ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾದ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಯ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಬಾಂಬೆ ಹೈಕೋರ್ಟ್ ನಿನ್ನೆ ಆಲಿಸಿದ್ದು, ವಿಚಾರಣೆಯನ್ನು ಇಂದು ಮಧ್ಯಾಹ್ನ 12 ಗಂಟೆಗೆ ಮುಂದೂಡಿದೆ.
ಅರ್ನಬ್ ಅರ್ಜಿ ಸಲ್ಲಿಸಿ ಒಂದು ದಿನದೊಳಗಾಗಿ ವಿಚಾರಣೆ ನಡೆದಿದ್ದು, ಕಾಶ್ಮೀರದಲ್ಲಿ ಸುಮಾರು 600 ಹೇಬಿಯಸ್ ಕಾರ್ಪಸ್ ಅರ್ಜಿಗಳಲ್ಲಿ 99% ಅರ್ಜಿಗಳು ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಬಾಕಿ ಇದೆ. ಇದನ್ನು ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದು, “ಕೆಲವು ಜನರು ಇತರರಿಗಿಂತ ಹೆಚ್ಚು ಸಮಾನರು! ಕಾನೂನಿನ ಮುಂದೆ ಸಮಾನತೆಯ ತತ್ವವನ್ನು ಮರೆತುಬಿಡಿ!” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಮ್ಮುಕಾಶ್ಮೀರದ ಹೈಕೋರ್ಟ್‌ನಲ್ಲಿ 99% ಹೇಬಿಯಸ್ ಕಾರ್ಪಸ್ ಅರ್ಜಿಗಳು ಇನ್ನೂ ಬಾಕಿ
ಅಧ್ಯಾಪಕಿಯಾಗಿರುವ ಪ್ರಿಯಾ ಪ್ರಕಾಶ್, “ಅರ್ನಬ್ ಮನವಿ ಒಂದು ದಿನದೊಳಗೆ ವಿಚಾರಣೆಗೆ ಬಂದಿದೆ. ಆದರೆ ಕಾಶ್ಮೀರದಲ್ಲಿ, 600 ಮನವಿಗಳಲ್ಲಿ 99% ಅರ್ಜಿಗಳು, 2019 ರ ಆಗಸ್ಟ್ 6 ರಿಂದ ಬಾಕಿ ಉಳಿದಿದೆ. ಕೆಲವು ಜನರು ಇತರರಿಗಿಂತ ಹೆಚ್ಚು ಸಮಾನರು! ಕಾನೂನಿನ ಮುಂದೆ ಸಮಾನತೆಯ ತತ್ವವನ್ನು ಮರೆತುಬಿಡಿ!” ಎಂದು ಕಿಡಿ ಕಾರಿದ್ದಾರೆ.
Arnab's Habeas Corpus plea has come up for hearing within a day. Whereas in Kashmir, 99% of the 600 Habeas Corpus pleas have been pending since 6th August, 2019 – that is more than a year. Some people are more equal than others! Forget the principle of equality before law!
— Priya Prakash (@praxpriya) November 7, 2020
ಪತ್ರಕರ್ತ ದೆಬಾಶಿಶ್ ರಾಯ್ ಚೌಧರಿ, “ಕಾಶ್ಮೀರದಿಂದ ಸಲ್ಲಿಕೆಯಾಗಿರುವ ಸಾವಿರಾರು ಹೇಬಿಯಸ್ ಕಾರ್ಪಸ್ ಪ್ರಕರಣಗಳು ಒಂದು ವರ್ಷ ಆಗಿಯೂ ಗಮನಿಸದ ನ್ಯಾಯಾಲಯಗಳು, ಅರ್ನಾಬ್ ಪ್ರಕರಣವನ್ನು ಒಂದು ದಿನದ ವಿಳಂಬವಿಲ್ಲದೆ ಹೇಗೆ ನಡೆಯುತ್ತಿದೆ ಎಂಬುದು ಅದ್ಭುತವಾಗಿದೆ” ಎಂದಿರುವ ಅವರು, “ಒಂದು ಭಾರತ, ಒಂದೇ ಕಾನೂನು? ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
Amazing how the courts always pounce on Arnab cases without a day's delay while thousands of habeas corpus cases from Kashmir lie unattended even after a year (https://t.co/f5VOU2Mydd) One India, one law? https://t.co/yGHVGu5xDZ
— Debasish Roy Chowdhury (@Planet_Deb) November 5, 2020
ಇದನ್ನೂ ಓದಿ: ಕಾಶ್ಮೀರದ ಕತ್ತಲೆಗೆ ಒಂದು ವರ್ಷ: ಸಾಧಿಸಿದ್ದಾದರೂ ಏನು?
ಕತೆಗಾರ ಅಲಿ, “ಅರ್ನಬ್ ಗೋಸ್ವಾಮಿಯ ಮನವಿಯನ್ನು ನ್ಯಾಯಾಲಯಗಳಲ್ಲಿ 24 ಗಂಟೆಗಳ ಒಳಗಾಗಿ ವಿಚಾರಣೆ ನಡೆಸಲಾಗುತ್ತದೆ. ಸಾವಿರಾರು ಕಾಶ್ಮೀರಿ ನಾಗರಿಕರ 600 ಹೇಬಿಯಸ್ ಕಾರ್ಪಸ್ ಮನವಿಗಳು 1 ವರ್ಷದ ನಂತರವೂ ವಿಚಾರಣೆಗೆ ಕಾಯುತ್ತಿವೆ. ಒಬ್ಬರೂ ಕಾನೂನಿನ ಬಗ್ಗೆ ಮಾತನಾಡಬಾರದು” ಎಂದು ಹೇಳಿದ್ದಾರೆ.
Arnab Goswami's habeas corpus plea is heard in the courts in 24 Hours.
600 habeas corpus pleas of thousands of Kashmiri citizens under preventive detention are waiting to be heard even after 1 YEAR.
Well one shall not speak about Law as it is ………..
— TheTongueOfTheMind (@ali2705) November 6, 2020
ಪೆರಿಯಾರಿಸ್ಟ್ ಟಿಪಿಎನ್ ಸುರೇಶ್, “ಈ ದೇಶವು ನಾಶವಾಗಿ ಹೋದರೆ ಏನು?” ಎಂದು ತಮಿಳಿನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
இந்த நாடு நாசமாய் போனால் தான் என்ன?
Arnab Goswami's habeas corpus plea is heard in the courts in 24 Hours.600 habeas corpus pleas of thousands of Kashmiri citizens under preventive detention are waiting to be heard even after 1 YEAR.
— தி.பொ.ந.சுரேஷ்குமார்… (@tpnsuresh1975) November 6, 2020
ಸಹಾಯಕ ಪ್ರಾಧ್ಯಾಪಕ ಹಾಗೂ ಲೇಖಕ ನಿಸ್ಸಿಮ್ ಮಣ್ಣತುಕ್ಕರೆನ್ ಅವರು ಕೂಡಾ, ಸಾವಿರಾರು ಕಾಶ್ಮೀರಿ ನಾಗರಿಕರ 600 ಮನವಿಗಳು 1 ವರ್ಷದ ನಂತರವೂ ವಿಚಾರಣೆಗೆ ಕಾಯುತ್ತಿವೆ ಎಂದು ಗಮನ ಸೆಳೆದಿದ್ದಾರೆ.
Arnab Goswami's habeas corpus plea is heard in the courts in 24 Hours.
600 habeas corpus pleas of thousands of Kashmiri citizens under preventive detention are waiting to be heard even after 1 YEAR.
— NissimMannathukkaren (@nmannathukkaren) November 5, 2020
ಇದನ್ನೂ ಓದಿ: ಕೇಂದ್ರ ಸರ್ಕಾರ ನಮ್ಮಿಂದ ಕಿತ್ತುಕೊಂಡದ್ದನ್ನು ಮರಳಿ ಪಡೆಯಬೇಕಾಗಿದೆ: ಮೆಹಬೂಬಾ ಮುಫ್ತಿ
ವಿಜಯ್. ಜೆ ಎನ್ನುವವರು ಕೂಡಾ ಪ್ರಿಯಾ ಪ್ರಕಾಶ್ ಅವರ ಮಾತನ್ನೇ ಪುನರುಚ್ಚರಿಸಿದ್ದಾರೆ.
Arnab's Habeas Corpus plea has come up for hearing within a day. Whereas in Kashmir, 99% of the 600 Habeas Corpus pleas have been pending since 6th August, 2019 – that is more than a year. Some people are more equal than others! Forget the principle of equality before law!
— Vijay J (@VijayJ04512385) November 7, 2020
Arnab Goswami's habeas corpus plea is heard in the courts in 24 Hours.
600 habeas corpus pleas of thousands of Kashmiri citizens under preventive detention are waiting to be heard even after more than one YEAR.@rashtrapatibhvn
— Ali (@Ali004309) November 5, 2020
Arnab Goswami's habeas corpus plea is heard in the courts in 24 Hours.
600 habeas corpus pleas of thousands of Kashmiri citizens under preventive detention are waiting to be heard even after 1 YEAR.
— Syed Habib Kazmi (@Syedhabib313) November 6, 2020
ಇದನ್ನೂ ಓದಿ:ಹಿಟ್ಲರನ ಜರ್ಮನಿಯಲ್ಲಿ ನಾಜೀಗಳ ಕಾಲಿಗೆರಗಿತ್ತು ನ್ಯಾಯಾಂಗ!