ಯುಗಾದಿಗೆ DVG ರೋಡು
ಕ್ರಿಸ್ಮಸ್‌ಗೆ Brigade ರೋಡು
ರಂಜಾನ್‌ಗೆ Mosque ರೋಡು
ಈ ಒಗ್ಗಟ್ಟನ್ನು ಮುರಿಯಬೇಡ ಬಿಟ್ಟು ಬಿಡು
#ನಮ್ಮೂರ_ಎಲ್ಲರೂ_ನಮ್ಮೋರು…
ಬದುಕು ಅರಸಿ ಬರುವ ಯಾರಿಗೂ ಬೆಂಗಳೂರೇ ಭೇದ ಮಾಡುವುದಿಲ್ಲ. ಇನ್ನು ಮನುಷ್ಯತ್ವದ ಸಿಹಿ ಉಂಡ ನಮಗ್ಯಾವ ವಿಷ? ವಿಷ ಕಕ್ಕುವ ಕೋಮುವಾದವನ್ನು ಬೇರು ಸಮೇತ ಕಿತ್ತು ಬಿಸಾಕೋಣ. ಮಾನವತ್ವದ ಸೇತುವೆ ಕಟ್ಟೋಣ. #ನಮ್ಮೂರ_ಎಲ್ಲರೂ_ನಮ್ಮೋರು…
ಇವು ಪ್ರೀತಿಗಾಗಿ ಬೆಂಗಳೂರು – Bengaluru For Love ವತಿಯಿಂದ ಕರೆ ನೀಡಿದ್ದ ಟ್ವಿಟರ್ ಅಭಿಯಾನದಲ್ಲಿ ಕೇಳಿಬಂದ ಘೋಷವಾಕ್ಯಗಳು.. ಕೋವಿಡ್ ಎರಡನೇ ಅಲೆ ತೀವ್ರಗೊಂಡಿರುವ ಸಂದರ್ಭದಲ್ಲಿ ಕೋಮು ದ್ವೇಷವೂ ತಲೆಎತ್ತಿದೆ. ನಮಗೆ ಉತ್ತಮ ಆರೋಗ್ಯ ವ್ಯವಸ್ಥೆ, ಎಲ್ಲರಿಗೂ ಲಸಿಕೆ ಬೇಕು ಹೊರತು ಕೋಮು ರಾಜಕಾರಣವಲ್ಲ ಎಂದು ನೂರಾರು ಜನರು ಸಾರಿ ಹೇಳುವ ಮೂಲಕ ಜಾತಿ-ಮತ ದ್ವೇಷಕ್ಕೆ ನಮ್ಮಲ್ಲಿ ಜಾಗವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಬಿಎಂಪಿ ವಾರ್ ರೂಂನಲ್ಲಿ ಬೆಡ್ ಬ್ಲಾಕಿಂಗ್ ಹಗರಣ ನಡೆಯುತ್ತಿದೆ, 17 ಜನ ಮುಸ್ಲಿಂ ಸಿಬ್ಬಂದಿ ಇದಕ್ಕೆ ಕಾರಣ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾಡಿದ ಆರೋಪದ ನಂತರ ಕೋಮುದ್ವೇಷ ತೀವ್ರವಾಗಿದ್ದು, ಅನ್ಯಧರ್ಮ ದ್ವೇಷ ಆರಂಭವಾಗಿದೆ. ಆದರೆ ನಮ್ಮ ಬೆಂಗಳೂರು ಸರ್ವಧರ್ಮ ಸಹಿಷ್ಣು ಸಂಸ್ಕೃತಿ ಉಳ್ಳ ನಗರವಾಗಿದೆ. ಹಾಗಾಗಿ ನಮ್ಮೂರಿನ ಎಲ್ಲರೂ ನಮ್ಮವರೆ ಎಂದು ಸಾರಿ ಹೇಳುವ ಮೂಲಕ ಪ್ರೀತಿಯನ್ನು ಹಂಚೋಣ, ದ್ವೇಷವನ್ನು ತಡಯೋಣ ಎಂಬ ಉದ್ದೇಶದಿಂದ ಈ ಟ್ವಿಟರ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ನಮ್ಮ ಊರಿನ ವೈವಿಧ್ಯತೆ ಅಂದ್ರೆ ಇದು ಕಣ್ರೋ! ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮ ಮಧ್ಯೆ ತಂದಿಡಬೇಡಿ!#ನಮ್ಮೂರ_ಎಲ್ಲರೂ_ನಮ್ಮೋರು#NammooraEllaruNammavaru pic.twitter.com/HVF0bJb9R6
— Bengaluru For Love | ಪ್ರೀತಿಗಾಗಿ ಬೆಂಗಳೂರು (@BlrForLove) May 9, 2021
ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಪ್ರಜ್ಞಾವಂತರು ಕರೆ ನೀಡಿದ್ದ ಈ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರನ್ನು ಕೋಮುವಾದಿಗಳ ನಾಡಗಲು ಬಿಡುವುದಿಲ್ಲ, ಇದು ಮಾನವೀಯತೆಯ ಬೀಡು ಎಂದು ಸಾರಿದ್ದಾರೆ.
“ನಮಗೆ ಬೇಕಿರುವುದು ಪ್ರೀತಿಯ ರಾಜಕೀಯ. ನಮ್ಮಜನರಿಗೆ ಬೇಕಿರುವುದು ಊಟ, ಬೆಡ್, ಆಮ್ಲಜನಕ, ಔಷಧಿ. ಅದನ್ನು ನೀಡಿ, ನಿಮ್ಮ ಕೊಳಕು ರಾಜಕೀಯ ಪಕ್ಕಕಿಡಿ” ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾದ ವಿನಯ್ ಶ್ರೀನಿವಾಸನ್ ಟ್ವೀಟ್ ಮಾಡಿದ್ದಾರೆ.
Mum and I. We stand for love.
ನಮಗೆ ಬೇಕಿರುವುದು ಪ್ರೀತಿಯ ರಾಜಕೀಯ.ನಮ್ಮಜನರಿಗೆ ಬೇಕಿರುವುದು ಊಟ, ಬೆಡ್, ಆಮ್ಲಜನಕ, ಔಷಧಿ. ಅದನ್ನೂ ನೀಡಿ,ನಿಮ್ಮ ಕೊಳಕು ರಾಜಕೀಯ ಪಕ್ಕಕಿಡಿ.
Guys pls make your own posters and start putting out ! #NammooraEllaruNammavaru #ನಮ್ಮೂರ_ಎಲ್ಲರೂ_ನಮ್ಮೋರು pic.twitter.com/sS78ihrlFO
— vinaysreenivasa ವಿನಯ (@vinaysreeni) May 9, 2021
ಅದೇ ರೀತಿ ಲಸಿಕೆಯ ಮೇಲೆ ಗಮನ ನೀಡಬೇಕೆ ಹೊರತು ಧ್ರುವೀಕರಣದ ಮೇಲಲ್ಲ. ಜಾತಿ-ಧರ್ಮ ಈಗಾದರೂ ಬಿಡಿ, ಲಸಿಕೆ ಆಮ್ಲಜನಕ ತಂದುಕೊಡಿ ಎಂದು ರಕ್ಷಿತ್ ಪೊನ್ನಾಥಪುರರವರು ಟ್ವೀಟ್ ಮಾಡಿದ್ದಾರೆ.
Focus on vaccination, not on polarization.
ಜಾತಿ-ಧರ್ಮ ಈಗಾದರೂ ಬಿಡಿ, ಲಸಿಕೆ ಆಮ್ಲಜನಕ ತಂದುಕೊಡಿ #ನಮ್ಮೂರ_ಎಲ್ಲರೂ_ನಮ್ಮೋರು#NammooraEllaruNammavaru
— Rakshith ಪೊನ್ನಾಥಪುರ (@PonnathPuraaNa) May 9, 2021
ಬದುಕು ಅರಸಿ ಬರುವ ಯಾರಿಗೂ ಬೆಂಗಳೂರೇ ಭೇದ ಮಾಡುವುದಿಲ್ಲ. ಇನ್ನು ಮನುಷ್ಯತ್ವದ ಸಿಹಿ ಉಂಡ ನಮಗ್ಯಾವ ವಿಷ? ವಿಷ ಕಕ್ಕುವ ಕೋಮುವಾದವನ್ನು ಬೇರು ಸಮೇತ ಕಿತ್ತು ಬಿಸಾಕೋಣ. ಮಾನವತ್ವದ ಸೇತುವೆ ಕಟ್ಟೋಣ ಪ್ರಸಾದ್ ಎಂಬುವವರು ತಿಳಿಸಿದ್ದಾರೆ.
ಮತ್ತಷ್ಟು ಗಮನ ಸೆಳೆದ ಟ್ವೀಟ್‌ಗಳು ಇಲ್ಲಿವೆ ನೋಡಿ…
Veena Stores ಇಡ್ಲಿನೂ ನಮ್ಮದೆ
Sharief Bhai ಬಿರಿಯಾನಿನೂ ನಮ್ಮದೆ#ನಮ್ಮೂರ_ಎಲ್ಲರೂ_ನಮ್ಮೋರು#NammooraEllaruNammavaru— Rakshith ಪೊನ್ನಾಥಪುರ (@PonnathPuraaNa) May 9, 2021
Say no room for communal politics in the Namma #Bengaluru ❤️#NammooraEllaruNammavaru #ನಮ್ಮೂರ_ಎಲ್ಲರೂ_ನಮ್ಮೋರು #CoronaPandemic pic.twitter.com/MMRO71TXRc
— Sowmya | ಸೌಮ್ಯ (@Sowmyareddyr) May 9, 2021
ಜನರೇ ಬದುಕುಳಿಯದಿದ್ದರೆ⚰️
ಯಾವ ಜಾತಿ? ಯಾವ ಧರ್ಮ??
ಕೊಳಕು ರಾಜಕೀಯ ಪಕ್ಕಕ್ಕಿಡಿ?
ಲಸಿಕೆ ಆಮ್ಲಜನಕ ತಂದುಕೊಡಿ?@BSYBJP @mla_sudhakar@Tejasvi_Surya#NammooraEllaruNammavaru#ನಮ್ಮೂರ_ಎಲ್ಲರೂ_ನಮ್ಮೋರು
— ಕನ್ನಡಿಗ ಅಬ್ದುಲ್ ಕರೀಂAbdulKareem??عب كريم بن موسى (@ManothKareem) May 9, 2021
ಇದನ್ನೂ ಓದಿ: ಕೋವಿಡ್ ನಿರ್ವಹಣೆಗೆ ಕಾರ್ಯಪಡೆ ನೇಮಿಸಿದ ಸುಪ್ರೀಂ: ಮೋದಿ ಸರ್ಕಾರದ ವೈಫಲ್ಯಕ್ಕೆ ಕನ್ನಡಿ!


