Homeಕರ್ನಾಟಕವಿಜಯಪುರ: ಮತ ನೀಡಿಲ್ಲವೆಂದು ಬಿಜೆಪಿ ನಾಯಕನ ಬೆಂಬಲಿಗರಿಂದ ಹಲ್ಲೆ

ವಿಜಯಪುರ: ಮತ ನೀಡಿಲ್ಲವೆಂದು ಬಿಜೆಪಿ ನಾಯಕನ ಬೆಂಬಲಿಗರಿಂದ ಹಲ್ಲೆ

- Advertisement -
- Advertisement -

ವಿಜಯಪುರ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸದ ಕಾರಣಕ್ಕೆ ಆತನ ಬೆಂಬಲಿಗರು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ದೇವಕಾಂತ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ ಮೊದಲ ಬಾರಿಗೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 35 ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ 17 ವಾರ್ಡ್‌ಗಳಲ್ಲಿ ಬಿಜೆಪಿ , 10 ವಾರ್ಡ್‌ಗಳಲ್ಲಿ ಕಾಂಗ್ರೆಸ್, 1 ವಾರ್ಡ್‌ನಲ್ಲಿ ಜೆಡಿಎಸ್, 2 ವಾರ್ಡ್‌ಗಳಲ್ಲಿ ಆಲ್‌ ಇಂಡಿಯಾ ಇತ್ತಿಹಾದುಲ್ ಮುಸ್ಲಿಮೀನ್‌, 5 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸ್ಥಳೀಯ ಬಿಜೆಪಿ ನಾಯಕ ರಾಹುಲ್ ಔರಂಗಾಬಾದ್ ಅವರ ಬೆಂಬಲಿಗರು ತನಗೆ ಹಲ್ಲೆ ನಡೆಸಿದ್ದಾರೆ ಎಂದು ದೇವಕಾಂತ್‌ ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ರಾಹುಲ್ ಅವರು ಸೋತ ನಂತರ ಅವರ ಬೆಂಬಲಿಗರು ತನ್ನನ್ನು ಗುರಿಯಾಗಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಶಾಸಕರ ಖರೀದಿಗೆ ಬಿಜೆಪಿ ಯತ್ನ ಆರೋಪ: ವಿಡಿಯೊ ಪ್ರದರ್ಶಿಸಿದ ಮುಖ್ಯಮಂತ್ರಿ ಕೆಸಿಆರ್‌

ವಿಡಿಯೊದಲ್ಲಿ ಮಾತನಾಡಿರುವ ದೇವಕಾಂತ್ ಅವರು, ‘‘ನನಗೆ ಹೃದಯ ಸರ್ಜರಿ ಆಗಿದೆ ಎಂದು ಹೇಳಿದ್ರೂ ಸುಮಾರು 6 ರಿಂದ 7 ಮಂದಿ ನನಗೆ ತೀವ್ರ ಹಲ್ಲೆ ನಡೆಸಿದ್ದಾರೆ. ಅವರಿಗೆ ನನ್ನ ವಿರುದ್ಧ ಯಾವುದೆ ಹಳೆಯ ವೈಷಮ್ಯವಿರಲಿಲ್ಲ. ಆದರೆ ಅವರ ನಾಯಕನ ವಿರುದ್ಧ ಗೆದ್ದು ಬಂದ ಅಭ್ಯರ್ಥಿ ಮನೆಗೆ ಬಂದು ನನ್ನ ತಂದೆಯ ಕಾಲಿಗೆ ಬಿದ್ದು ಆಶಿರ್ವಾದ ತೆಗೆದುಕೊಂಡಿದ್ದರು. ಹೀಗಾಗಿ ಅವರಿಗೆ ಓಟ್‌ ಹಾಕಿಲ್ಲ ಎಂದು ತಿಳಿದು ಅವರ ಕಡೆಯವರು ಹಲ್ಲೆ ನಡೆಸಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಧೈರ್ಯವಿದ್ದರೆ ಬಂಧಿಸಿ’: ಬಿಜೆಪಿಗೆ ಜಾರ್ಖಂಡ್‌ ಸಿಎಂ ಹೇಮಂತ್ ಸೋರೆನ್‌ ಸವಾಲು

ಪಾಲಿಕೆಯ ಅಧಿಕಾರದ ಹಿಡಿಯಲು ಒಟ್ಟು 18 ಸದಸ್ಯರ ಬೆಂಬಲ ಬೇಕಾಗಿದ್ದು, ಬಿಜೆಪಿ 17 ವಾರ್ಡಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯ ಬೆಂಬಲ ಪಡೆದು ಬಿಜೆಪಿ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ. ಪಾಲಿಕೆಗೆ ಅಕ್ಟೋಬರ್‌ 28 ರಂದು ಚುನಾವಣೆ ನಡೆದಿದ್ದು, ಒಟ್ಟು 174 ಅಭ್ಯರ್ಥಿಗಳು ಸ್ಪರ್ಧೆಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...