Homeಕರ್ನಾಟಕಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಫೋಟೋ- ಪರಿಚಯ ಕಿತ್ತೆಸೆದ ಬಿಜೆಪಿ ಸರ್ಕಾರ; ಜನಾಕ್ರೋಶ

ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಫೋಟೋ- ಪರಿಚಯ ಕಿತ್ತೆಸೆದ ಬಿಜೆಪಿ ಸರ್ಕಾರ; ಜನಾಕ್ರೋಶ

ಭಾರತದ ಮೊದಲ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರ ನೆಹರೂ ಅವರ ಫೋಟೋ ಹಾಗೂ ಪರಿಚಯವನ್ನು ರಾಜ್ಯ ಸರ್ಕಾರ ತನ್ನ ಜಾಹೀರಾತಿನಲ್ಲಿ ಕೈಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

- Advertisement -
- Advertisement -

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಪಂಡಿತ್ ಜವಹರಲಾಲ್‌ ನೆಹರೂ ಅವರ ಪರಿಚಯ ನೀಡದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬ್ರಿಟಿಷರಲ್ಲಿ ಹಲವು ಭಾರಿ ಕ್ಷಮಾಪಣೆಗಳನ್ನು ಕೇಳಿದ ವಿ.ಡಿ.ಸಾವರ್ಕರ್‌ ಫೋಟೋ ಜೊತೆಗೆ ವಿವರಣೆಗಳನ್ನು ನೀಡಲಾಗಿದೆ. ಆದರೆ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ, ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಭಾರಿ ಜೈಲು ಸೇರಿದ್ದ ನೆಹರೂ ಅವರ ಕುರಿತು ಯಾವುದೇ ವಿವರಣೆಗಳು ಇಲ್ಲವಾಗಿವೆ.

ರಾಷ್ಟ್ರನಾಯಕರಾದ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಚಂದ್ರಶೇಖರ್‌ ಆಜಾದ್‌, ಲಾಲಾ ಲಜ್‌ಪತ್‌ ರಾಯ್‌, ಬಾಲ ಗಂಗಾಧರ್‌ ತಿಲಕ್‌, ಬಿಪಿನ್‌ ಚಂದ್ರ ಪಾಲ್‌, ಡಾ.ಬಿ.ಆರ್‌.ಅಂಬೇಡ್ಕರ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಲಾಲ್‌ ಬಹುದ್ದೂರ್‌ ಶಾಸ್ತ್ರಿ, ಮೌಲಾನ ಅಬ್ದುಲ್‌ ಕಲಾಂ ಆಜಾದ್‌ ಫೋಟೋಗಳ ಜೊತೆಗೆ ಕಿರುಪರಿಚಯವನ್ನು ನೀಡಲಾಗಿದೆ. ಹಾಗೆಯೇ ಸಾವರ್ಕರ್‌ ಫೋಟೋವನ್ನು ಹಾಕಿ, ‘ಕ್ರಾಂತಿಕಾರಿ’ ಎಂಬ ಬಿರುದನ್ನು ನೀಡಿ ಪರಿಚಯ ನೀಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೇಖಾ ಚಿತ್ರದ ರೀತಿಯಲ್ಲಿ ರಾಷ್ಟ್ರನಾಯಕರ ಚಿತ್ರಗಳನ್ನು ಬಳಸಲಾಗಿದ್ದು, ಅಲ್ಲಿ ಮಾತ್ರ ನೆಹರೂ ಅವರ ಚಿತ್ರವನ್ನು ಕಿರುದಾಗಿ ಬಳಸಲಾಗಿದೆ. ಸರ್ಕಾರದ ಸಣ್ಣತನವನ್ನು ಗಮನಿಸಿರುವ ನಾಡಿನ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಚಿಂತಕ ಶ್ರೀನಿವಾಸ್ ಕಾರ್ಕಳ ಅವರು, “ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡದ್ದಕ್ಕಾಗಿ ಜವಾಹರಲಾಲ್ ನೆಹರೂ ಅವರನ್ನು ಬ್ರಿಟಿಷ್ ಸರಕಾರ 9 ಬಾರಿ ಬಂಧಿಸಿತ್ತು. ಒಟ್ಟು 3259 ದಿನ (ಸುಮಾರು 9 ವರ್ಷ) ಜೈಲಿನಲ್ಲಿ ಇರಿಸಿತ್ತು”  ಎಂದು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಂದು ಪೋಸ್ಟ್‌ ಮಾಡಿರುವ ಅವರು, “ನೆಹರೂವನ್ನು ಕಡೆಗಣಿಸುವುದರಿಂದ, ಅವಮಾನಿಸುವುದರಿಂದ ನೆಹರೂಗೆ ಏನೂ ಆಗುವುದಿಲ್ಲ. ಅವರಿಗೆ ಅದು ತಿಳಿಯುವುದೂ ಇಲ್ಲ. ಅವರು ತಮ್ಮ ಕರ್ತವ್ಯ ನಿಭಾಯಿಸಿ, ಬದುಕು ಸಾರ್ಥಕಪಡಿಸಿ, ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ದಾಖಲಿಸಿ ಹೊರಟು ಹೋಗಿದ್ದಾರೆ. ಸಣ್ಣವರಾಗುವುದು ಬದುಕಿರುವ ನೀವು. ನೀವು ಹೆಸರಾಗುವುದು, ಇತಿಹಾಸದ ಪುಟಗಳಲ್ಲಿ ಉಳಿಯುವುದು ನಿಮ್ಮ ಸಣ್ಣತನಕ್ಕಾಗಿ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿರಿ: ಶಿವಮೊಗ್ಗ: ಸಾವರ್ಕರ್‌ ಫೋಟೋ ತೆರವು ಮಾಡಿಸಿದ ಜನತೆ; ವಿಡಿಯೊ ವೈರಲ್

ಚಿಂತಕ ರಾಜಾರಾಮ್‌ ತಲ್ಲೂರು ಪ್ರತಿಕ್ರಿಯೆ ನೀಡಿದ್ದು, “ಇಂದು ರಾಜ್ಯ ಸರ್ಕಾರದ ವತಿಯಿಂದ ಪ್ರಕಟಗೊಂಡಿರುವ (ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಡಿ ಬರುವ ಕರ್ನಾಟಕವಾರ್ತೆ ಈ ಜಾಹೀರಾತು ಪ್ರಕಟಿಸಿದೆ) ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯು ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರೂ, ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಗಳೂ ಆದ ಪಂಡಿತ್ ಜವಹರಲಾಲ್ ನೆಹರೂ ಅವರ (ಮತ್ತು ಅಲ್ಲಿ ಕಾಣಿಸಿಕೊಳ್ಳಲೇ ಬೇಕಾಗಿದ್ದ ಹಲವು ಮಂದಿ ಪ್ರಮುಖ ಹೋರಾಟಗಾರರ) ಚಿತ್ರವನ್ನು ಕೈಬಿಟ್ಟಿದೆ. ಇದು ಅಕಸ್ಮಾತ್ ಸಂಭವಿಸಿರುವ ಪ್ರಮಾದವೇ? ತಳಮಟ್ಟದಲ್ಲಿ ಸಂಭವಿಸಿರುವ ಕರ್ತವ್ಯ ಲೋಪವೇ? ಉದ್ದೇಶಪೂರ್ವಕ ಕೃತ್ಯವೇ? ಸೈದ್ಧಾಂತಿಕವಾದ ಕುತರ್ಕವೆ? ಅಥವಾ ನೆಹರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡದ್ದೇ “ಫೇಕ್ ಸುದ್ದಿಯೆ?” ಕರ್ನಾಟಕ ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡುವುದು ತನ್ನ ನೈತಿಕ, ಸಾಮಾಜಿಕ, ರಾಷ್ಟ್ರೀಯ ಮತ್ತು ಸಾಂವಿಧಾನಿಕ ಜವಾಬ್ದಾರಿ ಎಂದು ಭಾವಿಸಬೇಕು. ದೇಶದ ಒಬ್ಬ ನಾಗರಿಕನಾಗಿ ನಾನು ಈ ಲೋಪಕ್ಕಾಗಿ ತಲೆತಗ್ಗಿಸುತ್ತೇನೆ” ಎಂದಿದ್ದಾರೆ.

ಬರಹಗಾರ್ತಿ ಪಲ್ಲವಿ ಇಡೂರು ಅವರು ಪ್ರತಿಕ್ರಿಯೆ ನೀಡಿ, “ಬಿಜೆಪಿ ಸರ್ಕಾರ ತನ್ನ ಪ್ರೊಪಗಂಡಾ ವಿಚಾರ ಬಂದಾಗ ಗಟಾರಕ್ಕಾದದೂ ಇಳಿಯಬಲ್ಲದು ಅನ್ನುವುದಕ್ಕೆ ನೆಹರೂ ಅವರನ್ನು ಹೊರತುಪಡಿಸಿ ಕೊಟ್ಟ ಈ ಜಾಹೀರಾತೇ ಸಾಕ್ಷಿ! ಕೀಲಿ ಬೊಂಬೆ ಬೊಮ್ಮಾಯಿಯವರೇ, ನೀವು ನಿಮ್ಮ ಗಟಾರದ ಪಕ್ಷ ತಿಪ್ಪರಲಾಗ ಹಾಕಿದರೂ ಇತಿಹಾಸ ಬದಲಿಸಲಾರಿರಿ. ಸ್ವಾತಂತ್ರ್ಯ ಹೋರಾಟ ಮಾಡಿದ ಪಕ್ಷ ಎನ್ನಿಸಿಕೊಳ್ಳಲಾರಿರಿ! ಅಂದಹಾಗೆ ಇಷ್ಟೊಂದು ಸುಳ್ಳು ಹೇಳಿ ಯಾವ ಘನಕಾರ್ಯ ಮಾಡಲಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

ಹಿರಿಯ ಪತ್ರಕರ್ತ ಸನತ್‌ಕುಮಾರ್‌ ಬೆಳಗಲಿಯವರು, “ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಧ್ಯಗಳಿಗೆ ನೀಡಿದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪಟ ಇಲ್ಲ. ಅಂದಿನ ಹೋರಾಟದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಸೆರೆಮನೆ ವಾಸ ಅನುಭವಿಸಿದ ಅಪಾರ ತ್ಯಾಗ ಮಾಡಿದ ನೆಹರೂ ಅವರನ್ನು ಕಡೆಗಣಿಸುವಷ್ಟು ಸಣ್ಣತನ ಒಳ್ಳೆಯದಲ್ಲ. ಬ್ರಿಟಿಷ್ ಸರಕಾರಕ್ಕೆ ಕ್ಷಮಾಪಣೆ ಕೇಳಿ ಜೈಲಿನಿಂದ ಹೊರಗೆ ಬಂದವರ ಪಟ ಹಾಕುವ ಸಿ.ಎಂ.ಬಸವರಾಜ ಬೊಮ್ಮಾಯಿಯವರೇ ನಿಮ್ಮ ಅಧಿಕಾರಾವಧಿಯಲ್ಲಿ ಇಂಥ ಅಪಚಾರ ನಡೆಯಬಾರದಿತ್ತು” ಎಂದಿದ್ದಾರೆ.

ಪತ್ರಕರ್ತೆ ಹೇಮಾ ವೆಂಕಟ್‌ ಅವರು ಪ್ರತಿಕ್ರಿಯಿಸಿ, “ಸಂಘಿಗಳ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ನೆಹರೂ ಅವರ ಫೋಟೋ ಇಲ್ಲದ ಮಾತ್ರಕ್ಕೆ ದೇಶದ ಮೊದಲ ಪ್ರಧಾನಿ ಎಂಬ ಸ್ಥಾನ, ಕಟ್ಟಿದ ಸಂಸ್ಥೆಗಳು, ಯೋಜನೆಗಳನ್ನು ಅಳಿಸಲು ಸಾಧ್ಯವಿಲ್ಲ. ಸಾವರ್ಕರ್ ಫೋಟೋ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಹಾಕಿದರೂ, ಆತ ಗಾಂಧಿ ಹತ್ಯೆಯ ಸಂಚುಗಾರ ಎಂಬುದು ಮನಸ್ಸಿಗೆ ಬಂದೇ ಬರುತ್ತದೆ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಗುಲಾಬಿ ಬಿಳಿಮಲೆಯವರು ಪೋಸ್ಟ್ ಮಾಡಿದ್ದು, “ಬೊಮ್ಮಾಯಿಯವರೇ, ನೀವು ಈ ದೇಶವನ್ನು ಕಟ್ಟಿದ ಮಹಾ ಮುತ್ಸುದ್ದಿ ನೆಹರೂ ಅವರನ್ನು ನಿಮ್ಮ‌ ಸರಕಾರದ ಜಾಹೀರಾತಿನಲ್ಲಿ ಮರೆ ಮಾಡಿದ್ದೀರಿ. ಏನು ಸಾಧನೆಯಾಯ್ತು? ಕಾರ್ನಾಟಕದ ಜನತೆ ಇವತ್ತು ನೆಹರೂ ಅವರನ್ನು ಎಂದಿಲ್ಲದಷ್ಟು ನೆನಪು ಮಾಡಿಕೊಳ್ತಾ ಇದ್ದಾರೆ. ಸಾಮಾಜಿಕ ಜಾಲತಾಣಗಳು ಇಂದು ಅವರ ನೆನಪುಗಳೊಂದಿಗೇ ಬಣ್ಣ ಪಡೆದಿವೆ. ಜನರ ಮನಸಿನಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿ ಸ್ಥಿರಸ್ಥಾಯಿಯಾಗಿರುವ ನೆಹರೂ ಅವರನ್ನು ಕೇವಲ ನಿಮ್ಮ ಜಾಹೀರಾತು ಅಳಿಸಿಹಾಕದು ನೆನಪಿರಲಿ. ನಿಮ್ಮ ಸರಕಾರಕ್ಕೆ ಇದು ನೆಗೆಟಿವ್ ಪ್ರಚಾರ, ಮುಖ್ಯಮಂತ್ರಿಯಾಗಿ ನಿಮಗೂ ಎಂದೂ ಅಳಿಸಲಾಗದ ಕಪ್ಪುಚುಕ್ಕೆ” ಎಂದು ಎಚ್ಚರಿಸಿದ್ದಾರೆ.

ದೂರವಾಣಿ ಚಳವಳಿ ನಡೆಸುವ ಕುರಿತು ಪೋಸ್ಟ್‌ಗಳನ್ನು ಹಾಕಲಾಗಿದೆ. ವಾರ್ತಾ ಇಲಾಖೆಯ ನಂಬರ್‌ (08022028001/2, 08022028048) ಪೋಸ್ಟ್ ಮಾಡಿ, ಅನಿಲ್ ಹೊಸಕೊಪ್ಪ ಅವರ ಟಿಪ್ಪಣಿಯನ್ನು ಬರಹಗಾರ ಕೆ.ಆರ್‌.ಪ್ರಗತ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿರಿ: ಸಚಿವ ಬಿಸಿ ನಾಗೇಶ್‌ ನೇತೃತ್ವದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಎಬಿವಿಪಿ ಧ್ವಜ ಹಾರಾಟ!

“ಸ್ನೇಹಿತರೆ ಇವತ್ತಿನ ದಿನ ಪತ್ರಿಕೆಗಳನ್ನ ಓದುವಾಗ ಸ್ವಾತಂತ್ರೋತ್ಸವದ ಬಗ್ಗೆ ಜಾಹೀರಾತು ನೀಡಿದ್ದನ್ನು ಗಮನಿಸಿದೆ. ಅದರಲ್ಲಿ ಹೋರಾಟದ ಪ್ರಮುಖರ ಸಾಲಿನಲ್ಲಿ ಬರುವ ಹೆಸರುಗಳಲ್ಲಿ ಹಲವು ವರ್ಷಗಳ ಸೆರೆವಾಸ ಅನುಭವಿಸಿ ಭಾರತದ ಮೊದಲ ಪ್ರಧಾನಿಯಾಗಿ ಸುಂದರ ಭಾರತ ಕಟ್ಟಿದ ಚೇತನ ನೆಹರೂ ಭಾವ ಚಿತ್ರ ಹಾಗೂ ವಿವರಣೆ ಇಲ್ಲದೆ ಇರುವುದು ನೆಹರೂರವರಿಗೆ ಅವಮಾನವಾಗಿದೆ. ಇದನ್ನು ಸರಿಪಡಿಸಿ ಎಂದು ಈಗಾಗಲೇ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿಯವರು ದೂರವಾಣಿ ಮೂಲಕ ವಾರ್ತಾ ಇಲಾಖೆಯ ಆಯುಕ್ತರಿಗೆ ಮಾತನಾಡಿದ್ದಾರೆ. ಚೆಕ್ ಮಾಡ್ತೀನಿ ಅಂತಲೂ ಹೇಳಿದ್ದಾರೆ. ಆದರೆ ಒಂದು ಇಲಾಖೆ ಹಾಗೂ ಸರ್ಕಾರ ದೇಶ ಕಂಡ ಮಹಾನ್ ನಾಯಕರಿಗೆ ಅವಮಾನ ಮಾಡುವುದು ಎಷ್ಟು ಸರಿ? ಹಾಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರವಾಣಿ ಚಳುವಳಿ ಮಾಡಿ ಮುಂದೆ ಈ ತಪ್ಪುಗಳು ಆಗಬಾರದು. ಮುಂದೆ ಗಾಂಧೀ ಭಾವ ಚಿತ್ರ ತೆಗೆಯುವುದಕ್ಕೂ ಹೇಸುವುದಿಲ್ಲ” ಎಂದು ಅನಿಲ್‌ ಹೊಸಕೊಪ್ಪ ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರ ಭಾವಚಿತ್ರ ಇಲ್ಲದೆಯೇ ಪ್ರಕಟಿಸಿ ಕರ್ನಾಟಕ ಸರ್ಕಾರ ಜನರ ಮುಂದೆ ಬೆತ್ತಲೆಯಾಗಿದೆ. ನೆಹರು ಅವರ ಭಯದಲ್ಲಿ ಬಿ. ಜೆ. ಪಿ. ಯವರು ಇನ್ನೂ ನರಳುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ತನ್ನ ನಿಜಾಸ್ವರೂಪವನ್ನು ತಾನಾಗಿಯೇ ಬಿ. ಜೆ. ಪಿ. ಅನಾವರಣಗೊಳಿಸಿಕೊಂಡಿರುವುದಕ್ಕೆ ಹಾಗೂ ಜನರನ್ನು ಜಾಗ್ರತೆಗೊಳಿಸಿರುವುದಕ್ಕೆ ಥ್ಯಾಂಕ್ಸ್.

LEAVE A REPLY

Please enter your comment!
Please enter your name here

- Advertisment -

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...