರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೂಸ್ಟನ್‌ನಲ್ಲಿ ನಡೆದ “ಹೌದಾ, ಮೋದಿ!” ಕಾರ್ಯಕ್ರಮದಲ್ಲಿ, ಅಮೆರಿಕದ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿಯವರು ವೇದಿಕೆಯನ್ನು ಹಂಚಿಕೊಂಡಾಗ ಸುಮಾರು 50,000 ಜನಸಮೂಹವು ಅವರನ್ನು ಸ್ವಾಗತಿಸಿತು.
ಅಧ್ಯಕ್ಷ ಟ್ರಂಪ್ ಅವರ ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ, ಉಭಯ ರಾಷ್ಟ್ರಗಳು ಹಲವಾರು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಆದರೆ ದೊಡ್ಡ ವ್ಯವಹಾರಗಳಿಗೆ ಸಹಿ ಮಾಡುವ ಸಾಧ್ಯತೆ ಇಲ್ಲ ಎಂದು ವರದಿಗಳು ತಿಳಿಸಿವೆ. “ಈಗ ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಬಹುದು, ಆದರೆ ನಂತರದ ದಿನಗಳಲ್ಲಿ ನಾನು ಬಹು ದೊಡ್ಡ ವ್ಯವಹಾರವನ್ನು ನಿರೀಕ್ಷಿಸುತ್ತಿದ್ದೇನೆ” ಎಂದು ಅಧ್ಯಕ್ಷ ಟ್ರಂಪ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದರು.


