Homeಕರ್ನಾಟಕಶಿವಮೊಗ್ಗ: ಸಾವರ್ಕರ್‌ ಫೋಟೋ ತೆರವು ಮಾಡಿಸಿದ ಜನತೆ; ವಿಡಿಯೊ ವೈರಲ್

ಶಿವಮೊಗ್ಗ: ಸಾವರ್ಕರ್‌ ಫೋಟೋ ತೆರವು ಮಾಡಿಸಿದ ಜನತೆ; ವಿಡಿಯೊ ವೈರಲ್

ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದಿದ್ದ ಸಾವರ್ಕರ್‌ ಫೋಟೋವನ್ನು ತನ್ನ ಜಾಹೀರಾತುಗಳಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದೆ.

- Advertisement -
- Advertisement -

ಶಿವಮೊಗ್ಗ ಸಿಟಿ ಸೆಂಟರ್ ಮಾಲ್‌‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಮಧ್ಯದಲ್ಲಿ ಒಳ ನುಸುಳಿದ್ದ ವಿ.ಡಿ.ಸಾವರ್ಕರ್‌ ಫೋಟೋವನ್ನು ಜನರೇ ತೆರವು ಮಾಡಿಸಿರುವ ವಿಡಿಯೊ ವೈರಲ್ ಆಗಿದೆ.

“ಬ್ರಿಟಿಷರ ಬೂಟು ನೆಕ್ಕಿ, ಕ್ಷಮಾಪಣೆ ಭಿಕ್ಷೆ ಕೇಳಿದ್ದ ಸಾವರ್ಕರ್ ಭಾವಚಿತ್ರವನ್ನು ತೆಗೆದು ಹಾಕಬೇಕು” ಎಂದು ಆಗ್ರಹಿಸುತ್ತಿರುವ ಯುವಕನಿಗೆ ಇನ್ನಿತರರು ಸಾಥ್ ನೀಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರ ಫೋಟೋವನ್ನು ಹಾಕಬೇಕೆಂದು ಆಗ್ರಹಿಸಲಾಗಿದೆ. ಅಲ್ಲದೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಫೋಟೋವನ್ನು ಸಾವರ್ಕರ್‌ ಫೋಟೋಕ್ಕಿಂತ ಚಿಕ್ಕದ್ದಾಗಿ ಹಾಕಿದ್ದನ್ನು ಪ್ರಶ್ನಿಸಲಾಗಿದೆ. ಸಿಟಿ ಸೆಂಟರ್‌ ಮಾಲ್‌ನವರು ಸಾವರ್ಕರ್‌ ಫೋಟೋವನ್ನು ತೆರವು ಮಾಡಿ ಮಾದರಿಯಾಗಿದ್ದಾರೆ.

ಬಿಜೆಪಿ ಆಕ್ರೋಶ

ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದ ಸಾವರ್ಕರ್‌ ಫೋಟೋವನ್ನು ತೆಗೆಸಿಹಾಕಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ಎಸ್‌ಡಿಪಿಐ ಕಾರ್ಯಕರ್ತರು ಫೋಟೋವನ್ನು ತೆಗೆಸಿದ್ದು, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು” ಎಂದು ಪ್ರತಿಭಟನೆ ನಡೆಸಲಾಗಿದೆ.

ಸರ್ಕಾರದ ಜಾಹೀರಾತಿನಲ್ಲಿ ಸಾವರ್ಕರ್‌

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರ ಕನ್ನಡದ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿಯೂ ಸಾವರ್ಕರ್ ಫೋಟೋ ನುಸುಳಿದೆ.

ರಾಷ್ಟ್ರನಾಯಕರಾದ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಚಂದ್ರಶೇಖರ್‌ ಆಜಾದ್‌, ಲಾಲಾ ಲಜ್‌ಪತ್‌ ರಾಯ್‌, ಬಾಲ ಗಂಗಾಧರ್‌ ತಿಲಕ್‌, ಬಿಪಿನ್‌ ಚಂದ್ರ ಪಾಲ್‌, ಡಾ.ಬಿ.ಆರ್‌.ಅಂಬೇಡ್ಕರ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಲಾಲ್‌ ಬಹುದ್ದೂರ್‌ ಶಾಸ್ತ್ರಿ, ಮೌಲಾನ ಅಬ್ದುಲ್‌ ಕಲಾಂ ಆಜಾದ್‌ ಫೋಟೋಗಳ ಜೊತೆಗೆ ಸಾವರ್ಕರ್‌ ಫೋಟೋವನ್ನು ಮುದ್ರಿಸಲಾಗಿದೆ. ‘ಕ್ರಾಂತಿಕಾರಿ’ ಎಂಬ ಬಿರುದನ್ನು ಸಾವರ್ಕರ್‌ಗೆ ನೀಡಲಾಗಿದೆ.

ನೆಹರೂ ಪರಿಚಯವಿಲ್ಲ: ಜನಾಕ್ರೋಶ

ಸರ್ಕಾರ ನೀಡಿರುವ ಜಾಹೀರಾತಿನಲ್ಲಿ ಭಾರತದ ಮೊದಲ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಜವಹರಲಾಲ್‌ ನೆಹರೂ ಅವರ ಪರಿಚಯವನ್ನು ನೀಡಲಾಗಿಲ್ಲ. ಜಾಹೀರಾತಿನಲ್ಲಿ ರೇಖಾಚಿತ್ರದ ಮಾದರಿಯಲ್ಲಿ ರಾಷ್ಟ್ರನಾಯಕರ ಫೋಟೋಗಳನ್ನು ಬಳಸಲಾಗಿದ್ದು, ಅಲ್ಲಿ ನೆಹರೂ ಚಿತ್ರವನ್ನು ನೀಡಲಾಗಿದೆ. ಸಾವರ್ಕರ್‌ ಚಿತ್ರವನ್ನು ಅಲ್ಲಿಯೂ ಹಾಕಲಾಗಿದೆ. ನೆಹರೂ ಫೋಟೋ ಹಾಗೂ ವಿವರಣೆ ಇಲ್ಲದಿರುವುದಕ್ಕೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಿಂತಕ ಶ್ರೀನಿವಾಸ್ ಕಾರ್ಕಳ ಅವರು, “ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡದ್ದಕ್ಕಾಗಿ ಜವಾಹರಲಾಲ್ ನೆಹರೂ ಅವರನ್ನು ಬ್ರಿಟಿಷ್ ಸರಕಾರ 9 ಬಾರಿ ಬಂಧಿಸಿತ್ತು. ಒಟ್ಟು 3259 ದಿನ (ಸುಮಾರು 9 ವರ್ಷ) ಜೈಲಿನಲ್ಲಿ ಇರಿಸಿತ್ತು”  ಎಂದು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಂದು ಪೋಸ್ಟ್‌ ಮಾಡಿರುವ ಅವರು, “ನೆಹರೂವನ್ನು ಕಡೆಗಣಿಸುವುದರಿಂದ, ಅವಮಾನಿಸುವುದರಿಂದ ನೆಹರೂಗೆ ಏನೂ ಆಗುವುದಿಲ್ಲ. ಅವರಿಗೆ ಅದು ತಿಳಿಯುವುದೂ ಇಲ್ಲ. ಅವರು ತಮ್ಮ ಕರ್ತವ್ಯ ನಿಭಾಯಿಸಿ, ಬದುಕು ಸಾರ್ಥಕಪಡಿಸಿ, ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ದಾಖಲಿಸಿ ಹೊರಟು ಹೋಗಿದ್ದಾರೆ. ಸಣ್ಣವರಾಗುವುದು ಬದುಕಿರುವ ನೀವು. ನೀವು ಹೆಸರಾಗುವುದು, ಇತಿಹಾಸದ ಪುಟಗಳಲ್ಲಿ ಉಳಿಯುವುದು ನಿಮ್ಮ ಸಣ್ಣತನಕ್ಕಾಗಿ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿರಿ: ಶಿವಮೊಗ್ಗ: ಸಾವರ್ಕರ್‌ ಫೋಟೋ ತೆರವು ಮಾಡಿಸಿದ ಜನತೆ; ವಿಡಿಯೊ ವೈರಲ್

ಚಿಂತಕ ರಾಜಾರಾಮ್‌ ತಲ್ಲೂರು ಪ್ರತಿಕ್ರಿಯೆ ನೀಡಿದ್ದು, “ಇಂದು ರಾಜ್ಯ ಸರ್ಕಾರದ ವತಿಯಿಂದ ಪ್ರಕಟಗೊಂಡಿರುವ (ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಡಿ ಬರುವ ಕರ್ನಾಟಕವಾರ್ತೆ ಈ ಜಾಹೀರಾತು ಪ್ರಕಟಿಸಿದೆ) ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯು ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರೂ, ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಗಳೂ ಆದ ಪಂಡಿತ್ ಜವಹರಲಾಲ್ ನೆಹರೂ ಅವರ (ಮತ್ತು ಅಲ್ಲಿ ಕಾಣಿಸಿಕೊಳ್ಳಲೇ ಬೇಕಾಗಿದ್ದ ಹಲವು ಮಂದಿ ಪ್ರಮುಖ ಹೋರಾಟಗಾರರ) ಚಿತ್ರವನ್ನು ಕೈಬಿಟ್ಟಿದೆ. ಇದು ಅಕಸ್ಮಾತ್ ಸಂಭವಿಸಿರುವ ಪ್ರಮಾದವೇ? ತಳಮಟ್ಟದಲ್ಲಿ ಸಂಭವಿಸಿರುವ ಕರ್ತವ್ಯ ಲೋಪವೇ? ಉದ್ದೇಶಪೂರ್ವಕ ಕೃತ್ಯವೇ? ಸೈದ್ಧಾಂತಿಕವಾದ ಕುತರ್ಕವೆ? ಅಥವಾ ನೆಹರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡದ್ದೇ “ಫೇಕ್ ಸುದ್ದಿಯೆ?” ಕರ್ನಾಟಕ ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡುವುದು ತನ್ನ ನೈತಿಕ, ಸಾಮಾಜಿಕ, ರಾಷ್ಟ್ರೀಯ ಮತ್ತು ಸಾಂವಿಧಾನಿಕ ಜವಾಬ್ದಾರಿ ಎಂದು ಭಾವಿಸಬೇಕು. ದೇಶದ ಒಬ್ಬ ನಾಗರಿಕನಾಗಿ ನಾನು ಈ ಲೋಪಕ್ಕಾಗಿ ತಲೆತಗ್ಗಿಸುತ್ತೇನೆ” ಎಂದಿದ್ದಾರೆ.

ಬರಹಗಾರ್ತಿ ಪಲ್ಲವಿ ಇಡೂರು ಅವರು ಪ್ರತಿಕ್ರಿಯೆ ನೀಡಿ, “ಬಿಜೆಪಿ ಸರ್ಕಾರ ತನ್ನ ಪ್ರೊಪಗಂಡಾ ವಿಚಾರ ಬಂದಾಗ ಗಟಾರಕ್ಕಾದದೂ ಇಳಿಯಬಲ್ಲದು ಅನ್ನುವುದಕ್ಕೆ ನೆಹರೂ ಅವರನ್ನು ಹೊರತುಪಡಿಸಿ ಕೊಟ್ಟ ಈ ಜಾಹೀರಾತೇ ಸಾಕ್ಷಿ! ಕೀಲಿ ಬೊಂಬೆ ಬೊಮ್ಮಾಯಿಯವರೇ, ನೀವು ನಿಮ್ಮ ಗಟಾರದ ಪಕ್ಷ ತಿಪ್ಪರಲಾಗ ಹಾಕಿದರೂ ಇತಿಹಾಸ ಬದಲಿಸಲಾರಿರಿ. ಸ್ವಾತಂತ್ರ್ಯ ಹೋರಾಟ ಮಾಡಿದ ಪಕ್ಷ ಎನ್ನಿಸಿಕೊಳ್ಳಲಾರಿರಿ! ಅಂದಹಾಗೆ ಇಷ್ಟೊಂದು ಸುಳ್ಳು ಹೇಳಿ ಯಾವ ಘನಕಾರ್ಯ ಮಾಡಲಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಸರಿ ಈ ನಡೆ ಖಂಡನೀಯ…..ಹೇಡಿಯನ್ನು ವೀರನನ್ನಾಗಿಸುವ ಹೇಡಿಗಳ ಸಾಮ್ರಾಜ್ಯವಿದು….

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...