ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಕುರಿತು ನಟ ಸೂರ್ಯ ಟೀಕೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಯಾವುದೇ ಪ್ರಕರಣವನ್ನು ತೆಗೆದುಕೊಳ್ಳುವುದಿಲ್ಲ ಎಂದು ಚೆನ್ನೈ ಹೈಕೋರ್ಟ್ ಹೇಳಿದೆ.
ಕಳೆದ ವಾರದ ನಡೆದ ನೀಟ್ ಪರೀಕ್ಷೆಗಿಂತಲೂ ಮುಂಚೆ, ಪರೀಕ್ಷೆಯನ್ನು ಬರೆಯಲು ಹೊರಟಿದ್ದ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ನಟ ಸೂರ್ಯ “ಕೊರೊನಾ ಭಯದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯವನ್ನು ನೀಡುತ್ತಿರುವ ನ್ಯಾಯಾಲಯವು ವಿದ್ಯಾರ್ಥಿಗಳಿಗೆ ಭಯವಿಲ್ಲದೆ ಪರೀಕ್ಷೆಗಳನ್ನು ಪರೀಕ್ಷಿಸಲು ಆದೇಶಿಸುತ್ತದೆ” ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಜೆಇಇ-ನೀಟ್ ‘ಮನುನೀತಿ’ ಪರೀಕ್ಷೆಗಳಿದ್ದಂತೆ-ತಮಿಳು ನಟ ಸೂರ್ಯ ಟ್ವೀಟ್
“ನೀಟ್‌ನಂತಹ ಪರೀಕ್ಷೆಗಳು ವಿದ್ಯಾರ್ಥಿಗಳ ಅವಕಾಶಗಳನ್ನು ಮಾತ್ರವಲ್ಲದೆ ಅವರ ಜೀವನವನ್ನೂ ಸಹ ಕಸಿದುಕೊಳ್ಳುತ್ತವೆ ಎಂದಿದ್ದ ಅವರು, ಕೊರೊನಾ ಸೋಂಕಿನಂತಹ ಸಾಂಕ್ರಾಮಿಕದ ಸಮಯದಲ್ಲೂ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಮತ್ತು ಅವರ ಯೋಗ್ಯತೆಯನ್ನು ಸಾಬೀತುಪಡಿಸಲು ಒತ್ತಾಯಿಸಲ್ಪಟ್ಟಿದ್ದು ನೋವಿನ ಸಂಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದರು.
My heart goes out to the three families..! Can't imagine their pain..!! pic.twitter.com/weLEuMwdWL
— Suriya Sivakumar (@Suriya_offl) September 13, 2020
ಅಲ್ಲದೆ ಅಸಮಾನತೆಯನ್ನು ಸೃಷ್ಟಿಸುವ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಶಾಸನಬದ್ಧಗೊಳಿಸುತ್ತಿದೆ. ಬಡ ವಿದ್ಯಾರ್ಥಿಗಳ ವಾಸ್ತವತೆ ತಿಳಿದಿಲ್ಲದವರು ಶೈಕ್ಷಣಿಕ ನೀತಿಗಳನ್ನು ರೂಪಿಸುತ್ತಿದ್ದಾರೆ ಎಂದು ಹೇಳಿದ್ದರು.
ನಟ ಸೂರ್ಯ ಅವರ ವಿರುದ್ಧ ಚೆನ್ನೈ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಮಣ್ಯಂ ಮುಖ್ಯ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಸಾಹಿಗೆ ಪತ್ರ ಬರೆದು, “ಸೂರ್ಯ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ” ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದ್ದರು.
ಇದನ್ನೂ ಓದಿ: ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ
ಆದರೆ ನಟ ಸೂರ್ಯ ಅವರನ್ನು ಬೆಂಬಲಿಸಿ ಹೈಕೋರ್ಟ್ ಮಾಜಿ ನ್ಯಾಯಾಧೀಶರುಗಳಾದ ಕೆ. ಚಂದ್ರು, ಕೆ.ಎಂ. ಪಾಷಾ, ಡಿ. ಸ್ವಾತಂತ್ರ್ಯ, ಡಿ. ಹರಿಪ್ರಂದಮನ್, ಕೆ. ಕಣ್ಣನ್, ಜಿ.ಎಂ. ಅಕ್ಬರ್ ಅಲಿ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು, ಸೂರ್ಯ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದ್ದರು.
ಈ ಮಧ್ಯೆ ನ್ಯಾಯಾಮೂರ್ತಿ ಸುಬ್ರಮಣ್ಯಂ ಬರೆದ ಪತ್ರವನ್ನು ತಮಿಳುನಾಡಿನ ಅಡ್ವೊಕೇಟ್ ಜನರಲ್‌ಗೆ ಕಳುಹಿಸಲಾಗಿದ್ದು, ಅವರ ಅಭಿಪ್ರಾಯವನ್ನು ಕೋರಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಈ ವಿಷಯದಲ್ಲಿ ಯಾವುದೇ ಕ್ರಮಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣವು ಮುಖ್ಯ ನ್ಯಾಯಮೂರ್ತಿ ಎ.ಪಿ. ಸಾಹಿ, ಸೆಂಥಿಲ್‌ಕುಮಾರ್, ರಾಮಮೂರ್ತಿ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಇಂದು ವಿಚಾರಣೆಗೆ ಬಂದಿದ್ದು, ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ತೆಗೆದುಕೊಳ್ಳುವುದಿಲ್ಲ ಎಂದು ಅದು ಹೇಳಿದೆ ಮತ್ತು ಆರೋಪಗಳನ್ನು ತಿರಸ್ಕರಿಸಿದೆ.
ಸೂರ್ಯನಂತಹ ಜನರು ನ್ಯಾಯಾಂಗದ ಮೇಲೆ ಟೀಕೆಗಳನ್ನು ಮಾಡುವ ಮೊದಲು ಅದು ನ್ಯಾಯಸಮ್ಮತವೇ ಅಥವಾ ಇಲ್ಲವೇ ಎಂದು ಯೋಚಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ವಿಡಿಯೋ| ಸೂರ್ಯಸ್ನಾನದಿಂದ ಕೊರೊನ ಬರೋಲ್ಲ : ಕೇಂದ್ರ ಸಚಿವರ ಹೇಳಿಕೆಗೆ ವ್ಯಾಪಕ ಟೀಕೆ


