ತೆರಿಗೆಗಳಲ್ಲಿ ರಾಜ್ಯದ ಪಾಲನ್ನು ಶೇಕಡಾ 50 ಕ್ಕೆ ಹೆಚ್ಚಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶನಿವಾರ ಕೇಂದ್ರ ಸರ್ಕಾರವನ್ನು ಕೋರಿದ್ದು, ರಾಜ್ಯದಲ್ಲಿ ನಗರ ಪರಿವರ್ತನೆಗೆ ಮೀಸಲಾದ ಮಿಷನ್‌ನ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ನೀತಿ ಆಯೋಗದ ಸಭೆ
ನವದೆಹಲಿಯಲ್ಲಿ ನಡೆದ ನೀತಿ ಆಯೋಗ ಸಭೆಯಲ್ಲಿ ಮಾತನಾಡಿರುವ ಬಗ್ಗೆ ಮಾಹಿತಿ ನೀಡಿರುವ ಅವರು, ”ಕೇಂದ್ರ ತೆರಿಗೆಗಳಲ್ಲಿ ರಾಜ್ಯಗಳಿಗೆ ನ್ಯಾಯಯುತವಾದ ಶೇಕಡಾ 50 ಪಾಲು ನೀಡಬೇಕು ಎಂದು ಕೇಳಿದ್ದೇನೆ. ಈ ಹಿಂದೆ ವಾಗ್ದಾನ ಮಾಡಿಲಾಗಿರುವ 41% ಕ್ಕೆ ಬದಲಾಗಿ ನಾವು ಪ್ರಸ್ತುತ ಶೇಕಡಾ 33.16 ರಷ್ಟು ಮಾತ್ರ ನಾವು ಪಡೆಯುತ್ತಿದ್ದೇವೆ” ಎಂದು ಮುಖ್ಯಮಂತ್ರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಅಮೃತ್ 2.0 ಮಾದರಿಯಲ್ಲಿ, ತಮಿಳುನಾಡು ಭಾರತದಲ್ಲಿ ಅತ್ಯಂತ ನಗರೀಕರಣಗೊಂಡ ರಾಜ್ಯವಾಗಿರುವುದರಿಂದ, ಮೀಸಲಾದ ನಗರ ಪರಿವರ್ತನೆ ಮಿಷನ್‌ನ ಅಗತ್ಯವನ್ನು ನಾನು ಒತ್ತಿ ಹೇಳಿದ್ದೇನೆ” ಎಂದು ಅವರು ಹೇಳಿದ್ದಾರೆ.
“ಅಲ್ಲದೆ, ರಾಷ್ಟ್ರೀಯ ಸುಸಂಬದ್ಧತೆ ಮತ್ತು ಪ್ರಾದೇಶಿಕ ಗೌರವಕ್ಕಾಗಿ ಕಾವೇರಿ, ವೈಗೈ ಮತ್ತು ತಾಮಿರಬರಾಣಿ ನದಿಗಳಿಗೆ ಕ್ಲೀನ್‌ಗಂಗಾ ಶೈಲಿಯ ಯೋಜನೆಯನ್ನು ನೀಡಬೇಕು ಎಂದು ನಾನು ಒತ್ತಾಯಿಸಿದೆ” ಎಂದು ಸ್ಟಾಲಿನ್ ಹೇಳಿದ್ದಾರೆ. ನೀತಿ ಆಯೋಗದ ಸಭೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಹೇಳಿಕೆ ನೀಡಿದ್ದ ಸಚಿವ ನಾಪತ್ತೆ | ಕಾಂಗ್ರೆಸ್‌ನಿಂದ ಪೋಸ್ಟರ್ ಬಿಡುಗಡೆ
ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಹೇಳಿಕೆ ನೀಡಿದ್ದ ಸಚಿವ ನಾಪತ್ತೆ | ಕಾಂಗ್ರೆಸ್‌ನಿಂದ ಪೋಸ್ಟರ್ ಬಿಡುಗಡೆ