Homeಕರ್ನಾಟಕಬೆಂಗಳೂರು: ‘ಬಿಟ್ಟಿ ಚಾಕರಿ’ಯಿಂದ ನೊಂದ ಮಸಣ ಕಾರ್ಮಿಕರು ಸಂಘಟಿತರಾಗುವತ್ತ ಹೆಜ್ಜೆ

ಬೆಂಗಳೂರು: ‘ಬಿಟ್ಟಿ ಚಾಕರಿ’ಯಿಂದ ನೊಂದ ಮಸಣ ಕಾರ್ಮಿಕರು ಸಂಘಟಿತರಾಗುವತ್ತ ಹೆಜ್ಜೆ

ಮಸಣ ಕಾರ್ಮಿಕರು ಎದುರಿಸುವ ಸವಾಲುಗಳು ಅನೇಕ. ಸರ್ಕಾರದಿಂದ ಈ ದಲಿತರಿಗೆ ವೇತನ ನಿಗದಿಯಾಗಬೇಕಿದೆ.

- Advertisement -
- Advertisement -

ಉತ್ತರ ಕರ್ನಾಟಕದ ಅನೇಕ ದಲಿತ ಕಾರ್ಮಿಕರನ್ನು ‘ಬಿಟ್ಟಿ ಚಕ್ರಿ’ ಎಂಬ ಜೀತಗಾರಿಕೆಗೆ ತಳ್ಳಲಾಗಿದೆ. ಸ್ಮಶಾನದಲ್ಲಿ ಹೆಣಗಳನ್ನು ಸುಡುವ ಇಂತಹ ಅನೇಕ ಕಾರ್ಮಿಕರು ಯಾವುದೇ ಆದಾಯವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಈ ಅನ್ಯಾಯದ ವಿರುದ್ಧ ತಾವೇ ಸಂಘಟಿತರಾಗಿ ತಮ್ಮ ದನಿ ಎತ್ತಲು ಮುಂದಾಗಿದ್ದಾರೆ.

ವಿಜಯನಗರ ಜಿಲ್ಲೆಯ ಆದಿ ಕರ್ನಾಟಕ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದ ಏಣಗಿ ಸಣ್ಣಹನುಮಂತಪ್ಪ (50) ಅವರು ‘ನ್ಯೂಸ್‌ಕ್ಲಿಕ್‌’ ಜಾಲತಾಣದೊಂದಿಗೆ ಮಾತನಾಡಿದ್ದು, ತಮ್ಮ ಬದುಕು- ಬವಣೆ ಹಾಗೂ ಸಂಘಟನೆಯ ಕುರಿತು ವಿವರಿಸಿದ್ದಾರೆ.

“ಹಲವು ಶತಮಾನಗಳಿಂದ ಮಸಣ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ, ಇಷ್ಟು ದಿನ ವೇತನ ಇಲ್ಲದೇ ಕೆಲಸ ಮಾಡಿದ್ದೇವೆ, ಈಗ ಸರಕಾರ ನಮ್ಮ ದುಡಿಮೆಗೆ ತಕ್ಕ ವೇತನ ನೀಡಬೇಕು” ಎಂದು ಆಗ್ರಹಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ದಲಿತ ಕಾರ್ಮಿಕರು ಮಾಡುವ ಕೆಲಸಕ್ಕೆ ಸರ್ಕಾರದಿಂದ ಯಾವುದೇ ಹಣ ಸಂದಾಯವಾಗುತ್ತಿಲ್ಲ. ಯಾರಾದರೂ ಒಬ್ಬ ವ್ಯಕ್ತಿ ಸತ್ತಾಗ ದೇಹವನ್ನು ವಿಲೇವಾರಿ ಮಾಡಲು ಈ ಕಾರ್ಮಿಕರನ್ನು ಕರೆಸಲಾಗುತ್ತದೆ. ಸಾವಿಗೀಡಾದ ವ್ಯಕ್ತಿಯ ಕುಟುಂಬವು ಈ ಕಾರ್ಮಿಕರಿಗೆ ಕೊಡಬೇಕಾದ ಕೂಲಿಯನ್ನು ನಿರ್ಧರಿಸುತ್ತದೆ.

ಈ ಕೆಲಸ ಜಾತಿ ಆಧಾರಿತ, ಪಾರಂಪರಿಕ ದುಡಿಮೆಯಾಗಿ ಬೆಳೆದುಬಿಟ್ಟಿದೆ. ಬೇರೆ ಯಾವುದೇ ಸಮುದಾಯದವರು ಈ ಕೆಲಸ ಮಾಡಲು ಸಿದ್ಧರಿಲ್ಲ. ‘ಬಿಟ್ಟಿ ಚಕ್ರಿ’ ಎಂದು ಕರೆಯಲ್ಪಡುವ ಈ ಪದ್ಧತಿಯು ಉತ್ತರ ಕರ್ನಾಟಕದಲ್ಲಿ ಪ್ರಚಲಿತದಲ್ಲಿದೆ. ಕಾರ್ಮಿಕರನ್ನು ಜೀತಗಾರಿಕೆಗೆ ತಳ್ಳಲಾಗಿದೆ. ಶವಗಳನ್ನು ಹೂಳಲು ಗುಂಡಿ ತಗೆಯುತ್ತಾರೆ. ಆದರೆ ಇವರಿಗೆ ಸಿಗುವ ಕೂಲಿ ಯಾವಾಗಲೂ ಅತ್ಯಲ್ಪ.

ಈ ಕಾರ್ಮಿಕರು ತಮ್ಮ ಕೆಲಸದ ಸಮಯದಲ್ಲಿ ಹಲವಾರು ದೌರ್ಜನ್ಯಗಳಿಗೆ ಒಳಗಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸ್ಮಶಾನ ಭೂಮಿಯನ್ನು ಕೆಲವರು ಅತ್ರಿಕ್ರಮಣ ಮಾಡುತ್ತಾರೆ. ಹೀಗಾಗಿ ಸಮಾಧಿಗಳಿಗೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಮಸಣ ಕಾರ್ಮಿಕರು ಹಳೆಯ ಸಮಾಧಿಗಳನ್ನು ಅಗೆದು ಕೊಳೆತ ಅಥವಾ ಅರ್ಧ ಕೊಳೆತ ಶವಗಳನ್ನು ಕೈಯಿಂದ ಹೊರಗೆಳೆಯುತ್ತಾರೆ. ಹೊಸ ಶವಕ್ಕೆ ಹಳೆಯ ಸಮಾಧಿಯನ್ನು ಬಳಸುತ್ತಾರೆ. ನಂತರ ಕೊಳೆತ ದೇಹವನ್ನು ಹತ್ತಿರದ ಹೊಲಕ್ಕೆ ಒಯ್ದು ಸುಡಲಾಗುತ್ತದೆ. ಇದಕ್ಕಾಗಿ ಕೈಗವಸು ಅಥವಾ ವಿಶೇಷ ಉಪಕರಣಗಳನ್ನು ಬಳಸುವುದಿಲ್ಲ ಎಂದು ಸಣ್ಣಹನುಮಂತಪ್ಪ ಹೇಳುತ್ತಾರೆ.

ಒಂಟಿಯಾಗಿ ವಾಸಿಸುತ್ತಿದ್ದ ಅನೇಕ ಜನರು ಸಾವನ್ನಪ್ಪಿದ ನಿದರ್ಶನಗಳನ್ನು ಕೋವಿಡ್ ಸಂದರ್ಭದಲ್ಲಿ ಈ ಮಸಣ ಕಾರ್ಮಿಕರು ಎದುರಿಸಿದ್ದಾರೆ. ಯಾವುದೇ ವೇತನವಿಲ್ಲದೆ ಇಂತಹ ಕೊಳೆತ ಶವಗಳನ್ನು ವಿಲೇವಾರಿ ಮಾಡಿದ ಉದಾಹರಣೆಗಳಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಬರ ಮತ್ತು ಮಳೆಗೆ ಸಂಬಂಧಿಸಿದಂತೆ ಹಲವಾರು ಮೂಢನಂಬಿಕೆಗಳಿವೆ. ಬರಗಾಲದ ಸಂದರ್ಭದಲ್ಲಿ ಸ್ಥಳೀಯರು ಮಳೆಗಾಗಿ ಪ್ರಾರ್ಥಿಸಿ ಕೆಲವು ಆಚರಣೆಗಳನ್ನು ಹಮ್ಮಿಕೊಳ್ಳುತ್ತಾರೆ. ಕಪ್ಪೆ ಮೆರವಣಿಗೆ, ಕತ್ತೆ ಮೆರವಣಿಗೆ, ಭಜನೆ ಓದುವುದು, ಪುರಾಣ ಓದುವುದು ಇತ್ಯಾದಿ ಮಾಡುತ್ತಾರೆ. ಬರ ನೀಗುವುದೆಂದು ಇವುಗಳನ್ನು ಹಮ್ಮಿಕೊಳ್ಳುತ್ತಾರೆ. ಅದೇ ರೀತಿ ಮೃತ ದೇಹವು ಸಂಪೂರ್ಣವಾಗಿ ಕೊಳೆಯದಿದ್ದಾಗ ಬರಗಾಲ ಉಂಟಾಗುತ್ತದೆ ಎಂಬ ಮೂಢನಂಬಿಕೆಯೂ ಇದೆ. ಆದ್ದರಿಂದ ಎಲ್ಲಾ ಸಮಾಧಿಗಳನ್ನು ಮತ್ತೆ ಅಗೆದು, ದೇಹಗಳನ್ನು ಪರೀಕ್ಷಿಸುವಂತೆ ಈ ಕಾರ್ಮಿಕರ ಮೇಲೆ ಒತ್ತಡ ಹೇರಿದ ನಿದರ್ಶನಗಳಿವೆ. ಯಾವುದಾದರೂ ಶವ ಸಾಕಷ್ಟು ಕೊಳೆಯದಿದ್ದರೆ, ಅಂತಹ ದೇಹವನ್ನು ಹೊರಗೆಳೆದು ಬಿಟ್ಟಿಯಾಗಿ ಸುಡಬೇಕಾಗುತ್ತದೆ.

ಸಣ್ಣಹನುಮಂತಪ್ಪ ಮಾತು ಮುಂದುವರಿಸುತ್ತಾ, “ನನ್ನ ಅಪ್ಪ, ತಾತ ಈ ಕೆಲಸ ಮಾಡ್ತಾ ಇದ್ದರು. ಈಗ ನಾನೂ ಮಾಡ್ತಾ ಇದ್ದೀನಿ. ಆದ್ರೆ ಮಗ ಈ ಕೆಲಸ ಮಾಡೋದು ಬೇಡ” ಎನ್ನುತ್ತಾರೆ.

ಮಂಗಳವಾರ ಬೆಂಗಳೂರಿನ ಇಎಂಎಸ್ ಭವನದಲ್ಲಿ ಸ್ಮಶಾನದ ಕಾರ್ಮಿಕರು ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಿದರು. ತಮ್ಮನ್ನು ಸಫಾಯಿ ಕರ್ಮಚಾರಿಗಳೆಂದು ಗುರುತಿಸಬೇಕು, ಮೃತ ದೇಹಗಳನ್ನು ಹೂಳಲು ಮತ್ತು ವಿಲೇವಾರಿ ಮಾಡಲು ಯೋಗ್ಯವಾದ ವೇತನವನ್ನು ನಿಗದಿಪಡಿಸಬೇಕು ಎಂದು ಆಶಿಸಿದರು. ‘ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘಟನೆ’ ಎಂಬ ಬ್ಯಾನರ್ ಅಡಿಯಲ್ಲಿ ಈ ಕಾರ್ಯಕರ್ತರನ್ನು ಸಂಘಟಿಸುತ್ತಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಈ ಸಭೆಯನ್ನು ಹಮ್ಮಿಕೊಂಡಿತ್ತು.

ದೇವದಾಸಿಯರೊಂದಿಗೆ ಕೆಲಸ ಮಾಡುತ್ತಿರುವ ಸಿಪಿಐ(ಎಂ) ಸಂಘಟಕಿ ಬಿ.ಮಾಳಮ್ಮ ಅವರೊಂದಿಗೆ ಸಂವಾದ ನಡೆಸಿದ ನಂತರ ಮಸಣ ಕಾರ್ಮಿಕರು ಒಗ್ಗೂಡಲು ನಿರ್ಧರಿಸಿದ್ದಾರೆ. ಒಗ್ಗೂಡಿ ಸಂಘ ರಚಿಸುವ ಆಲೋಚನೆ ಬಂದಿದೆ ಎಂದು ಸಣ್ಣಹನುಮಂತಪ್ಪ ವಿವರಿಸಿದ್ದಾರೆ.

ಇದನ್ನೂ ಓದಿರಿ: ಬೆಂಗಳೂರು: ದೇವಾಲಯಗಳಲ್ಲಿ ಚಪ್ಪಲಿ ಕಾಯುವ ಕೆಲಸ ಪರಿಶಿಷ್ಟರಿಗೆ ಮೀಸಲು; ವಿರೋಧದ ಬಳಿಕ ಟೆಂಡರ್‌ ರದ್ದು

“ಮಾಳಮ್ಮ ಅಕ್ಕ ನಮ್ಮ ಹಳ್ಳಿಗಳಿಗೆ ಬಂದು ಮಸಣ ಕಾರ್ಮಿಕರ ಸಮೀಕ್ಷೆ ಮಾಡಿಸಿದರು. ಒಗ್ಗೂಡಿ ಸಂಘ ಕಟ್ಟಿದರೆ ಸರಕಾರದ ಮುಂದೆ ನಿಮ್ಮ ಬೇಡಿಕೆಗಳನ್ನು ಇಡಬಹುದು ಎಂದು ಹೇಳಿದ್ದರು. ಮಾಳಮ್ಮ ಅಕ್ಕನಿಗಿಂತ ಮುಂಚೆ ಯಾರೂ ನಮ್ಮ ಬಗ್ಗೆ ವಿಚಾರಿಸಿದವರಿಲ್ಲ” ಎಂದಿದ್ದಾರೆ.

ಅಂತಹ ದುರ್ಬಲ ಕಾರ್ಮಿಕರಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ಮಾಳಮ್ಮ ಅವರು 2014ರಲ್ಲಿ ವಹಿಸಿಕೊಂಡರು. ಅವರು ಅನುಭವಿ ಸಂಘಟಕಿ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿಯೂ ಹೌದು.

‘ನ್ಯೂಸ್‌ಕ್ಲಿಕ್‌’ನೊಂದಿಗೆ ಮಾತನಾಡಿರುವಅವರು, “ಸಮಾಧಿಯನ್ನು ತೋಡುವುದನ್ನು ಹೊರತುಪಡಿಸಿ ಅನೇಕ ಕೆಲಸಗಳನ್ನು ಈ ಕಾರ್ಮಿಕರು ಮಾಡುತ್ತಾರೆ. ಶವಕ್ಕೆ ಸಂಬಂಧಿಸಿದ ಕೊಳಕಾದ ವಸ್ತುಗಳನ್ನೂ ವಿಲೇವಾರಿ ಮಾಡಬೇಕಾಗಿರುತ್ತದೆ. ಶವದೊಂದಿಗೆ ವಿಧಿ ವಿಧಾನಗಳಲ್ಲಿ ಬಳಸುವ ಹಣ್ಣು-ಹಂಪಲುಗಳನ್ನು ವಿಲೇವಾರಿ ಮಾಡಬೇಕಿರುತ್ತದೆ. ಶವ ಸಂಸ್ಕಾರಕ್ಕೆ ಬೇಕಾದ ಸೌದೆಯನ್ನು ಕಾಡಿಗೆ ಹೋಗಿ ಕಡಿದು ತರಬೇಕಿರುತ್ತದೆ. ಇವರಿಗೆ ಯಾವುದೇ ವಾಹನ ಸೌಲಭ್ಯವೂ ಇಲ್ಲದೆ ತಲೆಯ ಮೇಲೆ ಕಟ್ಟಿಗೆಗಳನ್ನು ಹೊತ್ತು ಸಾಗಿಸಬೇಕಾಗುತ್ತದೆ” ಎಂದಿದ್ದಾರೆ.

ವರದಿ ಕೃಪೆ: ನ್ಯೂಸ್‌ಕ್ಲಿಕ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’: ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ದ್ವೇಷ ಭಾಷಣಕ್ಕೆ ವ್ಯಾಪಕ ಆಕ್ರೋಶ

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’ ಎಂಬ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಯು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆಯು...

ತಪ್ಪಾಗಿ ಸುದ್ದಿ ಪ್ರಕಟ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

ತಮ್ಮ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಅಧಿಕೃತವಾಗಿ ಕ್ಷಮೆಯಾಚಿಸಿದರೂ, ಅದರಿಂದ ಈಗಾಗಲೇ ಉಂಟಾಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ....