ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು-2021 ರ “ಮಧ್ಯವರ್ತಿಗಳ ಮಾರ್ಗದರ್ಶಿ ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್” ಗೆ ಅನುಸಾರವಾಗಿ ಜಾಗತಿಕ ಮಾಹಿತಿ ಕಂಪನಿಯಾದ ಗೂಗಲ್ ಬುಧವಾರ ತನ್ನ ಪಾರದರ್ಶಕತೆ ವರದಿಯನ್ನು ಬಿಡುಗಡೆ ಮಾಡಿದೆ. ಕಳೆದ ಏಪ್ರಿಲ್‌ನಲ್ಲಿ ಒಟ್ಟು 27,762 ದೂರುಗಳನ್ನು ಸ್ವೀಕರಿಸಿದ್ದು, 59,350 ಕಂಟೆಂಟ್‌ಗಳನ್ನು ತೆಗೆದು ಹಾಕಲಾಗಿದೆ ಎಂದು ಗೂಗಲ್ ಹೇಳಿದೆ.
“ನಾವು ಪ್ರಪಂಚದಾದ್ಯಂತ ವಿವಿಧ ರೀತಿಯ ವಿನಂತಿಗಳಿಗೆ ಪಾರದರ್ಶಕತೆಯನ್ನು ಒದಗಿಸುವ ಮತ್ತು ಅವುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬ ಬಗ್ಗೆ ದೀರ್ಘ ಇತಿಹಾಸವನ್ನು ಹೊಂದಿದ್ದೇವೆ. ಈ ಎಲ್ಲಾ ವಿನಂತಿಗಳನ್ನು ಟ್ರ್ಯಾಕ್ ಮಾಡಲಾಗಿದೆ. 2010 ರಿಂದ ಅಸ್ತಿತ್ವದಲ್ಲಿರುವ ಪಾರದರ್ಶಕತೆಯನ್ನು ವರದಿಯಲ್ಲಿ ಸೇರಿಸಲಾಗಿದೆ” ಎಂದು ಗೂಗಲ್ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ನಾವು ತಾಳ್ಮೆಯಿಂದಿದ್ದೇವೆ, ಆದರೆ ಮಿತಿ ಮೀರದಿರಿ’ – ರೈತರಿಗೆ ಎಚ್ಚರಿಕೆ ನೀಡಿದ ಹರಿಯಾಣ ಸಿಎಂ
“ಇದೆ ಮೊದಲ ಬಾರಿಗೆ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಮಾಸಿಕ ಪಾರದರ್ಶಕತೆ ವರದಿಯನ್ನು ಪ್ರಕಟಿಸುತ್ತೇವೆ. ಭಾರತಕ್ಕಾಗಿ ನಮ್ಮ ವರದಿ ಪ್ರಕ್ರಿಯೆಗಳನ್ನು ಪರಿಷ್ಕರಿಸುವುದರಿಂದ ಹೆಚ್ಚಿನ ವಿವರ ಪ್ರಕಟಿಸುವುದನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಒಕ್ಕೂಟ ಸರ್ಕಾರವು ಹೊಸ ಐಟಿ ನಿಯಮಗಳನ್ನು ಜಾರಿಗೆ ತಂದ ನಂತರ ತನ್ನ ಪಾರದರ್ಶಕತೆ ವರದಿಯನ್ನು ಪ್ರಕಟಿಸಿದ ಮೊದಲ ಜಾಗತಿಕ ಟೆಕ್ ಕಂಪೆನಿಯಾಗಿದೆ ಗೂಗಲ್.
ಹೊಸ ಐಟಿ ನಿಯಮಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಬೃಹತ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಪ್ರತಿ ತಿಂಗಳು ನಿಯಮಿತವಾಗಿ ಅನುಸರಣೆ ವರದಿಗಳನ್ನು ಪ್ರಕಟಿಸಬೇಕಾಗುತ್ತದೆ.
ಇದನ್ನೂ ಓದಿ: ಸುಳ್ಳನ್ನು ಎತ್ತಿ ತೋರಿಸಿದ್ದಕ್ಕೆ ಟ್ವಿಟರ್ ಅನ್ನು ಬೆದರಿಸುತ್ತಿರುವ ಒಕ್ಕೂಟ ಸರ್ಕಾರ!


