Homeಮುಖಪುಟ’ಜಾತ್ಯಾತೀತರು’ ಎಂದ ದಲಿತ ಕುಟುಂಬಕ್ಕೆ ಜಾತಿ ಪ್ರಮಾಣಪತ್ರ ನಿರಾಕರಣೆ!

’ಜಾತ್ಯಾತೀತರು’ ಎಂದ ದಲಿತ ಕುಟುಂಬಕ್ಕೆ ಜಾತಿ ಪ್ರಮಾಣಪತ್ರ ನಿರಾಕರಣೆ!

“ನಾವು ಪುಲಯ ಸಮುದಾಯದಲ್ಲಿ ಜನಿಸಿದ್ದೇವೆ ಆದರೆ ನಾವು ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ. ನಮ್ಮನ್ನು ನಾವು ಜಾತ್ಯತೀತರೆಂದೆ ಪರಿಗಣಿಸುತ್ತೇವೆ. ನಾವು ಯಾವುದೇ ಧರ್ಮವನ್ನು ಅನುಸರಿಸದಿದ್ದರೆ ನಮ್ಮ ದಲಿತ ಸ್ಥಾನಮಾನವು ಹೇಗೆ ಮಾಯವಾಗುತ್ತದೆ..? ಎಂದು ಕುಟುಂಬ ಪ್ರಶ್ನಿಸುತ್ತದೆ.

- Advertisement -
- Advertisement -

ಜಾತಿ ಪ್ರಮಾಣಪತ್ರ ಅರ್ಜಿಯಲ್ಲಿ ಧರ್ಮದ ಸ್ಥಳದಲ್ಲಿ ಜಾತ್ಯಾತೀತ ಎಂದು ಬರೆದ ಕೇರಳದ ದಲಿತ ಕುಟುಂಬಕ್ಕೆ ಜಾತಿ ಪ್ರಮಾಣ ಪತ್ರ ನಿರಾಕರಿಸಲಾಗಿದೆ. ಯಾವುದೇ ಧರ್ಮವನ್ನು ನಂಬದ ಅಥವಾ ಅನುಸರಿಸದ ಕಾರಣ ಇವರಿಗೆ ಜಾತಿ ಪ್ರಮಾಣಪತ್ರ ನಿರಾಕರಿಸಿದ ತಾಲೂಕು ಅಧಿಕಾರಿಯ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇರಳದ ಪಥನಂತಿಟ್ಟ ಜಿಲ್ಲೆಯ ರಾನ್ನಿಯಲ್ಲಿರುವ ತಾಲ್ಲೂಕು ಕಚೇರಿಯ ಹೊರಗೆ ಅಜ್ಜ-ಅಜ್ಜಿಯರು ಮತ್ತು ಮಕ್ಕಳು ಸೇರಿದಂತೆ ದಲಿತ ಕುಟುಂಬವೊಂದು ಸೆ.28ರಿಂದ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸುತ್ತಿದೆ. ’ನಾನು ವಿದ್ಯಾಭ್ಯಾಸ ಮಾಡಲು ಬಯಸುತ್ತೇನೆ. ಧರ್ಮದ ಹೆಸರಿನಲ್ಲಿ ತಹಶೀಲ್ದಾರ್ ನಮಗೆ ಜಾತಿ ಪ್ರಮಾಣಪತ್ರವನ್ನು ನಿರಾಕರಿಸಿದ್ದಾರೆ. ನಮಗೆ ನ್ಯಾಯ ನೀಡಿ” ಎಂಬ ಫಲಕಗಳನ್ನು ಹಿಡಿದು ಧರಣಿ ನಡೆಸುತ್ತಿದ್ದಾರೆ.

ವಡಸ್ಸೆರಿಕಾ ಗ್ರಾಮದ ಪಿ.ಕೇಶವದೇವು ಪುಲಯ ಸಮುದಾಯಕ್ಕೆ ಸೇರಿದವರಾಗಿದ್ದು, ಕೇರಳದಲ್ಲಿ ಪರಿಶಿಷ್ಟ ಜಾತಿ ಎಂದು ವರ್ಗೀಕರಿಸಲಾಗಿದೆ. ಅವರ ಕುಟುಂಬದ ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಯಾವುದೇ ಧರ್ಮವನ್ನು ಆಚರಿಸುವುದಿಲ್ಲ ಮತ್ತು ತಮ್ಮನ್ನು ಜಾತ್ಯತೀತರು ಎಂದು ಕರೆದುಕೊಳ್ಳುತ್ತಾರೆ.

ಇದನ್ನೂ ಓದಿ: ದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ

ಇತ್ತೀಚೆಗೆ, ಕೇಶವದೇವು ತಮ್ಮ ಮೊಮ್ಮಗಳಿಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ಅರ್ಜಿದಾರರು ಧರ್ಮವನ್ನು ‘ಜಾತ್ಯತೀತ’ ಎಂದು ಉಲ್ಲೇಖಿಸಿರುವುದರಿಂದ ಪ್ರಮಾಣಪತ್ರವನ್ನು ನೀಡಲು ಸಾಧ್ಯವಿಲ್ಲ ಎಂದು ರಾನ್ನಿಯ ತಹಶೀಲ್ದಾರ್ ಅರ್ಜಿ ತಿರಸ್ಕರಿಸಿದರು.

ನಾವು ಯಾವುದೇ ಧರ್ಮವನ್ನು ಅನುಸರಿಸದ ಕಾರಣ ನಮಗೆ ಜಾತಿ ಪ್ರಮಾಣಪತ್ರವನ್ನು ಹೇಗೆ ನಿರಾಕರಿಸುತ್ತಾರೆ ಎಂದು ಪ್ರಶ್ನಿಸಿ ಕೇಶವದೇವು ಕುಟುಂಬ ಪ್ರತಿಭಟನೆ ನಡೆಸುತ್ತಿದೆ. ಜಾತಿ ಪ್ರಮಾಣಪತ್ರ ಸಲ್ಲಿಸದಿದ್ದರೇ  ಮೊಮ್ಮಕ್ಕಳ ಪದವಿ ಕೋರ್ಸ್ ಪ್ರವೇಶ ರದ್ದುಗೊಳಿಸುತ್ತಾರೆ ಎಂಬ ಆತಂಕವನ್ನು ಕುಟುಂಬ ಸದಸ್ಯರು ಹೊರಹಾಕಿದ್ದಾರೆ. ಅಧಿಕಾರಿಗಳು ಬೇಗನೆ ಮಧ್ಯಪ್ರವೇಶಿಸುತ್ತಾರೆ ಎಂಬ ಭರವಸೆಯಿಂದ ಇಡೀ ಕುಟುಂಬ ಪ್ರತಿಭಟನೆಯನ್ನು ಕೈಗೊಂಡಿದೆ.

“ನಾವು ಪುಲಯ ಸಮುದಾಯದಲ್ಲಿ ಜನಿಸಿದ್ದೇವೆ ಆದರೆ ನಾವು ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ. ನಮ್ಮನ್ನು ನಾವು ಜಾತ್ಯತೀತರೆಂದೆ ಪರಿಗಣಿಸುತ್ತೇವೆ. ಆದರೆ ನಾವು ಯಾವುದೇ ಧರ್ಮವನ್ನು ಅನುಸರಿಸದಿದ್ದರೆ ನಮ್ಮ ದಲಿತ ಸ್ಥಾನಮಾನವು ಹೇಗೆ ಮಾಯವಾಗುತ್ತದೆ..? ಸಮಾಜದಲ್ಲಿ ದಲಿತರು ಎದುರಿಸುತ್ತಿರುವ ತಾರತಮ್ಯವೂ ಹೋಗುವುದಿಲ್ಲ. ಹಾಗಾಗಿ ನಮ್ಮ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಏಕೆ ನಿರಾಕರಿಸಲಾಗಿದೆ..? ” ಎಂದು ಕೇಶವದೇವು ಪ್ರಶ್ನಿಸುತ್ತಾರೆ.

ಇದನ್ನೂ ಓದಿ: ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ

ತನ್ನ ಮೊಮ್ಮಕ್ಕಳಿಗೆ ನೀಡಲಾದ 10 ನೇ ತರಗತಿ ಪ್ರಮಾಣಪತ್ರದಲ್ಲಿ ಅವರ ಧರ್ಮ ಮತ್ತು ಜಾತಿಯನ್ನು “ಜಾತ್ಯತೀತ ಮತ್ತು ಪುಲಯ” ಎಂದು ಉಲ್ಲೇಖಿಸಲಾಗಿದೆ. “ಇದು ರಾಜ್ಯ ಸರ್ಕಾರ ನೀಡಿದ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ. ಈಗ ಯಾಕೆ ನಮಗೆ ಜಾತಿ ಪ್ರಮಾಣಪತ್ರ ನಿರಾಕರಿಸಲಾಗುತ್ತಿದೆ? ” ಕೇಶವದೇವು ಕೇಳುತ್ತಾರೆ.

2015ರಲ್ಲಿ ಇದೇ ರೀತಿಯ ಸಮಸ್ಯೆಯಾದಾಗ ಈ ಕುಟುಂಬವು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿ ಅನುಕೂಲಕರ ಆದೇಶವನ್ನು ಪಡೆದುಕೊಂಡಿತು, ಅದು ಅವರಿಗೆ ಜಾತಿ ಪ್ರಮಾಣಪತ್ರವನ್ನು ನೀಡಬೇಕು ಎಂದು ಹೇಳಿ, ಧರ್ಮಕ್ಕೆ ಸೂಚಿಸಲಾದ ಅಂಕಣದಲ್ಲಿ ‘Nil’ ಎಂದು ಬರೆಯಲು ಸೂಚಿಸಿತ್ತು. “ನಾವು ಈ ಆದೇಶವನ್ನು ತಹಶೀಲ್ದಾರ್‌ಗೆ ತೋರಿಸಿದರೂ, ಅವರು ನಮಗೆ ಪ್ರಮಾಣಪತ್ರಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ” ಎಂದು ಕುಟುಂಬ ಆರೋಪಿಸಿದೆ.

ರಾನ್ನಿ ತಹಶೀಲ್ದಾರ್ ನವೀನ್ ಬಾಬು ’ಅರ್ಜಿಯನ್ನು ಮಾಜಿ ತಹಶೀಲ್ದಾರ್ ಅವರು ತಿರಸ್ಕರಿಸಿದ್ದಾರೆ. ಆದರೆ ಇದನ್ನು ಕಾನೂನಿನ ಪ್ರಕಾರ ತಿರಸ್ಕರಿಸಲಾಗಿದೆ. ಸಂವಿಧಾನದ ಪ್ರಕಾರ, ಅವರು ಹಿಂದೂ ಧರ್ಮ, ಬೌದ್ಧಧರ್ಮ ಅಥವಾ ಸಿಖ್ ಧರ್ಮವನ್ನು ಅನುಸರಿಸಿದರೆ ಮಾತ್ರ ದಲಿತ ಅಥವಾ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಬಹುದು” ಎಂದು ಹೇಳಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ

ಇಂತಹ ಪ್ರಕರಣಗಳಿಗೆ ಯಾಕೆ ಪದೇ ಪದೇ ಸಮಸ್ಯೆಗಳು ಉಂಟಾಗುತ್ತವೆ ಎಂಬುದಕ್ಕೆ ಕಾನೂನಿನ ಅಸ್ಪಷ್ಟತೆಯೇ ಕಾರಣವಾಗಿದೆ.

2010 ರಲ್ಲಿ, ಕೇರಳ ಸರ್ಕಾರವು ಜಾರಿಗೆ ತಂದಿರುವ ಆದೇಶ (396/10 / ಪಿಎ)ದ ಪ್ರಕಾರ ’ಸಾರ್ವಜನಿಕ ಸೇವಾ ಆಯೋಗದ ಅರ್ಜಿಗಳು, ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ, ಅನುದಾನಿತ ಅಥವಾ ಸರ್ಕಾರಿ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸುವಾಗ ಒಬ್ಬ ವ್ಯಕ್ತಿಯು ಧರ್ಮ ಮತ್ತು ಜಾತಿಯನ್ನು ಬರೆಯಲು ಆಯ್ಕೆಮಾಡಬಹುದು ಅಥವಾ ಆಯ್ಕೆ ಮಾಡದಿರಬಹುದು’. “ಒಬ್ಬ ವ್ಯಕ್ತಿ ಧರ್ಮ ಮತ್ತು ಜಾತಿಯನ್ನು ಉಲ್ಲೇಖಿಸದಿದ್ದರೆ, ಅವರು ಧರ್ಮ ಮತ್ತು ಜಾತಿಯ ಭತ್ಯೆಗಳಿಗೆ ಅರ್ಹರಲ್ಲ” ಎಂದು ಅದು ಹೇಳುತ್ತದೆ.

ಆದರೆ ಧರ್ಮವನ್ನು ಬಿಟ್ಟು ಬರಿ ಜಾತಿಯನ್ನು ಮಾತ್ರ ಉಲ್ಲೇಖಿಸಲು ನಿರ್ಧರಿಸಿದರೆ ಏನು ಮಾಡಬೇಕೆಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ವಿಶೇಷವೆಂದರೆ, ಈ ಆದೇಶ ಹೊರಡಿಸಿದ ನಂತರವೂ ಕೇಶವದೇವು ಕುಟುಂಬವು ಕಳೆದ ವರ್ಷಗಳಲ್ಲಿ ಅನೇಕ ಸಂದರ್ಭಗಳಲ್ಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿದೆ.

“ನಾನು ಪಥನಂತಿಟ್ಟ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ ಮತ್ತು ಅಧಿಕಾರಿಗಳು ಆದೇಶವನ್ನು ಅಧ್ಯಯನ ಮಾಡಿ, ನಮಗೆ ಜಾತಿ ಪ್ರಮಾಣಪತ್ರವನ್ನು ನೀಡಬಹುದೇ ಇಲ್ಲವೇ ಎಂಬುದನ್ನು ತಿಳಿಸುತ್ತೇವೆ ಎಂದು ನಮಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಹಕ್ಕುಗಳನ್ನು ಪಡೆಯುವವರೆಗೆ ನಾವು ಪ್ರತಿಭಟನೆಯನ್ನು ಮುಂದುವರಿಸಲಿದ್ದೇವೆ ”ಎಂದು ದಲಿತ ಕುಟುಂಬ ತಿಳಿಸಿದೆ.


ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆ: ರಾಜ್ಯದಲ್ಲಿ ಸಿಡಿದೆದ್ದ ಆಕ್ರೋಶ -ತೀವ್ರಗೊಂಡ ಸರಣಿ ಪ್ರತಿಭಟನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...