Homeಮುಖಪುಟಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ; ಇತರೆ ಅಭ್ಯರ್ಥಿಗಳಿಗೆ ಸವಾಲು ಹಾಕಿದ ಮಂಗಳಮುಖಿಯರು!

ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ; ಇತರೆ ಅಭ್ಯರ್ಥಿಗಳಿಗೆ ಸವಾಲು ಹಾಕಿದ ಮಂಗಳಮುಖಿಯರು!

ಬಿಡುಗಡೆ ಮಾಡಲು ನನ್ನ ಬಳಿ ಯಾವುದೇ ಪ್ರಣಾಳಿಕೆಯಿಲ್ಲ. ಕೇವಲ ಭರವಸೆ ನೀಡುವುದರಿಂದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಪರಿಹರಿಸಬೇಕು ಎಂದು ಹೇಳಿದರು.

- Advertisement -
- Advertisement -

ಸಮಾಜದ ನಡುವೆ ಅವಮಾನ ಮತ್ತು ಅಪಹಾಸ್ಯಕ್ಕೊಳಗಾಗಿ ಬದುಕುತ್ತಿರುವ ಟ್ರಾನ್ಸ್‌ಜೆಂಡರ್ (ಮಂಗಳಮುಖಿಯರು) ಸಮುದಾಯ ಇದೀಗ ಸ್ವಲ್ಪಮಟ್ಟಿಗೆ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳಲು ಆರಂಭಿಸಿದೆ. ತಮ್ಮ ದ್ವಂದ್ವತೆಯ ಅಸ್ಮಿತೆಯನ್ನು ಮೀರಿ ಸಮಕಾಲೀನ ಸಮಾಜದಲ್ಲಿ ಭದ್ರ ನೆಲೆಯೊಂದನ್ನು ಕಂಡುಕೊಳ್ಳಲು ಹವಣಿಸುತ್ತಾ ಎಲ್ಲಿಯಾದರೂ ಅವಕಾಶ ಸಿಕ್ಕರೆ ಅದನ್ನು ಸಂಪೂರ್ಣ ಉಪಯೋಗಿಸಿಕೊಳ್ಳುವತ್ತ ಸಾಗಿದೆ. ಈ ನಿಟ್ಟಿನಲ್ಲಿ ಕೇರಳದ ಎರ್ನಾಕುಳಂ ಮತ್ತು ಕಣ್ಣೂರಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇಬ್ಬರು ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಸೇರಿದವರು ಭಾಗವಹಿಸುತ್ತಿದ್ದು, ಇತರ ಸ್ಪರ್ಧಿಗಳಿಗೆ ಸವಾಲು ಹಾಕಿದ್ದಾರೆ.

ಶೆರಿನ್ ಆಂಟನಿ ಮತ್ತು ಸ್ನೇಹ.ಕೆ ಎನ್ನುವವರು ಇಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದು, ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಟ್ರಾನ್ಸ್‌ಜೆಂಡರ್ ಸಮುದಾಯದ ಹೋರಾಟಗಾರ್ತಿ ಅಖೈ ಪದ್ಮಶಾಲಿ ಇಂದು ಕಾಂಗ್ರೆಸ್‌ಗೆ ಸೇರ್ಪಡೆ

ಕೊಚ್ಚಿ ಕಾರ್ಪೊರೇಶನ್‌ನ 26 ನೇ ವಿಭಾಗದಿಂದ ಸ್ಪರ್ಧಿಸಲಿರುವ ಶೆರಿನ್, “ನಮ್ಮ ಸಮುದಾಯದ ಇತರ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಒಬ್ಬ ಟ್ರಾನ್ಸ್‌ಜೆಂಡರ್ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಆದ್ದರಿಂದ, ನಾನು ಸ್ಪರ್ಧಿಸಲು ನಿರ್ಧರಿಸಿದೆ. ಇಲ್ಲಿನ ಜನರು ಜನ ಪ್ರತಿನಿಧಿಗಳ ಕೊರತೆಯಿಂದ ಬೇಸರಗೊಂಡಿದ್ದಾರೆ. ಅವರಿಗೆ ಬದಲಾವಣೆಯ ಅಗತ್ಯವಿದೆ. ಈ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯು ಅದನ್ನು ತರಬಹುದು” ಎಂದು ಸಿಪಿಎಂ ಬೆಂಬಲಿತ ಡೆಮಾಕ್ರಟಿಕ್ ಟ್ರಾನ್ಸ್‌ಜೆಂಡರ್ಸ್ ಫೆಡರೇಶನ್ ಆಫ್ ಕೇರಳದ ರಾಜ್ಯ ಅಧ್ಯಕ್ಷೆ ಶೆರಿನ್ ಹೇಳಿದರು.

“ನಾವು ನೀರಿನ ಸಮಸ್ಯೆಯಿಂದ ಹಿಡಿದು ನಾಗರಿಕ ಮತ್ತು ಅಭಿವೃದ್ಧಿ-ಸಂಬಂಧಿತ ಸಮಸ್ಯೆಗಳವರೆಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಾನು ಅವುಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಮತದಾರರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಶೆರಿನ್ ಹೇಳಿದರು.

ಇದನ್ನೂ ಓದಿ: ಟ್ರಾನ್ಸ್‌ಜೆಂಡರ್ ಸಮುದಾಯದ ಅರಿವಿನ ಲೋಕ ವಿಸ್ತರಿಸುತ್ತಿರುವ ಉಮಾ

ಕಣ್ಣೂರು ವಿಭಾಗದ ಕಿಳುನ್ನಾದಿಂದ (ವಿಭಾಗ 36) ಸ್ಪರ್ಧಿಸುತ್ತಿರುವ ತೊಟ್ಟಡಾದ ಸಮಾಜವಾದಿ ಕಾಲೋನಿಯ ನಿವಾಸಿ ಸ್ನೇಹಾ.ಕೆ, ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಪುರುಷರು ಮತ್ತು ಮಹಿಳೆಯರು ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಯತ್ನಿಸಿ ವಿಫಲರಾಗಿದ್ದಾರೆ. ಈಗ ನಮ್ಮ ಸಮುದಾಯವು ಹೆಜ್ಜೆ ಹಾಕುವ ಸಮಯ ಇದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಬಿಡುಗಡೆ ಮಾಡಲು ನನ್ನ ಬಳಿ ಯಾವುದೇ ಪ್ರಣಾಳಿಕೆಯಿಲ್ಲ ಅಥವಾ ಭರವಸೆಗಳಿಲ್ಲ. ಕೇವಲ ಭರವಸೆ ನೀಡುವುದರಿಂದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಬದಲಿಗೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಪರಿಹರಿಸುವುದು ಅಗತ್ಯವಾಗಿದೆ. ನಮ್ಮ ಕ್ಷೇತ್ರದಲ್ಲಿರುವ ಜನರೆಲ್ಲರೂ ಉತ್ತಮವಾದ ಬೆಂಬಲವನ್ನು ಸೂಚಿಸಿದ್ದಾರೆ” ಎಂದು ಹೇಳಿದರು.


ಇದನ್ನೂ ಓದಿ: ಕೇರಳ: ಸಾಕ್ಷರತಾ ಮಿಷನ್ ಅಡಿಯಲ್ಲಿ 18 ಮಂಗಳಮುಖಿಯರು ಉನ್ನತ ವ್ಯಾಸಾಂಗಕ್ಕೆ ಆಯ್ಕೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...