ನ್ಯೂಜೆರ್ಸಿ: ಸೆಪ್ಟೆಂಬರ್‌ನಲ್ಲಿ ನಡೆದ ಸಿಟಿ ಕೌನ್ಸಿಲ್ ಸಭೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಹಿಂದೂ ಮತೀಯವಾದಿಯ ಹೇಳಿಕೆಗೆ ನ್ಯೂಜೆರ್ಸಿಯ ಟೀನೆಕ್ ಟೌನ್‌ಶಿಪ್‌ನ ಮೇಯರ್ ಮತ್ತು ಇಬ್ಬರು ಸಿಟಿ ಕೌನ್ಸಿಲ್ ಸದಸ್ಯರು ವಿಷಾದ ವ್ಯಕ್ತಪಡಿಸಿದ್ದಾರೆ.
ಮತೀಯವಾದಿಗಳಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಈ ಭಾಷಣವು ರಾಜ್ಯಾದ್ಯಂತ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು.
ಮುಸ್ಲಿಂ ಸಮುದಾಯದ ವಿರುದ್ಧದ ದ್ವೇಷವನ್ನು ಖಂಡಿಸುವ ಅಧಿಕೃತ ಹೇಳಿಕೆಯನ್ನು ಅಕ್ಟೋಬರ್ 28 ರಂದು ಮೇಯರ್ ಜಿಮ್ ಡನ್ಲೆವಿ ಬಿಡುಗಡೆ ಮಾಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯು ತೀವ್ರತರವಾದದ್ದು. ಈ ಅಪಾಯಕಾರಿ ಮತೀಯವಾದಿಗಳಿಗೆ ಟೀನೆಕ್ ಅಥವಾ ನ್ಯೂಜೆರ್ಸಿಯಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಸ್ಪಷ್ಟಪಡಿಸಿರುವುದಾಗಿ ‘ಕ್ಲಾರಿಯಾನ್’ ಸುದ್ದಿ ಜಾಲತಾಣ ವರದಿ ಮಾಡಿದೆ.
ಅಕ್ಟೋಬರ್ 25ರಂದು ನಡೆದ ಸಿಟಿ ಕೌನ್ಸಿಲ್ ಸಭೆಯಲ್ಲಿ ಮೇಯರ್ ಮತ್ತು ಕೌನ್ಸಿಲ್ ಸದಸ್ಯರು ಜನರಲ್ಲಿ ಕ್ಷಮೆಯಾಚಿಸಿದ್ದರು. ಈ ಸಮಯದಲ್ಲಿ ಹಲವಾರು ಮುಸ್ಲಿಂ ಸದಸ್ಯರು, ಹಿಂದೂ ಉಗ್ರಗಾಮಿಗಳ ಮುಸ್ಲಿಂ ವಿರೋಧಿ ವರ್ತನೆ ಹಾಗೂ ವಿಷಕಾರಿ ಹೇಳಿಕೆಗಳ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
“ಇಸ್ಲಾಂ ವಿರುದ್ಧ ದ್ವೇಷ ಕಾರಿದ ವ್ಯಕ್ತಿಯನ್ನು ತಕ್ಷಣವೇ ತಡೆದು ನಿಲ್ಲಿಸಬೇಕಿತ್ತು” ಎಂದು ಕೌನ್ಸಿಲ್ಮನ್ ಕೀತ್ ಕಪ್ಲಾನ್ ಹೇಳಿದ್ದಾರೆ.
“ಹಿಂದೂ ರಾಷ್ಟ್ರೀಯತೆ ಒಂದು ಕೆಟ್ಟ ವಿಷಯ ಎಂದು ನನಗೆ ತಿಳಿದಿರಲಿಲ್ಲ. ಇಲ್ಲಿ ದಾಳಿಯಾಗಿದೆ ಅಥವಾ ತಪ್ಪಾಗಿ ಬಿಂಬಿಸಲಾಗಿದೆ ಎಂದು ಭಾವಿಸುವ ಪ್ರತಿಯೊಬ್ಬರಲ್ಲಿಯೂ ನಾನು ಕ್ಷಮೆಯಾಚಿಸುತ್ತೇನೆ” ಎಂದು ಕೌನ್ಸಿಲ್ವುಮನ್ ಕರೆನ್ ಒರ್ಗೆನ್ ತಿಳಿಸಿದ್ದಾರೆ.
ವಿವೇಕ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಸೆಪ್ಟೆಂಬರ್ 20, 2022ರಂದು ಕೌನ್ಸಿಲ್ ಸಭೆಯ ಸಮಯದಲ್ಲಿ ಮಾತನಾಡಿದ್ದನು. ಮತದಾರರಿಗಾಗಿ ಮೀಸಲಿಟ್ಟ ವೇದಿಕೆಯನ್ನು ಬಳಸಿಕೊಂಡ ಆತ ಮುಸ್ಲಿಮರನ್ನು ಭಯೋತ್ಪಾದಕರು ಮತ್ತು ಅತ್ಯಾಚಾರಿಗಳು ಎಂದು ಜರಿದಿದ್ದನು. ಮುಸ್ಲಿಮರು 9/11ರ ಘಟನೆಯನ್ನು ‘ಆನಂದಿಸಿದ್ದಾರೆ’ ಮತ್ತು ದೇಶಗಳನ್ನು ‘ನಾಶ’ ಮಾಡಲು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತಕ್ಕೆ ವಲಸೆ ಬಂದಿದ್ದಾರೆ ಎಂದು ಆರೋಪಿಸಿದ್ದನು.
This speech wasn't delivered at Dharam Sansad in India but at a city council in New Jersey 👇🏽
A Hindu Supremacist in Teaneck, New Jersey, took the podium allotted for constituents during a council meeting & delivered an anti-Muslim hate speech referring Muslims as terrorists. pic.twitter.com/FPQNw4lBCy
— Indian American Muslim Council (@IAMCouncil) November 3, 2022
“ನೀವು ದೇಶದಲ್ಲಿ (ಭಾರತ) ನಡೆಯುವ ಅತ್ಯಾಚಾರದ ಬಗ್ಗೆ ಮಾತನಾಡುತ್ತೀರಿ. ಅವು ಮುಸ್ಲಿಮರಿಂದ ನಡೆಯುತ್ತಿವೆ. ಈ ಮುಸ್ಲಿಮರು ಎಲ್ಲ ಹುಡುಗಿಯನ್ನು ಸೆಳೆದುಕೊಳ್ಳುತ್ತಾರೆ. ಎಲ್ಲರನ್ನೂ ಮತಾಂತರ ಮಾಡಲು ಪ್ರಯತ್ನಿಸುತ್ತಾರೆ. ನಂತರ ಅವರು ಮಕ್ಕಳನ್ನು ಮಾಡಿ, ಹುಡುಗಿಯರನ್ನು ಕೊಲ್ಲುತ್ತಾರೆ” ಎಂದು ಮಾತನಾಡಿದ್ದನು.
ಭಾರತದಲ್ಲಿ ಹಿಂಸಾತ್ಮಕ ಧೋರಣೆಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳು ಹಾಗೂ ಅವುಗಳೊಂದಿಗೆ ಸಂಬಂಧ ಹೊಂದಿರುವ ಯುಎಸ್ ಮೂಲದ ಹಿಂದೂ ಬಲಪಂಥೀಯ ಗುಂಪುಗಳ ಬಗ್ಗೆ ತನಿಖೆಗೆ ಒತ್ತಾಯಿಸುವ ನಿರ್ಣಯವನ್ನು ಟೀನೆಕ್ ಡೆಮಾಕ್ರಟಿಕ್ ಮುನ್ಸಿಪಲ್ ಕಮಿಟಿ (ಟಿಡಿಎಂಸಿ) ಅಂಗೀಕರಿಸಿದ ನಂತರ ಈ ಟೀಕೆಗಳನ್ನು ವಿವೇಕ್ ಮಾಡಿದ್ದನು.
ಇದನ್ನೂ ಓದಿರಿ: ಬೆಂಗಳೂರು: ‘ಬಿಟ್ಟಿ ಚಾಕರಿ’ಯಿಂದ ನೊಂದ ಮಸಣ ಕಾರ್ಮಿಕರು ಸಂಘಟಿತರಾಗುವತ್ತ ಹೆಜ್ಜೆ
ವಿವೇಕ್ ಮಾಡಿದ ಮುಸ್ಲಿಂ ವಿರೋಧಿ ಟೀಕೆಗಳನ್ನು ಕೌನ್ಸಿಲ್ ಖಂಡಿಸಲು ವಿಫಲವಾದ ನಂತರ, ಹಲವಾರು ಮುಸ್ಲಿಂ ಟೀನೆಕ್ ನಿವಾಸಿಗಳು ಮತ್ತು ಸ್ನೇಹಿತರು ಆಕ್ರೋಶ ಹೊರಹಾಕಿದ್ದರು. ಅಕ್ಟೋಬರ್‌ನ ಸಿಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿ, ಮುಸ್ಲಿಂ ವಿರೋಧಿ ದ್ವೇಷದ ಭಾಷಣದ ವಿರುದ್ಧ ಕೌನ್ಸಿಲ್‌ನ ನಿಷ್ಕ್ರಿಯತೆಯನ್ನು ಖಂಡಿಸಿದ್ದರು.
ಕೌನ್ಸಿಲ್ಮನ್ ಕಪ್ಲಾನ್ ಮಾತನಾಡಿ, “ತಪ್ಪು ಮಾಹಿತಿಯನ್ನು ಹರಡುವ ಯಾರನ್ನಾದರೂ ನಿಲ್ಲಿಸುವುದಾಗಿದ್ದರೆ ಕಳೆದ ತಿಂಗಳು ನೀವು ಎಲ್ಲಿದ್ದೀರಿ? ಮುಸ್ಲಿಮರು 9/11 ಅನ್ನು ಆನಂದಿಸಿದ್ದಾರೆ. ಅವರು ಕ್ರಿಶ್ಚಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡುತ್ತಾರೆ. ಮಕ್ಕಳನ್ನು ಮಾಡಿ ಕೊಲ್ಲುತ್ತಾರೆ ಎಂದು ಹಿಂದೂ ಉಗ್ರಗಾಮಿ ಹೇಳುತ್ತಿದ್ದನು. ಇದು ಸ್ಪಷ್ಟ ತಪ್ಪು ಮಾಹಿತಿಯಲ್ಲವೇ?” ಎಂದು ಕೇಳಿದ್ದರು.


