Homeಕರ್ನಾಟಕನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌; ನ್ಯಾಯಾಂಗ ತನಿಖೆಗೆ 'ಶಾಂತಿಗಾಗಿ ನಾಗರಿಕರ ವೇದಿಕೆ' ಆಗ್ರಹ

ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌; ನ್ಯಾಯಾಂಗ ತನಿಖೆಗೆ ‘ಶಾಂತಿಗಾಗಿ ನಾಗರಿಕರ ವೇದಿಕೆ’ ಆಗ್ರಹ

- Advertisement -
- Advertisement -

ನಕ್ಸಲ್‌ ಚಳುವಳಿಗಾರರು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೊಟ್ಟಿರುವ ಕರೆಯನ್ನು “ಶಾಂತಿಗಾಗಿ ನಾಗರಿಕರ ವೇದಿಕೆ” ಸ್ವಾಗತಿಸಿದ್ದು, “ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು” ಎಂದು ವೇದಿಕೆ ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದೆ.

ಮುಖ್ಯವಾಗಿ, ಈಗಾಗಲೇ ಜಾರಿಯಲ್ಲಿರುವ ನಕ್ಸಲ್ ಶರಣಾಗತಿ ನೀತಿಯನ್ನು ಇನ್ನಷ್ಟು ಸರಳಗೊಳಿಸಿ, ಸಮರ್ಪಕವಾಗಿ ಜಾರಿ ಮಾಡಲಾಗುವುದು ಎಂಬ ಭರವಸೆಯನ್ನು ಕೂಡಾ ಸರ್ಕಾರ ನೀಡಿದೆ. ಇದು ಶಾಂತಿ ಸ್ಥಾಪನೆಗೆ ಅತ್ಯಂತ ಅಗತ್ಯವಾದ ಮುನ್ನಡೆ ಎಂದು ನಾವು ಭಾವಿಸುತ್ತೇವೆ. ಮುಖ್ಯಮಂತ್ರಿಗಳ ಈ ಕರೆಗೆ ನಕ್ಸಲ್ ಹೋರಾಟಗಾರರು ಇತ್ಯಾತ್ಮಕವಾಗಿ ಸ್ಪಂದಿಸುತ್ತಾರೆ ಎಂದು ನಾಗರಿಕ ಸಮಾಜ ಆಶಿಸುತ್ತದೆ. ಸಂವಿಧಾನಾತ್ಮಕ, ಪ್ರಜಾ ತಾಂತ್ರಿಕ ಹೋರಾಟಗಳು ಆರೋಗ್ಯಕರ ಸಮಾಜಕ್ಕೆ ಮುಖ್ಯ. ಆದರೆ, ಅದನ್ನು ಹಿಂಸಾತ್ಮಕ ಚಳುವಳಿಗಳ ಮೂಲಕವೇ ಮಾಡಬೇಕೆನ್ನುವುದು ಸರಿಯಾದ ಮಾರ್ಗವಲ್ಲ. ಈ ವಾಸ್ತವವನ್ನು ಮನಗಂಡ ಅನೇಕ ನಕ್ಸಲ್‌ ಹೋರಾಟಗಾರರು ಈಗ ಮುಖ್ಯವಾಹಿನಿಯ ಭಾಗವಾಗಿ ಪ್ರಜಾಸತ್ತಾತ್ಮಕ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಈ ವಾಸ್ತವವನ್ನು ಗ್ರಹಿಸಿ, ನಕ್ಸಲರು ತಮ್ಮ ಶಸ್ತ್ರಗಳನ್ನು ತ್ಯಜಿಸಿ ಹೊರಬಂದು, ತಮ್ಮ ಹೋರಾಟಗಳನ್ನು ಕಾನೂನಾತ್ಮಕವಾಗಿ ಮುಂದುವರೆಸಲು ಇದೊಂದು ಅವಕಾಶ ಎಂದು ಶಾಂತಿಗಾಗಿ ನಾಗರಿಕ ವೇದಿಕೆ ಹೇಳಿದೆ.

ವೇದಿಕೆಯ ಪರವಾಗಿ ಎನ್‌. ವೆಂಕಟೇಶ್‌, ಬಿ.ಟಿ ಲಲಿತಾ ನಾಯ್ಕ್, ಡಾ. ಕಲ್ಕುಳಿ ವಿಠ್ಠಲ್‌ ಹೆಗಡೆ, ಪ್ರೊ. ವಿ.ಎಸ್‌. ಶ್ರೀಧರ, ಪ್ರೊ. ನಗರಗೆರೆ ರಮೇಶ್ ಮತ್ತು ತಾರಾ ರಾವ್ ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

“ಸರ್ಕಾರವೂ ಕೂಡ ತಾನು ಹೇಳಿರುವ ರೀತಿಯಲ್ಲಿ ಸರಳವಾಗಿ ಮತ್ತು ಶೀಘ್ರಗತಿಯಲ್ಲಿ ಇತ್ಯರ್ಥವಾಗುವ ʼಶರಣಾಗತಿ ಯೋಜನೆʼಯನ್ನು ಜಾರಿಗೆ ತರುತ್ತದೆ ಎಂದು ನಾವು ನಂಬುತ್ತೇವೆ. ಮುಖ್ಯವಾಹಿನಿ ಸಮಾಜ ಬಯಸಿ ಬರುವವರ ಜೀವನ ನಿರ್ವಹಣೆಗೆ ಬೇಕಾದ ಸೌಲಭ್ಯ ಮತ್ತು ಕಾನೂನು ನೆರವನ್ನು ನೀಡುವುದರ ಮೂಲಕ ಇವರನ್ನು ಘನತೆಯಿಂದ ನಡೆಸಿಕೊಳ್ಳುವುದು ಸರ್ಕಾರದ ಹೊಣೆ. ಇದರ ಮೊದಲ ಹೆಜ್ಜೆಯಾಗಿ, ಈಗಾಗಲೇ  ಹೊರಗೆ ಬಂದಿರುವ ನಕ್ಸಲರಿಗೆ ಬೇಕಾದ ಕಾನೂನಾತ್ಮಕ ನೆರವನ್ನು ಮತ್ತು ಬದುಕಿಗೆ ಆಧಾರವನ್ನು ಒದಗಿಸಬೇಕಾಗಿದೆ. ಆದರೆ, ಈಗ ಅವರ ಪರಿಸ್ಥಿತಿ ಅಯೋಮಯವಾಗಿದೆ. ಹಲವಾರು ಕೋರ್ಟುಗಳಲ್ಲಿ ಹರಡಿಹೋಗಿರುವ ಅಸಂಖ್ಯಾತ  ಕೇಸುಗಳು, ನಿಧಾನಗತಿಯ ವಿಚಾರಣೆ, ಕೊಟ್ಟ ಭರವಸೆಯಂತೆ ನೀಡಬೇಕಾದ ಭೂಮಿ ಹಂಚಿಕೆಯಲ್ಲಿನ ಆಡಳಿತ ನಿರ್ಲಕ್ಷ್ಯ ಸೇರಿದಂತೆ ಇತ್ಯಾದಿ ಸಮಸ್ಯೆಗಳಿಂದಾಗಿ ಅವರ ಬದುಕು ಅತಂತ್ರವಾಗಿದೆ. ವಕೀಲರಿಗೆ ಕೊಡಬೇಕಾದ ಹಣ ಇರಲಿ, ದೈನಂದಿನ ಜೀವನ ನಿರ್ವಹಣೆಗೇ ತೊಳಲಾಟ ಉಂಟಾಗಿದೆ. ಸರ್ಕಾರವು ತಕ್ಷಣವೇ ಇವರ ಸಮಸ್ಯೆಗಳಿಗೆ ಪರಿಹಾರ ರೂಪಿಸಬೇಕು; ಅದರ ಮೂಲಕ ಹೊರ ಬರಲು ಇಚ್ಛಿಸುವವರಲ್ಲಿ ಭರವಸೆಯನ್ನು ಮೂಡಿಸಲು ಸಾಧ್ಯ ಎಂಬುದು ನಮ್ಮ ಗ್ರಹಿಕೆಯಾಗಿದೆ” ಎಂದು ವೇದಿಕೆ ಹೇಳಿದೆ.

“ಶಾಂತಿ ಬಯಸುವ ನಾಗರಿಕರಾಗಿ ನಕ್ಸಲ್‌ ಚಳುವಳಿಗಾರರನ್ನು ಮುಖ್ಯವಾಹಿಗೆ ಕರೆತಂದು ಸರ್ಕಾರಕ್ಕೆ ಒಪ್ಪಿಸುವುದಕ್ಕೆ, ಮೇಲೆ ಸೂಚಿಸುರುವ ಸರ್ಕಾರದ ಪರಿಹಾರ ನೆರವಾಗುತ್ತದೆ. ಈ ಭರವಸೆಯ ಮೂಲಕ ಮಾತ್ರ ಮುಖ್ಯವಾಹಿನಿಗೆ ಬರುವವರ ಜತೆ ಮಾತುಕತೆ ನಡೆಸಲು ಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ; ಶಾಂತಿಯುತ ಪರಿಹಾರಕ್ಕೆ ದಾರಿಮಾಡಿಕೊಡುತ್ತದೆ. ಹೀಗಾಗಿ, ಸರ್ಕಾರವು ಈಗಾಗಲೇ ಹೊರಬಂದಿರುವವರ ಮರುವಸತಿ ಮತ್ತು ಕಾನೂನು ನೆರವಿಗೆ ಅದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ನಾವು ಮನವಿ ಮಾಡುತ್ತೇವೆ” ಎಂದು ಹೇಳಿಯಲ್ಲಿ ಮನವಿ ಮಾಡಲಾಗಿದೆ.

“ಇದೇ ಸಂದರ್ಭದಲ್ಲಿ, ನವೆಂಬರ್‌ 18 ರಂದು ನಡೆದ ವಿಕ್ರಂ ಗೌಡ ಎನ್‌ಕೌಂಟರ್‌ ಬಗ್ಗೆ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದು ಕೂಡ ಮಾನವ ಹಕ್ಕುಗಳ ಕಾರ್ಯಕರ್ತರಾಗಿ ನಾವು ಆಗ್ರಹಿಸುತ್ತೇವೆ. ನಾಗರಿಕ ಸಮಾಜ ಮುಂದಿಡುವ ಈ ನ್ಯಾಯೋಚಿತ ಬೇಡಿಕೆಗೆ ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ವಂದಿಸುತ್ತಾರೆ” ಎಂದು ವೇದಿಕೆ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ; ಕಾರ್ಮಿಕ ಮುಖಂಡ ಡಾ.ಕೆ. ಪ್ರಕಾಶ್‌ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...