Homeಅಂತರಾಷ್ಟ್ರೀಯಮಂಗಳ ಗ್ರಹದ ಮೊದಲ ಆಡಿಯೊ ಬಿಡುಗಡೆ ಮಾಡಿದ ನಾಸಾ!

ಮಂಗಳ ಗ್ರಹದ ಮೊದಲ ಆಡಿಯೊ ಬಿಡುಗಡೆ ಮಾಡಿದ ನಾಸಾ!

- Advertisement -
- Advertisement -

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೋಮವಾರ ಮಂಗಳ ಗ್ರಹದ ಮೊದಲ ಆಡಿಯೊವನ್ನು ಬಿಡುಗಡೆ ಮಾಡಿದೆ. ಈ ಅತಿ ನಿಧಾನವಾದ ಗಾಳಿಯ ಬೀಸುವಿಕೆಯ ಆಡಿಯೊವನ್ನು ಬಾಹ್ಯಾಕಾಶ ನೌಕೆ ‘ಪರ್ಸೀವರನ್ಸ್’ ದಾಖಲಿಸಿ ಕಳುಹಿಸಿದೆ.

ನಾಸಾ ಇತ್ತೀಚೆಗೆ ಬಾಹ್ಯಕಾಶ ನೌಕೆಯ ಇಳಿಯುವಿಕೆಯ ಮೊದಲ ವೀಡಿಯೊವನ್ನು ಬಿಡುಗಡೆ ಮಾಡಿತ್ತು. ನೌಕೆಯು ಮಂಗಳ ಗ್ರಹದಲ್ಲಿ ಈ ಹಿಂದೆ ಜೀವಿಗಳಿದ್ದವೆ ಎಂದು ಅನ್ವೇಷಿಸುತ್ತದೆ.

ನೌಕೆಯು ಮಂಗಳ ಗ್ರಹದ ಮೇಲೆ ಇಳಿಯುವ ಸಮಯದಲ್ಲಿ ಮೈಕ್ರೋಫೋನ್‌ ಕಾರ್ಯನಿರ್ವಹಿಸಲಿಲ್ಲ ಎಂದು ನಾಸ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿತ್ತು. ಆದರೆ ಪ್ರಸ್ತುತ ಬಿಡುಗಡೆಗೊಳಿಸಿರುವ ಆಡಿಯೊ ಮಂಗಳ ಗ್ರಹಕ್ಕೆ ಇಳಿದ ನಂತರ ಸೆರೆಹಿಡಿದ ಧ್ವನಿಯಾಗಿದೆ.

ಇದನ್ನೂ ಓದಿ:  ನಾಸಾದಲ್ಲಿರುವ ಭಾರತೀಯರ ಸಂಖ್ಯೆ ಶೇ.58 ಅಲ್ಲ! ಅಲ್ಲಿರುವ ಏಶಿಯನ್ನರ ಸಂಖ್ಯೆಯೇ ಶೇ.8 ಮಾತ್ರ!

“10 ಸೆಕೆಂಡ್‌ಗಳಲ್ಲಿ ಕೇಳುತ್ತಿರುವ ಆಡಿಯೊ ಮಂಗಳ ಗ್ರಹದಲ್ಲಿ ಬೀಸುತ್ತಿರುವ ನಿಜವಾದಗಾಳಿಯ ಸದ್ದಾಗಿದೆ” ಎಂದು “ಪರ್ಸೀವರನ್ಸ್’’ ನ ಕ್ಯಾಮರ ಮತ್ತು ಮೈಕ್ರೋಫೋನ್ ವ್ಯವಸ್ಥೆಯ ಪ್ರಧಾನ ಇಂಜಿನಿಯರ್ ಡೇವ್ ಗ್ರುಯೆಲ್ ಹೇಳಿದ್ದಾರೆ.

ಇದನ್ನೂ ಓದಿ: ನಾಸಾ ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್‌ಗೆ ಒಡಿಶಾ ಶಾಲಾ ವಿದ್ಯಾರ್ಥಿಗಳ ತಂಡ!

ನವೆಂಬರ್‌ 18 2020 ರಂದು ಕೂಡಾ 60 ಸೆಕೆಂಡುಗಳ ಆಡಿಯೊವನ್ನು ನಾಸಾ ಬಿಡುಗಡೆ ಮಾಡಿತ್ತು. ಈ ಧ್ವನಿಯನ್ನು ಅಕ್ಟೋಬರ್ 19, 2020 ರಂದು ಮಂಗಳ ಗ್ರಹದ ಪ್ರಯಾಣದಲ್ಲಿದ್ದ ಪರ್ಸೆವೆರೆನ್ಸ್ ನೌಕೆಯ ಕ್ಯಾಮೆರಾ ಮತ್ತು ಮೈಕ್ರೊಫೋನ್ ಸಿಸ್ಟಮ್‌ನ ಹಾರಾಟದ ಚೆಕ್‌ಔಟ್ ಸಮಯದಲ್ಲಿ ದಾಖಲಿಸಲಾಗಿದೆ ಎಂದು ನಾಸ ತಿಳಿಸಿತ್ತು.

ನಾಸಾ ಇತ್ತೀಚೆಗೆ ಬಿಡುಗಡೆ ಮಾಡಿದ್ದ 3 ನಿಮಿಷ 25 ಸೆಕೆಂಡುಗಳ ವಿಡಿಯೊ ಸ್ಪಷ್ಟವಾಗಿದ್ದು ಬಾಹ್ಯಾಕಾಶ ನೌಕೆಯು ಮಂಗಳ ಗ್ರಹಕ್ಕೆ ಇಳಿಯುತ್ತಿರುವ ಮೈನವಿರೇಳಿಸುವ ದೃಶ್ಯ ತೋರಿಸುತ್ತದೆ.

ಸಾವಿರಾರು ಚಿತ್ರಗಳನ್ನು ಕಳುಹಿಸಿರುವ ನಾಸಾದ ಅತಿದೊಡ್ಡ ಮತ್ತು ಅತ್ಯಂತ ಸಮರ್ಥ ಉತ್ತಮ ಸ್ಥಿತಿಯ ಬಾಹ್ಯಾಕಾಶ ನೌಕೆ ಇದಾಗಿದೆ. ಇದು ಮುಂದಿನ ಎರಡು ವರ್ಷಗಳನ್ನು ಮಂಗಳ ಗ್ರಹದ ಒಣ ನದಿಯ ಮುಖಜ ಭೂಮಿಯಲ್ಲಿ ಕಳೆಯಲಿದ್ದು, ಅಲ್ಲಿನ  ಬಂಡೆಗಳನ್ನು ಕೊರೆದು 3-4 ಶತಕೋಟಿ ವರ್ಷಗಳ ಹಿಂದೆ ಅಲ್ಲಿ ಜೀವಿಗಳಿದ್ದವೆ ಎಂಬ ಪುರಾವೆಗಳನ್ನು ಅನ್ವೇಷಿಸಲಿದೆ.

ಇದನ್ನೂ ಓದಿ: ಮಂಗಳ ಗ್ರಹಕ್ಕೆ ಇಳಿದ ಬಾಹ್ಯಾಕಾಶ ನೌಕೆಯ ಮೈನವಿರೇಳಿಸುವ ವಿಡಿಯೋ ಬಿಡುಗಡೆ ಮಾಡಿದ ನಾಸಾ!

2024ರಲ್ಲಿ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಡಲಿರುವ ಮಹಿಳೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...