Homeಚಳವಳಿಅನುಮತಿ ನಿರಾಕರಿಸಿದರೂ ಪಠ್ಯ ಬಳಕೆ: ಸರ್ಕಾರದ ನಡೆಗೆ ಲೇಖಕಿ ರೂಪ ಹಾಸನ ಖಂಡನೆ

ಅನುಮತಿ ನಿರಾಕರಿಸಿದರೂ ಪಠ್ಯ ಬಳಕೆ: ಸರ್ಕಾರದ ನಡೆಗೆ ಲೇಖಕಿ ರೂಪ ಹಾಸನ ಖಂಡನೆ

- Advertisement -
- Advertisement -

ಬಿಜೆಪಿ ಸರ್ಕಾರದ ಪಠ್ಯ ಪರಿಷ್ಕರಣೆ ಆವಾಂತರ ಮತ್ತೆ ಮುಂದುವರೆದಿದೆ. ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿ ತಮ್ಮ ಪಠ್ಯಗಳನ್ನು ಬೋದಿಸಬಾರದೆಂದು ಅನುಮತಿ ನಿರಾಕರಿಸಿದ್ದ ಲೇಖಕರ ಪಠ್ಯಗಳನ್ನು ಬೋದಿಸುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಮತ್ತೆ ಅದೇ ಪಠ್ಯಗಳನ್ನು ಮುಂದುವರೆಸುತ್ತಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅನುಮತಿ ನಿರಾಕರಿಸಿದರೂ ತಮ್ಮ ಪಠ್ಯ ಬಳಕೆ ಮುಂದುವರೆಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಕನ್ನಡದ ಕವಯತ್ರಿ, ಲೇಖಕಿ ರೂಪ ಹಾಸನರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಒಪ್ಪಿಗೆ ಇಲ್ಲದಿದ್ದರೂ, ನನ್ನ ಪದ್ಯವನ್ನು ಪಠ್ಯಕ್ಕೆ ಬಳಸಿಕೊಳ್ಳಲು ನಿರ್ಧರಿಸಿರುವ ಸರ್ಕಾರದ ಏಕಪಕ್ಷೀಯ ತೀರ್ಮಾನದ, ಈ ಆಗ್ರಹಪೂರ್ವಕ ನಡೆ ತೀವ್ರ ಜುಗುಪ್ಸೆ ಹುಟ್ಟಿಸಿದೆ. ಇದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ರೂಪ ಹಾಸನರವರು ತಮ್ಮ “ಅಮ್ಮನಾಗುವುದೆಂದರೆ” ಎಂಬ ಕವಿತೆಯನ್ನು ಪರಿಷ್ಕೃತ 9 ನೆಯ ತರಗತಿಯ ಪಠ್ಯದಿಂದ ಕೈಬಿಡಿ ಎಂದು 31.5.2022ರಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್‌ಗೆ ಪತ್ರ ಬರೆದಿದ್ದರು. ಆದರೆ ಅದನ್ನು ಮುಂದುವರೆಸಿರುವುದರ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ಪುನರ್ ರಚನಾ ಸಮಿತಿ 2017-18”ರ ಅಪೇಕ್ಷೆಯಂತೆ, ಪಠ್ಯಪುಸ್ತಕಕ್ಕೆ ನನ್ನ ಪದ್ಯವನ್ನು ಅಳವಡಿಸಿಕೊಳ್ಳಲು ಈ ಹಿಂದೆ ಅನುಮತಿಯನ್ನು ನೀಡಿದ್ದೆ. ಆದರೆ ಇದೇ 2022-23ನೇ ಸಾಲಿನಲ್ಲಿ ಪಠ್ಯ ಪುಸ್ತಕಗಳ “ಪುನರ್ ಪರಿಶೀಲನೆ”ಗೆ ಸರ್ಕಾರದಿಂದ ಅನುಮತಿ ಪಡೆದ ಸಮಿತಿಯು, ನಮ್ಮ “ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005″ರ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಮನಬಂದಂತೆ ಹಲವು ತಿದ್ದುಪಡಿ, ಗೊಂದಲ ಪೂರಿತ/ಅನವಶ್ಯಕ ಮಾರ್ಪಾಡುಗಳನ್ನು ಮಾಡಿರುವುದಕ್ಕೆ ನನ್ನ ವಿರೋಧವಿದೆ. ಪ್ರತಿರೋಧದ ಉದ್ದೇಶದಿಂದ ನನ್ನ ಪದ್ಯ ಬೋಧನೆಗೆ ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆದು, ಈ ಕುರಿತು ವಿವರವಾದ ಪತ್ರವನ್ನು 31.5.2022ರಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ಬರೆದಿದ್ದೆ. ಈ ಸಂಬಂಧ ಸಾರ್ವಜನಿಕರಿಂದ ನಡೆದ ಅನೇಕ ಬಗೆಯ ತೀವ್ರ ಪ್ರತಿರೋಧಗಳನ್ನು ನಿರ್ಲಕ್ಷಿಸಿದ ಸರ್ಕಾರ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದಲಾದರೂ ದೋಷಪೂರಿತ ಪಠ್ಯಪುಸ್ತಕಗಳನ್ನು ಹಿಂಪಡೆಯದೇ ಮುಂದುವರಿಸಿರುವುದು ಅಕ್ಷಮ್ಯ” ಎಂದಿದ್ದಾರೆ.

“ಹೀಗಾಗಿ ನನ್ನ ಪದ್ಯ ಬಳಕೆಗೆ ಅನುಮತಿಯನ್ನು ಬಯಸಿ 16.8.2022ರಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಂದ ಪತ್ರ ಬಂದಾಗಲೂ ಅನುಮತಿಯನ್ನು ಖಡಾಖಂಡಿತವಾಗಿ ನಿರಾಕರಿಸಿ 26.8.2022ರಂದು ಮರುಪತ್ರ ಬರೆದಿದ್ದೆ. ನನ್ನಂತೆಯೇ ಹಲವು ಲೇಖಕರು “ಪುನರ್ ಪರಿಶೀಲನಾ ಸಮಿತಿ”ಯ ನಡೆಯನ್ನು ಪ್ರತಿರೋಧಿಸಿ ಪಠ್ಯವನ್ನು ಹಿಂಪಡೆದಿದ್ದನ್ನು, ಮತ್ತೊಮ್ಮೆ ಖಚಿತ ಪಡಿಸಿಕೊಂಡ ಸರ್ಕಾರವು ಅದನ್ನು ಮನ್ನಿಸಿ ಪಠ್ಯಪುಸ್ತಕದಿಂದ ನಮ್ಮ ಪಠ್ಯವನ್ನು ಕೈಬಿಟ್ಟು 23.9.2022ರಂದು ಆದೇಶ ಹೊರಡಿಸಿದ್ದು ಮಾಧ್ಯಮಗಳಿಂದ ತಿಳಿದು ಕೊಂಚ ಸಮಾಧಾನವಾಗಿತ್ತು. ಆದರೆ ಲೇಖಕರ ಆಗ್ರಹದಂತೆ ಕೈ ಬಿಟ್ಟಿದ್ದ ಪಠ್ಯಗಳನ್ನು, ನಮ್ಮ ಅನುಮತಿ ಇಲ್ಲದೇ ಮರು ಸೇರ್ಪಡೆ ಮಾಡಿಕೊಂಡಿರುವುದಾಗಿ ಸರ್ಕಾರವು 28.10.2022ರಂದು ಮತ್ತೆ ಆದೇಶ ಹೊರಡಿಸಿರುವುದು ಮಾಧ್ಯಮಗಳಿಂದ ತಿಳಿದು ಬಂದು ಆಘಾತವಾಯ್ತು” ಎಂದು ರೂಪ ಹಾಸನರವರು ಆಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ ಮಹಿಳಾ ಸಂಕುಲಕ್ಕೆ ಅವಮಾನ: ಪಠ್ಯದಿಂದ ತಮ್ಮ ಕವಿತೆ ಕೈಬಿಡುವಂತೆ ಲೇಖಕಿ ರೂಪ ಹಾಸನ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರ ತರದಂತೆ ಸೂಚಿಸಿದ ಶಾಲೆ: ಆರೋಪ

0
ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರವನ್ನು ತರದಂತೆ ನಿಷೇಧಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಗೆಗಿನ ಆರೋಪವನ್ನು ಶಾಲೆಯ ಮುಖ್ಯೋಪಾಧ್ಯಾಯರು ನಿರಾಕರಿಸಿದ್ದಾರೆ. ಕಥೆಗಾರ ಮತ್ತು ಚಿತ್ರಕಥೆಗಾರ, ದರಾಬ್...