Homeಮುಖಪುಟಪಾಕಿಸ್ತಾನ ಮೂಲದ ಸಾದಿಕ್ ಖಾನ್ 3ನೇ ಬಾರಿಗೆ ಲಂಡನ್ ಮೇಯರ್ ಆಗಿ ಆಯ್ಕೆ

ಪಾಕಿಸ್ತಾನ ಮೂಲದ ಸಾದಿಕ್ ಖಾನ್ 3ನೇ ಬಾರಿಗೆ ಲಂಡನ್ ಮೇಯರ್ ಆಗಿ ಆಯ್ಕೆ

- Advertisement -
- Advertisement -

ಪಾಕಿಸ್ತಾನ ಮೂಲದ ಲೇಬರ್ ಪಕ್ಷದ ಸಾದಿಕ್ ಖಾನ್ ಅವರು ಮೂರನೇ ಬಾರಿಗೆ ಇಂಗ್ಲೆಂಡ್ ರಾಜಧಾನಿ ಲಂಡನ್ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್‌ನಾದ್ಯಂತ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಲೇಬರ್ ಪಕ್ಷ ಪ್ರಾಬಲ್ಯ ಸಾಧಿಸಿದ್ದು, ಕನ್ಸರ್ವೇಟಿವ್ ಪಕ್ಷ ಹಿನ್ನಡೆ ಅನುಭವಿಸಿದೆ.

ಮೇ 2016ರಲ್ಲಿ ಮೊದಲ ಬಾರಿಗೆ ಲಂಡನ್ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದ ಸಾದಿಕ್ ಖಾನ್ ಅವರು ಕನ್ಸರ್ವೇಟಿವ್ ಪಕ್ಷದ ತಮ್ಮ ಪ್ರತಿ ಸ್ಪರ್ಧಿ ಸೂಸನ್ ಹಾಲ್ ಅವರನ್ನು 2,76000 ಕ್ಕಿಂತ ಹೆಚ್ಚು ಮತಗಳಿಂದ ಸೋಲಿಸಿದ್ದರು.

ಈ ಬಾರಿಯೂ ಶೇ. 43.7ರಷ್ಟು ಮತಗಳನ್ನು ಪಡೆದ ಸಾದಿಕ್ ಖಾನ್, ಸೂಸನ್ ಹಾಲ್ ಅವರನ್ನು ಶೇ. 11ರಷ್ಟು ಮತಗಳ ಅಂತರದಿಂದ ಸೋಲಿಸಿದ್ದಾರೆ.

ವಿಜಯದ ಬಳಿಕ ಪೂರ್ವ ಲಂಡನ್‌ನ ಸಿಟಿ ಹಾಲ್‌ನಲ್ಲಿ ಮಾತನಾಡಿದ ಸಾದಿಕ್ ಖಾನ್, ನಾನು ಪ್ರೀತಿಸುವ ನಗರಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ಗೌರವ ಎಂದಿದ್ದಾರೆ. ಈ ಜಯವು ಇತಿಹಾಸ ಮಾತ್ರವಲ್ಲದೆ, ನಮ್ಮ ಭವಿಷ್ಯದ ನಿರೂಪಣೆಯಾಗಿದೆ. ಪ್ರತಿಯೊಬ್ಬ ಲಂಡನ್‌ ನಿವಾಸಿಗಾಗಿ ಹಸಿರು, ಸುರಕ್ಷಿತ ನಗರ ನಿರ್ಮಾಣಕ್ಕಾಗಿ ಅವಿರತ ಶ್ರಮಿಸುವುದಾಗಿ ಹೇಳಿದ್ದಾರೆ.

ಇಂಗ್ಲೆಂಡ್‌ ಕಳೆದ 8 ವರ್ಷಗಳಿಂದ ಸುಸ್ಥಿರ ಸರ್ಕಾರವಿಲ್ಲದೆ ನಲುಗುತ್ತಿದೆ. ಹಾಗಾಗಿ, ಚುನಾವಣೆ ನಡೆಸಿ ಜನರಿಗೆ ನಾಯಕರನ್ನು ಆರಿಸುವ ಅವಕಾಶ ನೀಡಬೇಕು ಎಂದು ಪ್ರಧಾನಿ ರಿಷಿ ಸುನಕ್ ಅವರಿಗೆ ಸಾದಿಕ್ ಖಾನ್ ಆಗ್ರಹಿಸಿದ್ದಾರೆ.

10 ಸ್ಥಳೀಯ ಸಂಸ್ಥೆಗಳ ಮೇಲೆ ಆಡಳಿತಾರೂಢ, ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಹಿಡಿತ ಕಳೆದುಕೊಂಡಿದ್ದು, ಭಾರಿ ಮುಖಭಂಗ ಅನುಭವಿಸಿದೆ. ಸುಮಾರು 500 ಕೌನ್ಸಿಲರ್‌ಗಳು ಸೋಲು ಅನುಭವಿಸಿದ್ದಾರೆ.

ಇದನ್ನೂ ಓದಿ : ‘ನಾಡಾ’ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read