‘ದುರಹಂಕಾರ’ ಮತ್ತು ‘ಸ್ವಾರ್ಥ’ದ ಕಾರಣಕ್ಕೆ ಪಕ್ಷದಿಂದ ಹೊರಹಾಕಲ್ಪಟ್ಟ ನಲವತ್ತೊಂದು ದಿನಗಳ ನಂತರ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿರುವ ವಿದ್ಯಾಮಾನ ನಡೆದಿದೆ ಎಂದು ವರದಿಯಾಗಿದೆ. ಆಕಾಶ್ ಆನಂದ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ಅವರಿಗೆ ‘ಇನ್ನೊಂದು ಅವಕಾಶ’ ನೀಡುತ್ತಿದ್ದೇನೆ. ಜೊತೆಗೆ ತಾನು ಆರೋಗ್ಯವಾಗಿರುವವರೆಗೆ ಯಾರನ್ನೂ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸುವುದಿಲ್ಲ ಎಂದು ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಸೋದರಳಿಯ ಆಕಾಶ್‌ರನ್ನು
‘ಎಕ್ಸ್’ನಲ್ಲಿ ಆಕಾಶ್ ಅವರು ಕ್ಷಮೆಯಾಚಿಸಿದ ನಂತರ ಮಾಯಾವತಿಯವರ ಮನಸ್ಸು ಬದಲಾಗಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ತಮ್ಮ ಏಕೈಕ ‘ರಾಜಕೀಯ ಗುರು’ ಮತ್ತು ‘ಆದರ್ಶ’ ಎಂದು ಮಾಯಾವತಿಯವರನ್ನು ಪರಿಗಣಿಸಿರುವ ಆಕಾಶ್, ಅವರೊಂದಿಗೆ ಕ್ಷಮೆಯಾಚಿಸಿದ್ದಾಗಿ ಹೇಳಿದ್ದಾರೆ.
”ಸಂಬಂಧಿಕರು ಮತ್ತು ಸಲಹೆಗಾರರಿಂದ ಅವರ ರಾಜಕೀಯ ನಿರ್ಧಾರಗಳಿಗಾಗಿ ನಾನು ಎಂದಿಗೂ ಯಾವುದೇ ಸಲಹೆಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಮಾಯಾವತಿಯ ಸೂಚನೆಗಳನ್ನು ಮಾತ್ರ ಅನುಸರಿಸುತ್ತೇನೆ ಎಂದು ಖಚಿತಪಡಿಸಿಕೊಳ್ಳುತ್ತೇನೆ…. ಪಕ್ಷದ ಹಿರಿಯರು ಮತ್ತು ಹಳೆಯ ನಾಯಕರರನ್ನು ನಾನು ಗೌರವಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.
ಆಕಾಶ್ ಅವರು ಮಾಯಾವತಿಯವರನ್ನು ಕ್ಷಮಿಸುವಂತೆ ಮತ್ತು ಬಿಎಎಸ್‌ಪಿಗಾಗಿ ಕೆಲಸ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇಂತಹ ಅವಕಾಶ ನೀಡಿದರೆ ತಾನು ‘ಎಂದೆಂದಿಗೂ’ ಅವರಿಗೆ ‘ಋಣಿಯಾಗಿ’ ಇರುವುದಾಗಿ ಹೇಳಿದ್ದಾರೆ.
ಆಕಾಶ್ ಕ್ಷಮೆಯಾಚಿಸಿದ ಕೆಲವು ಗಂಟೆಗಳ ನಂತರ, ಮಾಯಾವತಿ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿ, “ಆಕಾಶ್ ಸಾರ್ವಜನಿಕ ಕ್ಷಮೆಯಾಚಿಸಿದ್ದು ಮತ್ತು ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ಬಿಎಸ್‌ಪಿಯಿಂದ ಹೊರಹಾಕಲ್ಪಟ್ಟ ಅವರ ಮಾವ ಅಶೋಕ್ ಸಿದ್ಧಾರ್ಥ್ ಅವರ ಸಲಹೆಗಳನ್ನು ಪಾಲಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದ್ದರಿಂದ ಅವರಿಗೆ ‘ಇನ್ನೊಂದು ಅವಕಾಶ’ ನೀಡಲು ನಿರ್ಧರಿಸಿದ್ದೇನೆ” ಎಂದು ಹೇಳಿದರು.
ತಾವು ಆರೋಗ್ಯವಾಗಿರುವವರೆಗೆ ಯಾರನ್ನೂ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸುವುದಿಲ್ಲ ಎಂದು ಮಾಯಾವತಿ ಅವರು ಸ್ಪಷ್ಟಪಡಿಸಿದ್ದಾರೆ.
ಮಾಯಾವತಿ ಅವರು ಕಳೆದ ತಿಂಗಳು ಆಕಾಶ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ವಜಾಗೊಳಿಸಿದ್ದರು. ಒಂದು ವರ್ಷದಲ್ಲಿ ಎರಡನೇ ಬಾರಿಗೆ ಆಕಾಶ್ ಆನಂದ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಕಳೆದ ವರ್ಷವೂ ಅವರನ್ನು ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ವಜಾಗೊಳಿಸಲಾಯಿತು, ಕೆಲವು ತಿಂಗಳ ನಂತರ ಅವರನ್ನು ಮತ್ತೆ ನೇಮಿಸಲಾಯಿತು.
ನಂತರ ಅವರು ತಾನು ಜೀವಂತವಾಗಿರುವವರೆಗೆ ಯಾರನ್ನೂ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಲಾಗುವುದಿಲ್ಲ ಎಂದು ಹೇಳಿದ್ದರು. ಪಕ್ಷದ ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಅವರು ಹೇಳಿದ್ದಾರೆ. “ನಾನು ಬದುಕಿರುವವರೆಗೂ ಉತ್ತರಾಧಿಕಾರಿಯನ್ನು ಘೋಷಿಸಬಾರದು ಎಂದು ನಾನು ನಿರ್ಧರಿಸಿದ್ದೇನೆ…. ಪಕ್ಷದ ಹಿತಾಸಕ್ತಿಗಳಿಗಿಂತ ಸಂಬಂಧಗಳು, ಕುಟುಂಬ ಮುಖ್ಯವಲ್ಲ….. ನನಗೆ ಪಕ್ಷ ಮೊದಲು” ಎಂದು ಅವರು ಹೇಳಿದ್ದರು. ಸೋದರಳಿಯ ಆಕಾಶ್‌ರನ್ನು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮಹಿಳಾ ಬ್ಯೂಟಿ ಪಾರ್ಲರ್‌ಗಳಲ್ಲಿ ‘ಲವ್ ಜಿಹಾದ್’? ಮುಸ್ಲಿಂ ಪುರುಷರ ನೇಮಕ ನಿಷೇಧಿಸಲು ಬಲಪಂಥೀಯ ಸಂಘಟನೆ ಒತ್ತಾಯ
ಮಹಿಳಾ ಬ್ಯೂಟಿ ಪಾರ್ಲರ್‌ಗಳಲ್ಲಿ ‘ಲವ್ ಜಿಹಾದ್’? ಮುಸ್ಲಿಂ ಪುರುಷರ ನೇಮಕ ನಿಷೇಧಿಸಲು ಬಲಪಂಥೀಯ ಸಂಘಟನೆ ಒತ್ತಾಯ

