ಕೋಟಾ ನಗರದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳದ ಬಗ್ಗೆ ಸುಪ್ರೀಂ ಕೋರ್ಟ್ ರಾಜಸ್ಥಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೇವಲ ಮೂರು ದಿನಗಳ ನಂತರ, ಜಮ್ಮು ಕಾಶ್ಮೀರದ 18 ವರ್ಷದ ವಿದ್ಯಾರ್ಥಿಯೊಬ್ಬರು ನಗರದ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದು ಈ ವರ್ಷ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆಯ 15ನೇ ಘಟನೆ ಮತ್ತು ಈ ತಿಂಗಳೊಂದರಲ್ಲೇ ನಡೆದ ಎರಡನೇ ಘಟನೆಯಾಗಿದೆ.
ಮೃತ ವಿದ್ಯಾರ್ಥಿಯನ್ನು ಝೀಶಾನ್ ಎಂದು ಗುರುತಿಸಲಾಗಿದೆ. ಝೀಶಾನ್ ಕೋಟಾ ನಗರದ ಪ್ರತಾಪ್ ಚೌರಾಹಾದಲ್ಲಿರುವ ಪಿಜಿಯಲ್ಲಿ ವಾಸಿಸುತ್ತಿದ್ದರು. ಘಟನೆಗೂ ಮುನ್ನ, ಝೀಶಾನ್ ತನ್ನ ಸಂಬಂಧಿಗೆ ಫೋನ್ ಕೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದರು.
ಝೀಶಾನ್ ಮಾತು ಕೇಳಿ ಆತಂಕಗೊಂಡ ಸಂಬಂಧಿ ಬುರ್ಹಾನ್, ಅದೇ ಕಟ್ಟಡದ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದ ಮತ್ತೊಬ್ಬರು ವಿದ್ಯಾರ್ಥಿನಿಯನ್ನು ತಕ್ಷಣ ಸಂಪರ್ಕಿಸಿ, ಝೀಶಾನ್ ಬಗ್ಗೆ ವಿಚಾರಿಸುವಂತೆ ಸೂಚಿಸಿದ್ದರು.
ಆ ವಿದ್ಯಾರ್ಥಿ ಓಡಿ ಹೋಗಿ ಝೀಶಾನ್ ತಂಗಿದ್ದಕೊಠಡಿ ನೋಡಿದಾಗ ಅದು ಒಳಗಿನಿಂದ ಲಾಕ್ ಆಗಿರುದು ಕಂಡು ಬಂದಿದೆ. ನಂತರ ವಿದ್ಯಾರ್ಥಿಗಳು ಬಾಗಿಲು ಒಡೆದು ನೋಡಿದಾಗ ಝೀಶಾನ್ ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎಂದು ವರದಿಯಾಗಿದೆ.
ಮೇ 3ರಂದು ಮಧ್ಯಪ್ರದೇಶದ ಮತ್ತೊಬ್ಬರು ನೀಟ್ ಆಕಾಂಕ್ಷಿ ಕೋಟಾದ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಕೋಟಾದಲ್ಲಿ ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳ; ರಾಜಸ್ಥಾನ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್


