Homeಕರ್ನಾಟಕಆಷಾಢದ ಗಾಳಿಯಲ್ಲಿ ಹಾರಿದ ಪಟ ಬಸವರಾಜ ಬೊಮ್ಮಾಯಿ

ಆಷಾಢದ ಗಾಳಿಯಲ್ಲಿ ಹಾರಿದ ಪಟ ಬಸವರಾಜ ಬೊಮ್ಮಾಯಿ

- Advertisement -
- Advertisement -

ಆಷಾಢದ ಗಾಳಿ ಬಹಳ ವಿಚಿತ್ರ. ಮಳೆಯೂ ಸುರಿಯುವ ಕಾಲದಲ್ಲಿ ಗಾಳಿ ಬಲು ಜೋರು. ದಟ್ಟ ಮೋಡಗಳನ್ನು ಹೊತ್ತು ತರುವ ಈ ಗಾಳಿ, ಜೊತೆಗೆ ಗುಡುಗು-ಮಿಂಚುಗಳ ಆರ್ಭಟದೊಂದಿಗೆ ಬೆಚ್ಚಿ ಬೀಳಿಸುತ್ತದೆ. ಚೈತ್ರದಲ್ಲಿ ಚಿಗುರಿ, ಅರಳಿ ನಿಂತ ಎಂತಹ ಗಟ್ಟಿ ಮರವನ್ನು ನೀನೆಷ್ಟು ಗಟ್ಟಿ ಎಂದು ಅಲುಗಾಡಿಸಿ, ಅದರ ಬೇರುಗಳನ್ನೇ ಬುಡಮೇಲುಮಾಡುವ ತಾಕತ್ತು ಆಷಾಢದ ಗಾಳಿಗೆ ಇದೆ.

ಒಂದು ರೀತಿಯ ಅಸಮತೋಲನ, ಒಂದು ರೀತಿಯ ವಿಷಮ ಪರಿಸ್ಥಿತಿಯನ್ನು ಸೃಷ್ಟಿಸುವ ಈ ಕಾಲ, ನಿಜವಾದ ಕಸುವನ್ನು ಒರೆಹಚ್ಚುತ್ತಿರುತ್ತದೆ. ಇದೇ ಕಾಲದಲ್ಲಿ ಗಾಳಿಪಟ ಕೂಡ ಆಕಾಶದಲ್ಲಿ ಹಾರಾಡುತ್ತದೆ.

ಸದ್ಯ ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವದ ಕುರಿತು ಇರುವ ಬಿಕ್ಕಟ್ಟಿನ ಕಾಲದಲ್ಲಿ ಗಾಳಿಪಟದಂತೆ ಆಕಾಶಕ್ಕೆ ಹಾರಿರುವುದು ಬಸವರಾಜ ಬೊಮ್ಮಾಯಿ. ಕರ್ನಾಟಕದ ಇಪ್ಪತ್ತನೆಯ ಮುಖ್ಯಮಂತ್ರಿಯಾಗಿ ಜುಲೈ 28ರಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಆರು ತಿಂಗಳಲ್ಲಿ ನಾಯಕತ್ವ ಬದಲಾವಣೆಯ ವಿಷಯದಲ್ಲಿ ನಡೆದ ತೆರೆಮರೆಯ ಚರ್ಚೆಗಳು, ರಾಷ್ಟ್ರ ನಾಯಕರ ಭೇಟಿಗಳು, ಆರ್‌ಎಸ್‌ಎಸ್‌ನವರಂತೆ, ಹೊರಗಿನವರಂತೆ ಎಂಬೆಲ್ಲಾ ಚರ್ಚೆಗಳಿಗೆ ಅಲ್ಪವಿರಾಮ ಬಿದ್ದಿದೆ.

ಬಸವರಾಜ ಬೊಮ್ಮಾಯಿ ಅವರ ಈ ಆಯ್ಕೆ ವಿಶೇಷಗಳನ್ನು ದಾಖಲಿಸಿದೆ. ಬಿಜೆಪಿಯೂ ಮೂಲನಿವಾಸಿಯಲ್ಲದ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದೆ. ಹಾಗೇ ಕರ್ನಾಟಕದಲ್ಲಿ ಅಪ್ಪ-ಮಗ ಈ ಸ್ಥಾನಕ್ಕೇರಿದ ಎರಡನೆಯ ಕುಟುಂಬ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ (ಕುಟುಂಬ ರಾಜಕಾರಣದ ಚರ್ಚೆ ಒತ್ತಟ್ಟಿಗಿರಲಿ).

ಬಸವರಾಜ ಬೊಮ್ಮಾಯಿ ಅವರ ಆಯ್ಕೆಯು ಲಿಂಗಾಯತ ರಾಜಕಾರಣದ ದಾಳದಂತೆ ಕಾಣುವುದು ಸಹಜ. ಯಡಿಯೂರಪ್ಪನವರ ರಾಜೀನಾಮೆ, 500ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರ ಸಭೆ, ಆಗ್ರಹಗಳು ಎಲ್ಲವೂ ರಾಜ್ಯದ ಶೇ.17ರಷ್ಟಿರುವ ಮತಬ್ಯಾಂಕ್‌ನ ಬಗ್ಗೆ ಬಿಜೆಪಿಗೆ ಆತಂಕ ಹುಟ್ಟಿಸುವಂತಹ ಬೆಳವಣಿಗೆಗಳು ಇವೆಲ್ಲವೂ ಲೆಕ್ಕಾಚಾರದ ಭಾಗ. ಹಾಗೆ ನೋಡಿದರೆ ಲಿಂಗಾಯತರ ಮತ ಉಳಿಸಿಕೊಳ್ಳುವುದಕ್ಕೆ ಬಿಜೆಪಿ ಹಿರಿಯ, ಆರ್‌ಎಸ್‌ಎಸ್‌ನ ದೀರ್ಘಕಾಲದ ನಂಟಿರುವ ನಾಯಕರಿದ್ದರು. ಯತ್ನಾಳ್, ನಿರಾಣಿ, ಬೆಲ್ಲದ್ ಅವರ ಹೆಸರುಗಳೆಲ್ಲಾ ಕಳೆದ ಕೆಲವು ದಿನಗಳಿಂದ ಸುದ್ದಿಯಾಗಿರುವುದನ್ನು ಜನ ನೋಡಿದ್ದಾರೆ. ಆದರೂ ಅನುಭವ, ಆರ್‌ಎಸ್‌ಎಸ್ ಹಿನ್ನೆಲೆಗಳ ಲೆಕ್ಕ ಮೀರಿ ಬೊಮ್ಮಾಯಿ ಅವರು ಆಯ್ಕೆಯಾಗುವುದಕ್ಕೆ ಇನ್ನೂ ಬೇರೆ ಕಾರಣಗಳಿವೆ.

ಯಡಿಯೂರಪ್ಪ ಬಾಲ್ಯದಲ್ಲೇ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಬೆಳೆದರೂ, ಇಟ್ಟಿಗೆ ಹೊತ್ತರೂ, ರಥಯಾತ್ರೆಯಲ್ಲಿ ಮುಂದಿದ್ದರೂ, ಕೋಮುವಾದಿ ಎಂದು ಗುರುತಿಸಿಕೊಳ್ಳಲಿಲ್ಲ. ಕೇಸರಿ ಬದಲು ಹಸಿರು ಶಾಲು ಹೊದ್ದು ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿಯೇ ಉಳಿದಿದ್ದರು. ಹಿಂದುತ್ವದ ರಾಜಕಾರಣವನ್ನು ದೇಶದೆಲ್ಲೆಡೆ ಬಿತ್ತಿ ಬೆಳೆಯುವ ಉತ್ಸಾಹದಲ್ಲಿರುವ ಸಂಘಕ್ಕೆ ಕರ್ನಾಟಕದಲ್ಲೂ ತೀವ್ರ ಹಿಂದೂವಾದಿಯೊಬ್ಬರನ್ನು ಮುಖ್ಯಮಂತ್ರಿ ಮಾಡುವ ಆಸೆಯೂ ಇತ್ತು. ಇಂತಹ ಪ್ರಯೋಗ ಮಾಡುವುದಕ್ಕೆ ದಕ್ಷಿಣ ಭಾರತದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಹಾಗಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ಸಂಘದ ಪ್ರಮುಖರಾದ ಬಿ ಎಲ್ ಸಂತೋಷ್ ಅವರು ಯುವ ಹಾಗೂ ಹಿಂದುತ್ವದ ರಾಜಕಾರಣ ಮಾಡುವವರನ್ನು ಸಿಎಂ ಸ್ಥಾನಕ್ಕೆ ತಂದುಕೂರಿಸುವ ಉಮೇದಿಯಲ್ಲಿದ್ದರು. ಆದರೆ ಯಡಿಯೂರಪ್ಪನವರ ವರ್ಚಸ್ಸು ಮತ್ತು ಜಾತಿ ರಾಜಕಾರಣವನ್ನು ಒಡೆದು ಮುಖ್ಯಮಂತ್ರಿಯೊಬ್ಬರನ್ನು ತಂದು ಕೂರಿಸುವ ಕೆಲಸ ಮಾಡುವುದು ಅಷ್ಟು ಸುಲಭವಿರಲಿಲ್ಲ. ಜಾತಿ ಓಟುಗಳನ್ನು ಕಾಪಾಡಿಕೊಳ್ಳುವ ಜೊತೆಗೆ ಕರ್ನಾಟಕದಲ್ಲಿ ನೇರವಾಗಿ ಹಿಂದೂ ರಾಜಕಾರಣಕ್ಕೆ ಇಳಿಯುವ ಬಗ್ಗೆ ಇನ್ನೂ ಅಳುಕಿರುವ ಕಾರಣಕ್ಕೆ ಜನತಾ ಪರಿವಾರದಿಂದ ಬಂದ ಬಸವರಾಜ ಬೊಮ್ಮಾಯಿ ಇಂದು ಮುಖ್ಯಮಂತ್ರಿಯಾಗಿದ್ದಾರೆ!

ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್ ಆರ್ ಬೊಮ್ಮಾಯಿ ಜನತಾ ಪರಿವಾರದ ದೊಡ್ಡ ನಾಯಕ. ಬಹುಮತವಿದ್ದೂ ರಾಜ್ಯಪಾಲರು 1989ರಲ್ಲಿ ಎಸ್ ಆರ್ ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿದಾಗ ಕಾನೂನು ಹೋರಾಟ ನಡೆಸಿದವರು. ಅಸಾಮಾನ್ಯ ತೀರ್ಪಿಗೆ ಕಾರಣವಾದವರು. ಕ್ರಾಂತಿಕಾರಿಯೂ, ಎಡಪಂಥೀಯ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದ ಎಸ್ ಆರ್ ಬೊಮ್ಮಾಯಿ ಅಧಿಕಾರ ವಿಕೇಂದ್ರೀಕರಣ, ಸಾಮಾನ್ಯ ಪ್ರಜೆಗಳ ಕೈಬಲಪಡಿಸುವ ಸಿದ್ಧಾಂತವನ್ನು ಹುಟ್ಟುಹಾಕಿದ್ದರು.

ಇಂತಹ ತಂದೆಯ ನೆರಳಲ್ಲಿ ಬೆಳೆದ ಬಸವರಾಜ್ ಬೊಮ್ಮಾಯಿ ಎಂಜಿನಿಯರಿಂಗ್ ಓದಿ, ಉದ್ಯಮಶೀಲರಾಗುವ ತಯಾರಿಯಲ್ಲಿದ್ದರು. ಆದರೆ ಅವರ ಸೆಳೆತ ರಾಜಕೀಯವೇ ಆಗಿತ್ತು. ಯುವ ಜನತಾದಳದಿಂದ ರಾಜಕೀಯ ಜೀವನ ಆರಂಭ ಮಾಡಿದರು.

ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಬಸವರಾಜ್‌ ಬೊಮ್ಮಾಯಿ! | Naanu gauri

1996ರಲ್ಲಿ ಸಿಎಂ ಜೆ.ಹೆಚ್.ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1997, 2003ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆ ಆಗಿದ್ದರು. ಕೃಷಿ ಕ್ಷೇತ್ರದ ಬಗ್ಗೆ ಕಾಳಜಿ ಹೊಂದಿದ್ದ ಬಸವರಾಜ್ ಅವರು 2007ರಲ್ಲಿ 21 ದಿನಗಳ ಕಾಲ ರೈತರೊಂದಿಗೆ ಪಾದ ಯಾತ್ರೆ ನಡೆಸಿ ರೈತರ ಹೋರಾಟಕ್ಕೆ ಬಲ ತುಂಬಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಅಂದರೆ, 2008ರಲ್ಲಿ ಬಿಜೆಪಿಗೆ ಸೇರ್ಪಡೆ, ಅದೇ ವರ್ಷ ಶಿಗ್ಗಾಂವಿಯಿಂದ ವಿಧಾನಸಭೆಗೆ ಆಯ್ಕೆಯಾದರು. ನಂತರ ಸತತ ಮೂರು ಬಾರಿ ಯಶಸ್ವಿಯಾಗಿ ಆಯ್ಕೆಯಾದರು. ಬಿ.ಎಸ್.ವೈ, ಡಿ.ವಿ.ಎಸ್, ಶೆಟ್ಟರ್ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದರು.
ಯಡಿಯೂರಪ್ಪನವರ ಪರಮಾಪ್ತರಾಗಿ ಗುರುತಿಸಿಕೊಂಡು, ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಚಿವ ಸ್ಥಾನವನ್ನು ಖಚಿತವಾಗಿ ಪಡೆದುಕೊಂಡ ಬಸವರಾಜ್ ಬೊಮ್ಮಾಯಿ ವರ್ಚಸ್ಸಿಗೆ ಧಕ್ಕೆ ಬರದಷ್ಟು ಎಚ್ಚರವಹಿಸಿಕೊಂಡಿದ್ದರು. ಈ ಪ್ರಜ್ಞೆ ಎಷ್ಟರಮಟ್ಟಿಗೆ ಅವರು ಕಾಪಿಟ್ಟುಕೊಂಡಿದ್ದರೆಂದರೆ ಸ್ವತಃ ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ನಿಷ್ಠರೆನಿಸಿಕೊಂಡ ಅನೇಕರು ಹಿಂಬಾಲಿಸಿದರು. ಆದರೆ ಬಸವರಾಜ್ ಬಿಜೆಪಿಯಲ್ಲೇ ಉಳಿದರು. ಮುಂದೇನಾಯಿತು ಎಂಬುದನ್ನು ಹೇಳಬೇಕಿಲ್ಲ. ತಮ್ಮ ನಡೆನುಡಿಗಳ ಮೂಲಕ ಪಕ್ಷದಲ್ಲಿ ಒಂದು ತೂಕ ಉಳಿಸಿಕೊಂಡೇ ಬಂದ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪನವರ ಖಾಸಾ ಮನುಷ್ಯ ಎಂಬ ಇಮೇಜನ್ನೂ ಕಳೆದುಕೊಳ್ಳಲಿಲ್ಲ.
ಯಡಿಯೂರಪ್ಪನವರ ಮುಂಗೋಪವನ್ನು ಎಲ್ಲರೂ ಬಲ್ಲರು. ಕೋಪದಲ್ಲಿ ಹೊಡೆಯುತ್ತಾರೆ ಎಂಬದನ್ನೂ ಅವರ ಆಪ್ತವಲಯ ಮಾತಾಡಿಕೊಳ್ಳುತ್ತದೆ. ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಬೇಕು. 2011ರಲ್ಲಿ ನಡೆದಿದ್ದು. ಯಡಿಯೂರಪ್ಪನವರು ಪಕ್ಷ ತೊರೆಯುವ ಕಾಲ. ಪಕ್ಷದಲ್ಲಿ ತಮಗೆ ಬೆಂಬಲ ಪಡೆದುಕೊಳ್ಳಲು ಆಗ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದರು. ಆ ಹೊತ್ತಿಗೆ ಈಗ ನಡೆದಂತೆ ಅಧಿಕಾರದಿಂದ ಇಳಿಯಲು ಯಡಿಯೂರಪ್ಪನವರಿಗೆ ಸೂಚನೆ ಬಂದಾಗಿತ್ತು.

ನಾಯಕರ ಸಮರ್ಥನೆ ಪಡೆದು ಸ್ಥಾನ ಉಳಿಸಿಕೊಳ್ಳುವ ಕರಸತ್ತು ನಡೆದಿತ್ತು. ಆದರೆ ಯಡಿಯೂರಪ್ಪನವರಿಗೆ ನಾಯ್ಡು ಬೆಂಬಲಿಸಲಿಲ್ಲ. ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಅರುಣ್ ಜೇಟ್ಲಿ, ರಾಜ್‌ನಾಥ್ ಸಿಂಗ್ ಕೂಡ ಇದ್ದರು. ಕೋಪಿಸಿಕೊಂಡು ರೇಸ್ ರಸ್ತೆಯ ನಿವಾಸಕ್ಕೆ ಬಂದ ಯಡಿಯೂರಪ್ಪನವರು ಮಲಗಿದ್ದರಂತೆ. ಆಗ ಭುಜ ತಟ್ಟಿ ಎಬ್ಬಿಸಲು ಹೋದ ಸಚಿವರೊಬ್ಬರಿಗೆ ಕಪಾಳಕ್ಕೆ ಹೊಡೆದಿದ್ದರಂತೆ. ಇದಿಷ್ಟು ಇಂಡಿಯಾ ಟುಡೆಯ ವರದಿಯೊಂದು ವಿವರಿಸಿತ್ತು (2, ಆಗಸ್ಟ್ 2011). ಹಾಗೆ ಕಪಾಳಕ್ಕೆ ಹೊಡೆಸಿಕೊಂಡ ಸಚಿವರು ಬಸವರಾಜ್ ಬೊಮ್ಮಾಯಿ!

ಯಡಿಯೂರಪ್ಪನವರೊಂದಿಗೆ ವಿಶಿಷ್ಟ ಕೆಮಿಸ್ಟ್ರಿಯನ್ನು ಕಾಪಾಡಿಕೊಂಡ ಬಂದ ಬೊಮ್ಮಾಯಿ, ಸರ್ಕಾರದಲ್ಲಿ ಸದಾ ಸೂಕ್ತಸ್ಥಾನಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಜಾತಿ ಪ್ರೇಮದ ಜೊತೆಗೆ ವಿದ್ಯಾಭ್ಯಾಸ, ಉದ್ಯಮಶೀಲತೆಯ ಹಿನ್ನೆಲೆಯಿರುವ, ಶುದ್ಧ ವರ್ಚಿಸ್ಸಿನ ಬೊಮ್ಮಾಯಿ ಒಬ್ಬ ಮಹತ್ವಾಕಾಂಕ್ಷಿ ರಾಜಕಾರಣಿಯಂತೆ ಕಾಣುವುದಿಲ್ಲ. ಅವರ ಈ ಗುಣವನ್ನೇ ಯಡಿಯೂರಪ್ಪನವರು ತಮ್ಮ ರಾಜಕೀಯ ನಡೆಯೊಂದಿಗೆ ಸಮೀಕರಿಸಿ, ನಾಯಕತ್ವದ ಬದಲಾವಣೆಗೆ ಅನಿರೀಕ್ಷಿತ ತಿರುವು ನೀಡಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಅಜೆಂಡಾ ಜಾರಿಯಾಗುತ್ತದೆ ಎಂದು ನಿರೀಕ್ಷಿಸಿದವರಿಗೆ, ಪಕ್ಷದ ನಿಯಂತ್ರಣ ಬದಲಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ಯಡಿಯೂರಪ್ಪನವರು ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ.

ಮೂರು ವರ್ಷಗಳ ಹಿಂದೆ ಮಾಜಿ ಪ್ರಧಾನಿ ದಿವಂಗತ ಚಂದ್ರಶೇಖರ್ ಅವರ ’ದಿ ಲಾಸ್ಟ್ ಐಕಾನ್ ಆಫ್ ದಿ ಐಡಿಯಾಲಜಿಕಲ್ ಪಾಲಿಟಿಕ್ಸ್’ ಕೃತಿ ಬಿಡುಗಡೆ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ಸೂಕ್ಷ್ಮ ಮಾತುಗಳನ್ನಾಡಿದ್ದರು, “ರಾಜಕಾರಣ ಎಂದರೆ ಆಡಳಿತ ಪಕ್ಷ, ವಿರೋಧ ಪಕ್ಷವೆಂಬಂತಾಗಿದೆ. ರಾಜಕಾರಣ ಜನರಿಗಾಗಿ ಎಂಬುದು ಹಿನ್ನೆಲೆಗೆ ಸರಿದಿದ್ದು ಅದು ಜನರಿಗಾಗಿ ಎಂಬ ಬದಲಾವಣೆ ಆಗಬೇಕಿದೆ. ಇದರಿಂದ ಜನ ಭಾಗವಹಿಸುವಿಕೆಯ ರಾಜಕಾರಣ ದೇಶದಲ್ಲಿ ಆರಂಭವಾಗಬೇಕಾಗಿದೆ. ಜನರ ಭಾಗವಹಿಸುವಿಕೆಯ ರಾಜಕಾರಣ ದೇಶದಲ್ಲಿ ಆರಂಭವಾದಾಗ ಮಾತ್ರ ಪ್ರಜಾಪ್ರಭುತ್ವದ ಘನತೆ ಉಳಿಯಲು ಸಾಧ್ಯ. ತಂದೆ ಎಸ್ ಆರ್ ಬೊಮ್ಮಾಯಿ ಪ್ರತಿಪಾದಿಸಿದ ವಿಚಾರಗಳನ್ನೇ ಈ ಮಾತುಗಳು ಪ್ರತಿಫಲಿಸುತ್ತವೆ. ಸಾಮಾನ್ಯನ ಹಕ್ಕನ್ನು ಕಸಿಯುತ್ತಿರುವ, ಅಧಿಕಾರ ಕೇಂದ್ರೀಕರಿಸುವ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹತ್ತಿಕ್ಕುತ್ತಿರುವ ಪಕ್ಷವೊಂದರಲ್ಲಿರುವ ಬಸವರಾಜ್ ಬೊಮ್ಮಾಯಿ ಈ ಮಾತುಗಳನ್ನಾಡಿರುವುದು ಅಚ್ಚರಿಯೇ.

ಆರಂಭದಲ್ಲಿ ಹೇಳಿದಂತೆ ಆಷಾಢದ ಬಿರುಗಾಳಿಯಲ್ಲಿ ಧುತ್ತನೇ ಆಕಾಶಕ್ಕೆ ಹಾರಿದ್ದರೂ, ಸೂತ್ರ ಹಳೆಯ ಮರದ ಕೊಂಬೆಗೆ ಸುತ್ತಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದ ರಹಸ್ಯ!

  • ಕುಮಾರ್ ಎಸ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...