Homeಚಳವಳಿಜೈಲಿನಲ್ಲಿರುವ ಸ್ಟ್ಯಾನ್‌ ಸ್ವಾಮಿಗೆ ಅಗತ್ಯ ಸೌಲಭ್ಯ ಖಚಿತ ಪಡಿಸಲು NHRC ಮಧ್ಯಪ್ರವೇಶಕ್ಕೆ ಒತ್ತಾಯ

ಜೈಲಿನಲ್ಲಿರುವ ಸ್ಟ್ಯಾನ್‌ ಸ್ವಾಮಿಗೆ ಅಗತ್ಯ ಸೌಲಭ್ಯ ಖಚಿತ ಪಡಿಸಲು NHRC ಮಧ್ಯಪ್ರವೇಶಕ್ಕೆ ಒತ್ತಾಯ

- Advertisement -
- Advertisement -

ಮುಂಬೈಯ ತಲೋಜ ಜೈಲಿನಲ್ಲಿರುವ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಫಾದರ್ ಸ್ಟ್ಯಾನ್ ಸ್ವಾಮಿಗೆ ಸಮಂಜಸವಾದ ವಸತಿ ಮತ್ತು ಸ್ಟ್ರಾ ಹಾಗೂ ಸಿಪ್ಪರ್‌ಗಳಂತಹ ನೆರವು ನೀಡಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಹಸ್ತಕ್ಷೇಪ ಮಾಡಬೇಕು ಎಂದು ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ(NPRD)ಯು ಕೋರಿದೆ.

2018 ರ ಜನವರಿ 1 ರಂದು ಮಹಾರಾಷ್ಟ್ರದ ಪುಣೆ ಬಳಿಯ ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ 83 ವರ್ಷದ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನ್ ಸ್ವಾಮಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಭೀಮಾ ಕೋರೆಗಾಂವ್: 83 ವರ್ಷದ ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧಿಸಿದ NIA

ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಸ್ಟ್ಯಾನ್ ಸ್ವಾಮಿ ಇತ್ತೀಚೆಗೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸ್ಟ್ರಾ ಮತ್ತು ಸಿಪ್ಪರ್‌ಗಳನ್ನು ಬಳಸಲು ಅನುಮತಿ ನೀಡಬೇಕೆಂದು ಕೋರಿದ್ದರು ಆದರೆ ಎನ್‌ಐಎ ನ್ಯಾಯಾಲಯವು ಅರ್ಜಿಯ ವಿಚಾರಣೆಗೆ 20 ದಿನಗಳ ಸಮಯಾವಕಾಶವನ್ನು ಕೇಳಿತ್ತು.

ಎನ್‌ಪಿಆರ್‌ಡಿ ಪ್ರಧಾನ ಕಾರ್ಯದರ್ಶಿ ಮುರಳೀಧರನ್ ಅವರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಚ್‌ಎಲ್ ದತ್ತು ಅವರಿಗೆ ಸಲ್ಲಿಸಿದ ಮನವಿಯಲ್ಲಿ, “ಸ್ಟ್ಯಾನ್ ಸ್ವಾಮಿಯವರ ವಯಸ್ಸು ಮತ್ತು ಅಂಗ ವೈಕಲ್ಯವನ್ನು ಪರಿಗಣಿಸಿ ಅವರಿಗೆ ಜೈಲಿನಲ್ಲಿ ಸೂಕ್ತವಾದ ವಸತಿಯನ್ನು ಕಲ್ಪಿಸುವಂತೆ ಮಾನವ ಹಕ್ಕು ಆಯೋಗ ಮಧ್ಯಪ್ರವೇಶ ಮಾಡಬೇಕು” ಎಂದಿದ್ದಾರೆ.

“ಎರಡೂ ಕೈಗಳ ನಡುಗುವ ಸ್ಥಿತಿಯನ್ನು ಗಮನಿಸಿದರೆ ಅವರು ನೀರು ಮತ್ತು ಪಾನೀಯಗಳನ್ನು ಸೇವಿಸಲು ಸಿಪ್ಪರ್ ಮತ್ತು ಸ್ಟ್ರಾ ಬಳಸುತ್ತಿದ್ದಾರೆ. ಎನ್‌ಐಎ ಬಂಧಿಸಿದಾಗ ಇವೆರಡೂ ಅವರ ಬಳಿಯಲ್ಲಿದ್ದವಾದರೂ, ಅವುಗಳನ್ನು ಅವರಿಗೆ ಮರಳಿಸಲು ಎನ್‌ಐಎ ನಿರಾಕರಿಸಿತ್ತು. ಈ ಅಗ್ಗದ ಆದರೆ ಅತ್ಯಗತ್ಯ ಸಾಮಗ್ರಿಗಳನ್ನು ಅವರಿಗೆ ಒದಗಿಸಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಕೈಗಳು ನಡುಗುವುದರಿಂದ ಸೇವಿಸಲು ಅವರಿಗೆ ತೊಂದರೆಯಾಗುತ್ತಿದೆ” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

“ಅವರಿಗೆ ಸ್ನಾನ ಮಾಡಲು, ಬಟ್ಟೆಗಳನ್ನು ತೊಳೆಯಲು ಮತ್ತು ನೀರು ತರಲು ಸಾಧ್ಯವಾಗುವುದಿಲ್ಲ. ಅವರಿಗೆ ಗಂಭೀರ ಶ್ರವಣ ಸಮಸ್ಯೆಯಿದೆ. ಅಷ್ಟೇ ಅಲ್ಲದೆ ಅವರು ಇತ್ತೀಚಿಗೆ ಎರಡು ಬಾರಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಆದ್ದರಿಂದ ಅವರಿಗೆ ಜೈಲಿನ ಬದುಕು ಕಷ್ಟಕರವಾಗಬಹುದು” ಎಂದು ಮುರಳೀಧರನ್ ಪತ್ರದಲ್ಲಿ ತಿಳಿಸಿದ್ದಾರೆ.

ತಲೋಜಾ ಜೈಲನ್ನು ಪರೀಕ್ಷಿಸಲು ತಂಡವೊಂದನ್ನು ಕಳುಹಿಸಿ ಅವರಿಗೆ ನೀಡುತ್ತಿರುವ ಸೇವೆಗಳನ್ನು ಗಮನಿಸಬೇಕು ಎಂದು ಒತ್ತಾಯಿಸಿದ ಪತ್ರವು, ಜೈಲಿನಲ್ಲಿ ಸ್ವಾಮಿಯವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ ಸಾಕಷ್ಟು ಸೌಲಭ್ಯಗಳಿರುವ ಆಸ್ಪತ್ರೆಗೆ ಅವರನ್ನು ತಕ್ಷಣವೇ ಸ್ಥಳಾಂತರಿಸುವಂತೆ ಆಯೋಗವು ನಿರ್ದೇಶನಗಳನ್ನು ನೀಡುವಂತೆ ಒತ್ತಾಯಿಸಿದೆ.

ಇದನ್ನೂ ಓದಿ: ಪಾರ್ಕಿನ್ಸನ್ ಕಾಯಿಲೆ: ನೀರು ಕುಡಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬಂಧಿತ ಹೋರಾಟಗಾರ ಸ್ಟಾನ್ ಸ್ವಾಮಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...