Homeಮುಖಪುಟಮೋದಿಯವರು ಫಾಲೋ ಮಾಡುವ ಟ್ವಿಟ್ಟರ್‌ ಖಾತೆಗಳಿಂದ 'ನಾಥೂರಾಮ್ ಗೋಡ್ಸೆ ಜಿಂದಾಬಾದ್' ಟ್ರೆಂಡಿಂಗ್

ಮೋದಿಯವರು ಫಾಲೋ ಮಾಡುವ ಟ್ವಿಟ್ಟರ್‌ ಖಾತೆಗಳಿಂದ ‘ನಾಥೂರಾಮ್ ಗೋಡ್ಸೆ ಜಿಂದಾಬಾದ್’ ಟ್ರೆಂಡಿಂಗ್

ಇದಕ್ಕೆ ಪ್ರತಿಯಾಗಿ ಕೆಲವರು 'ನಾಥೂರಾಮ್ ಗೋಡ್ಸೆ ಭಾರತದ ಪ್ರಥಮ ಭಯೋತ್ಪಾದಕನಾಗಿದ್ದು, ಆತನ ಅನುಯಾಯಿಗಳು ಸಹ ಭಯೋತ್ಪಾದಕರೆ' ಎಂದು ಟ್ವೀಟ್ ಮಾಡಿದ್ದಾರೆ.

- Advertisement -
- Advertisement -

ಇಂದು ಗಾಂಧಿ ಜಯಂತಿ. ಸತ್ಯ, ಶಾಂತಿ ಮತ್ತು ಅಹಿಂಸೆಯ ಪ್ರತಿಪಾದಕ, ದೇಶದ ಸ್ವಾತಂತ್ರ್ಯ ಚಳವಳಿಯ ನೇತಾರ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಇಡೀ ದೇಶ ಮಾತ್ರವಲ್ಲದೇ ಪ್ರಪಂಚವೇ ಸ್ಮರಿಸುತ್ತಿದೆ. ಆದರೆ ಗಾಂಧಿ ಹಂತಕ ಗೋಡ್ಸೆ ಸಂತತಿ ಇನ್ನು ದೇಶದಲ್ಲಿ ವಿಷಕಾರುತ್ತಿದ್ದು ಗಾಂಧಿ ಜನ್ಮದಿನವೇ ಟ್ವಿಟ್ಟರ್‌ನಲ್ಲಿ ‘ನಾಥೂರಾಮ್ ಗೋಡ್ಸೆ ಜಿಂದಾಬಾದ್’ ಟ್ರೆಂಡಿಂಗ್ ಮಾಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫಾಲೋ ಮಾಡುವ ಡ್ರಾಗನ್‌ಫ್ಲೈ ಮತ್ತು ಶ್ವೇತ ಶ್ರೀವತ್ಸವ ಸೇರಿದಂತೆ ಹಲವರು ಬಹಿರಂಗವಾಗಿ ಗಾಂಧಿಯವರನ್ನು ತೆಗಳಿ, ಗೋಡ್ಸೆಗೆ ಜಿಂದಾಬಾದ್, ಗೋಡ್ಸೆ ಅಮರರಾಗಲಿ ಎಂದು ಹೇಳಿದ್ದಾರೆ! ಗಾಂಧಿಯವರ ದೇಶವಿಭಜಕ, ಅವರು ಸ್ವಾತಂತ್ರ್ಯ ತಂದುಕೊಟ್ಟಿಲ್ಲ ಎಂದೆಲ್ಲಾ ಟ್ವೀಟ್ ಮಾಡಲಾಗಿದೆ.

ಹಿಂದಿಯಲ್ಲಿ #नाथूराम_गोडसे_जिंदाबाद ಎಂಬ ಹ್ಯಾಸ್‌ಟ್ಯಾಗ್ ಟ್ರೆಂಡ್ ಆಗಿದ್ದು, ಬಹುತೇಕರು ಗಾಂಧಿಯನ್ನು ನಿಂದಿಸಿ, ಜೈ ಗೋಡ್ಸೆ ಎಂದು ಟ್ವೀಟ್ ಮಾಡಿ ತಮ್ಮ ವಿಕೃತಿ ಮೆರೆದಿದ್ದಾರೆ. ಸಂಘೀ ಎಸ್ಕೋಬಾರ್ ಎಂಬ ಖಾತೆಯಿಂದ ‘ಮರೆತುಹೋದ ದೇಶದ ಹೀರೋ’ ಎಂದು ಟ್ವೀಟ್ ಮಾಡಲಾಗಿದೆ.

ಈ ವರದಿ ಬರೆಯುವ ವೇಳೆಗೆ ಸುಮಾರು ಒಂದು ಲಕ್ಷ ಹದಿನಾರು ಸಾವಿರ ಬಾರಿ ನಾಥೂರಾಮ್ ಗೋಡ್ಸೆ ಜಿಂದಾಬಾದ್ ಹ್ಯಾಷ್‌ಟ್ಯಾಗ್ ಬಳಕೆಯ ಟ್ವೀಟ್‌ಗಳು ದಾಖಲಾಗಿವೆ. ಕೆಲವರು 1 ಲಕ್ಷ ಮುಟ್ಟಿದ್ದೇವೆ, ಇನ್ನೂ ಟ್ವೀಟ್ ಮಾಡಿ ಎಂದು ಕರೆ ನೀಡಿದ್ದಾರೆ. ಇದರ ಹಿಂದೆ ಐಟಿ ಸೆಲ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.

ಗೋಡ್ಸೆ ಆರಾಧಕರಿಗೆ ಅದೇ ಪ್ರಮಾಣದಲ್ಲಿ ಬಹಳಷ್ಟು ಜನ ತಿರುಗೇಟು ನೀಡಿದ್ದು, “ನಾಥೂರಾಮ್ ಗೋಡ್ಸೆ ಭಾರತದ ಪ್ರಥಮ ಭಯೋತ್ಪಾದಕನಾಗಿದ್ದು, ಆತನ ಅನುಯಾಯಿಗಳು ಸಹ ಭಯೋತ್ಪಾದಕರೆ” ಎಂದು ಕಿಡಿಕಾರಿದ್ದಾರೆ.

ಭಾರತದ ಸಂವಿಧಾನದ ಪ್ರಕಾರ “ಕೊಲೆಗಾರ ಕೊಲೆಗಾರನೇ ಹೊರತು ಅವರೆಂದೂ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ ಆಗಲು ಸಾಧ್ಯವಿಲ್ಲ. ಅವರು ಕೊಂದಿದ್ದ ಸಾಮಾನ್ಯ ಮನುಷ್ಯನನ್ನಲ್ಲ ಬದಲಿಗೆ ರಾಷ್ಟ್ರಪಿತನನ್ನು” ಎಂದು ರುದ್ರ ಪ್ರತಾಪ್ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ‘ಅತ್ಯುನ್ನತ ಭಾರತ ರತ್ನವನ್ನು ಸಾವರ್ಕರ್‌ಗೆ ಅಷ್ಟೇ ಯಾಕೆ, ಗೋಡ್ಸೆಗೂ ಕೊಟ್ಟಬಿಡಿ’..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...